ಶುಗರ್ ಅಥವಾ ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯವಾಗುತ್ತದೆ. ಅದಕ್ಕೆ ಮಧುಮೇಹಿಗಳು ತುಂಬಾ ಜಾಗ್ರತೆ ವಹಿಸಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಮತೋಲಗೊಳಿಸಲು ಹೆಣಗಾಡುವುದು ತುಂಬಾ ಕಾಣುತ್ತೇವೆ. ಅದಕ್ಕೆ ಸಂಬಂಧಿಸಿದಂತೆ ಅವರ ಮನೆಯವರು ಕೂಡ ಅವರ ಆರೋಗ್ಯವನ್ನು ಕಾಪಾಡುವುದಕ್ಕಾಗಿ ಅಷ್ಟಿಷ್ಟು ಸಾಹಸ ಮಾಡುವುದಿಲ್ಲ. ಆದರೆ ಅವರುಗಳು ಯಾವ ಆಹಾರ ತಿನ್ನಬೇಕು ಬಿಡಬೇಕು ಅನ್ನೋ ಜಂಜಾಟದಲ್ಲಿಯ ಕೆಲವರು ದಿನವಿಡೀ ವರ್ಷಗಟ್ಟಲೆ ಹರಸಾಹನ ಪಡುವುದುಂಟು. ಆದರೆ ಇದಕ್ಕೆ ಇಲ್ಲಿದೆ ಸೂಕ್ತ ಪರಿಹಾರ ಶುಗರ್ ಪೇಶೆಂಟ್ ಯಾರ ಯಾರ ಮನೆಯಲ್ಲಿದ್ದಾರೋ ಅವರೆಲ್ಲಾ ಓದಲೇ ಬೇಕಾದ ಸುದ್ದಿ ಇದಾಗಿದೆ.
ಈ ಕೆಳಗೆ ಶುಗರ್ ಪೇಶೆಂಟ್‌ಗಳು ಯಾವೆಲ್ಲಾ ಆಹಾರ ತಿನ್ನಬಹುದು ಎಂಬುದನ್ನು ಗಮನಿಸೋಣ..
ಮೊದಲನೇಯದಾಗಿ 1. ತರಕಾರಿಗಳು: ಅದರಲ್ಲೂ ಕಡಿಮೆ ಕಾರ್ಬೋಹೈಡ್ರೇಟ್‌ಗಳು ಮತ್ತು ಹೆಚ್ಚು ಫೈಬರ್ ತುಂಬಿದ ಆಹಾರಗಳನ್ನು ಸ್ವೀಕರಿಸಬೇಕು. ಇನ್ನು ತರಕಾರಿಗೆ ಸಂಬಂಧಿಸಿದಂತೆ ಪಾಲಕ್, ಬ್ರಾಕೊಲಿ, ಮೆಂತೆ ಸೊಪ್ಪು,ಕ್ಯಾಬೇಜ್‌ನಂತಹ ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸುವುದರಿಂದ ಶುಗರ್ ಪೇಶೆಂಟ್‌ಗಳು ತಮ್ಮ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದಾಗಿದೆ. ಇದರ ಜೊತೆಗೆ ಹಾಗಲಕಾಯಿ, ಹೂಕೋಸು, ಕುಂಬಳಕಾಯಿ, ಬೀನ್ಸ್, ಕ್ಯಾರೇಟ್‌ನಂತಹ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ತರಕಾರಿಗಳನ್ನು ಬಳಸಬೇಕು.
ಎರಡನೇಯದಾಗಿ 2. ಧಾನ್ಯಗಳು: ರಾಗಿ, ಜೋಳ, ಬಾರ್ಲಿ, ಬ್ರೌನ್ ರೈಸ್, ಓಟ್ಸ್‌ನಂತಹ ಧಾನ್ಯಗಳನ್ನು ಸ್ವೀಕರಿಸಬೇಕು.ಈ ಮೂಲಗಳನ್ನು ರೊಟ್ಟಿ ಮಾಡಿ ಓಟ್ಸ್‌ನಿಂದ ವಿಭಿನ್ನ ಡಿಶ್‌ಗಳನ್ನು ಮಾಡಿ ಶುಗರ್ ಇರುವವರಿಗೆ ನೀಡಬುದಾಗಿದೆ.
