Skip to main content
ವಿಡಿಯೋ
1/2
technology

ಭವಿಷ್ಯದ ಇಂಟರ್ನೆಟ್ – ಮೆಟಾವರ್ಸ್ ಕುರಿತು ನಿಮಗೆ ತಿಳಿಯಬೇಕಾದ ವಿಷಯಗಳು

By Varsha T M
ಭವಿಷ್ಯದ ಇಂಟರ್ನೆಟ್ – ಮೆಟಾವರ್ಸ್ ಕುರಿತು ನಿಮಗೆ ತಿಳಿಯಬೇಕಾದ ವಿಷಯಗಳು

ಮೆಟಾವರ್ಸ್ ಅಂದರೆ ಒಂದು ವರ್ಚುವಲ್ ಜಗತ್ತು. ಅಂದರೆ, ಇಂಟರ್ನೆಟ್, ವರ್ಚುವಲ್ ರಿಯಾಲಿಟಿ (VR), ಆಗ್ಗ್ಮೆಂಟೆಡ್ ರಿಯಾಲಿಟಿ (AR) ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾದ ಡಿಜಿಟಲ್ ಲೋಕ. ಇಲ್ಲಿ ನಾವು ನಮ್ಮದೇ ಡಿಜಿಟಲ್ ಅವತಾರ ರಚಿಸಿ ಬದುಕಬಹುದು. ಮನೆ ಕಟ್ಟಬಹುದು, ಜಮೀನು ಖರೀದಿಸಬಹುದು, ಕೆಲಸ ಮಾಡಬಹುದು, ಸ್ನೇಹಿತರೊಂದಿಗೆ ಚಾಟ್ ಮಾಡಬಹುದು, ಸಂಗೀತ ಕಛೇರಿ ಅಥವಾ ಕ್ರೀಡಾ ಪಂದ್ಯಗಳನ್ನು ವೀಕ್ಷಿಸಬಹುದು. ನಿಜ ಜೀವನದಲ್ಲಿ ಮಾಡುವ ಕೆಲಸಗಳನ್ನು ಇಲ್ಲಿ ಆನ್‌ಲೈನ್ ಜಗತ್ತಿನಲ್ಲಿ ಅನುಭವಿಸುವ ಅವಕಾಶವೇ ಮೆಟಾವರ್ಸ್.

ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿದಿನವೂ ಹೊಸ ತಂತ್ರಜ್ಞಾನಗಳು ಜನರ ಬದುಕನ್ನು ಬದಲಿಸುತ್ತಿವೆ. ಇಂಟರ್ನೆಟ್ ಬಂದಾಗ ಜಗತ್ತು ಸಂಪೂರ್ಣವಾಗಿ ಪರಿವರ್ತನೆ ಕಂಡಿತು. ಈಗ ಅದೇ ರೀತಿಯ ಮತ್ತೊಂದು ಕ್ರಾಂತಿ ಮೆಟಾವರ್ಸ್ ಎಂಬ ಹೆಸರಿನಲ್ಲಿ ಬೆಳೆಯುತ್ತಿದೆ. ತಜ್ಞರ ಪ್ರಕಾರ ಇದು “ಇಂಟರ್ನೆಟ್‌ನ ಮುಂದಿನ ಹಂತ” ಎಂದು ಪರಿಗಣಿಸಲಾಗಿದೆ. ಹಾಗಾದರೆ, ಮೆಟಾವರ್ಸ್ ಅಂದ್ರೆ ಏನು? ಅದು ನಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ?

Meta Quest 3 512GB - Breakthrough Mixed Reality - Powerful Performance — Asgard’s Wrath 2 and Meta Quest + Bundle

ಮೆಟಾವರ್ಸ್ ಎಂದರೇನು?

ಮೆಟಾವರ್ಸ್ ಅಂದರೆ ಒಂದು ವರ್ಚುವಲ್ ಜಗತ್ತು. ಅಂದರೆ, ಇಂಟರ್ನೆಟ್, ವರ್ಚುವಲ್ ರಿಯಾಲಿಟಿ (VR), ಆಗ್ಗ್ಮೆಂಟೆಡ್ ರಿಯಾಲಿಟಿ (AR) ತಂತ್ರಜ್ಞಾನಗಳನ್ನು ಬಳಸಿ ನಿರ್ಮಿಸಲಾದ ಡಿಜಿಟಲ್ ಲೋಕ. ಇಲ್ಲಿ ನಾವು ನಮ್ಮದೇ ಡಿಜಿಟಲ್ ಅವತಾರ ರಚಿಸಿ ಬದುಕಬಹುದು. ಮನೆ ಕಟ್ಟಬಹುದು, ಜಮೀನು ಖರೀದಿಸಬಹುದು, ಕೆಲಸ ಮಾಡಬಹುದು, ಸ್ನೇಹಿತರೊಂದಿಗೆ ಚಾಟ್ ಮಾಡಬಹುದು, ಸಂಗೀತ ಕಛೇರಿ ಅಥವಾ ಕ್ರೀಡಾ ಪಂದ್ಯಗಳನ್ನು ವೀಕ್ಷಿಸಬಹುದು. ನಿಜ ಜೀವನದಲ್ಲಿ ಮಾಡುವ ಕೆಲಸಗಳನ್ನು ಇಲ್ಲಿ ಆನ್‌ಲೈನ್ ಜಗತ್ತಿನಲ್ಲಿ ಅನುಭವಿಸುವ ಅವಕಾಶವೇ ಮೆಟಾವರ್ಸ್.