ಮೂರನೆಯದಾಗಿ 3.ಫೈಬರ್ ಸಮೃದ್ಧ ಕಾಳುಗಳ ಬಳಕೆ: ಕಡಲೆಕಾಯಿ, ರಾಜಮಾ, ಕಾಳು, ತೊಗರಿಬೇಳೆ, ಹೆಸರುಬೇಳೆ, ಚವಳಿ (ಅಲಸಂದೆ) ಕಾಳುಗಳನ್ನು ಹೆಚ್ಚಾಗಿ ಬಳಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸುವಲ್ಲಿ ಮತ್ತು ಸಮತೋಲನದಲ್ಲಿರಿಸಲು ಉಪಯುಕ್ತವಾಗಿದೆ.
ಈ ರೀತಿಯಾದ ಆಹಾರಗಳನ್ನು ಶುಗರ್ ಇರುವವರಿಗೆ ನೀಡುವುದರಿಂದ ಅವರನ್ನು ಆರೋಗ್ಯವಾಗಿ ಇಡಬಹುದಾಗಿದೆ. ಮುಖ್ಯವಾಗಿ ಸಕ್ಕರೆ ಕಾಯಿಲೆ ಇರುವವರಿಗೆ ಕೆಲವು ವಿಟಮಿನ್‌ಗಳನ್ನು ನೀಡುವುದು ಬಹಳ ಮುಖ್ಯವಾಗುತ್ತದೆ.ಅವುಗಳ್ಯಾವುವು ಎಂದು ಗಮನಿಸುವುದಾದರೆ: 1.ವಿಟಮಿನ್ D ಬಹಳ ಉಪಯುಕ್ತವಾಗಿದೆ.ಈ ವಿಟಮಿನ್ ವಿಟಮಿನ್ D ಇನ್ಸುಲಿನ್ ಸಂವೇದನೆಯನ್ನು ಸುಧಾರಿಸಲು ಮತ್ತು ರಕ್ತದ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಮೂಳೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉಪಯುಕ್ತವಾಗಿದೆ.
2.ವಿಟಮಿನ್ B ಕಾಂಪ್ಲೆಕ್ಸ್: ಮೀನು, ಮಾಂಸ, ಮೊಟ್ಟೆ, ಚಿಕನ್, ಆಲೂಗಡ್ಡೆ ಇಂತಹ ಅಂಶಗಳನ್ನು ಸೇವಿಸುವುದರಿಂದ ಶುಗರ್ ಪೇಶೆಂಟ್‌ಗಳನ್ನು ಹೆಚ್ಚು ಆರೋಗ್ಯಯುತವಾಗಿ ಇರಿಸಬಹುದಾಗಿದೆ.
3. ವಿಟಮಿನ್ C: ಆಂಟಿಆಕ್ಸಿಡೆಂಟ್ ಗುಣಗಳಿಂದಾಗಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ, ರಕ್ತನಾಳಗಳ ಆರೋಗ್ಯವನ್ನು ಸುಧಾರಿಸುತ್ತದೆ, ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕಿತ್ತಳೆ, ಮೊಸಂಬಿ, ಗ್ವಾವ, ಕ್ಯಾಪ್ಸಿಕಂ, ಟೊಮೇಟೊ, ಪಾಲಕ್‌ನಂತಹ ತರಕಾರಿಗಳನ್ನು ತಿನ್ನುವುದರಿಂದ ಬಹಳ ಉಪಯುಕ್ತವಾಗಿದೆ.
UNITED COLORS OF BENETTON Polo T Shirt | Collar Tshirts | T-Shirt for Men | Half Sleeves Plain T Shirt | T-Shirt |Tshirt for Men Stylish | Men's Tshirt | Regular Fit Men T-Shirt
ಈ ರೀತಿಯಾಗಿ ಆಹಾರದಲ್ಲಿ ಒಂದಿಷ್ಟು ಸರಿಯಾದ ಪಥ್ಯವನ್ನು ಆಚರಿಸುವುದರಿಂದ ಶುಗರ್ ಪೇಶಂಟ್‌ಗಳ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸಕ್ರಿಯವಾಗಿ ಕಡಿಮೆಗೊಳಿಸಬಹುದಾಗಿದೆ.