ಮೆಟಾವರ್ಸ್ ಹೇಗೆ ಪ್ರಚಾರಕ್ಕೆ ಬಂತು?

2021ರಲ್ಲಿ Facebook ತನ್ನ ಹೆಸರನ್ನು Meta ಎಂದು ಬದಲಾಯಿಸಿತು. ಮಾರ್ಕ್ ಝುಕರ್‌ಬರ್ಗ್ ಮೆಟಾವರ್ಸ್‌ನ್ನು “ಭವಿಷ್ಯದ ಇಂಟರ್ನೆಟ್” ಎಂದು ಘೋಷಿಸಿದ ನಂತರ ಈ ಶಬ್ದ ಜಗತ್ತಿನಾದ್ಯಂತ ಸಂಚಲನ ಮೂಡಿಸಿತು. ಅದಾದ ಬಳಿಕ Google, Microsoft, Nvidia ಮುಂತಾದ ದೊಡ್ಡ ಕಂಪನಿಗಳು ಈ ಕ್ಷೇತ್ರದಲ್ಲಿ ಹೂಡಿಕೆ ಪ್ರಾರಂಭಿಸಿವೆ. ವಿಶ್ವದಾದ್ಯಂತ ಅನೇಕ ಸ್ಟಾರ್ಟ್‌ಅಪ್ ಕಂಪನಿಗಳು ಮೆಟಾವರ್ಸ್ ಆಧಾರಿತ ಆಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಮೆಟಾವರ್ಸ್‌ನ ಆರ್ಥಿಕತೆ

ಮೆಟಾವರ್ಸ್‌ನಲ್ಲಿ ಕೇವಲ ಆಟವಾಡೋದು ಅಥವಾ ಮನರಂಜನೆ ಮಾತ್ರವಲ್ಲ, ಡಿಜಿಟಲ್ ಆಸ್ತಿ ಮಾರುಕಟ್ಟೆ ಕೂಡ ರೂಪುಗೊಂಡಿದೆ. ಜನರು ಇಲ್ಲಿ ಡಿಜಿಟಲ್ ಜಮೀನು, ಮನೆ, ಕಚೇರಿ, ಅಂಗಡಿಗಳು ಖರೀದಿಸುತ್ತಿದ್ದಾರೆ. ಕೆಲವೊಂದು ಜಾಗಗಳು ಕೋಟ್ಯಂತರ ರೂಪಾಯಿಗೆ ಮಾರಾಟವಾಗಿವೆ. ಈ ವ್ಯವಹಾರಗಳು NFT (Non-Fungible Token) ಮತ್ತು Blockchain ತಂತ್ರಜ್ಞಾನಗಳ ಆಧಾರದ ಮೇಲೆ ನಡೆಯುತ್ತವೆ. ತಜ್ಞರ ಪ್ರಕಾರ 2030ರ ವೇಳೆಗೆ ಮೆಟಾವರ್ಸ್ ಆರ್ಥಿಕತೆ ಟ್ರಿಲಿಯನ್ ಡಾಲರ್ ಮೌಲ್ಯ ತಲುಪುವ ಸಾಧ್ಯತೆ ಇದೆ.

ಮೆಟಾವರ್ಸ್ ಅನ್ನು ಹಲವು ಕ್ಷೇತ್ರಗಳಲ್ಲಿ ಬಳಸಬಹುದಾಗಿದೆ ಮನರಂಜನೆಯಲ್ಲಿ 3D ಗೇಮಿಂಗ್, ಲೈವ್ ಕಾನ್ಸರ್ಟ್, ಚಲನಚಿತ್ರ ಪ್ರದರ್ಶನ, ಶಿಕ್ಷಣದಲ್ಲಿ ವರ್ಚುವಲ್ ಕ್ಲಾಸ್‌ರೂಮ್‌ಗಳು, ಲ್ಯಾಬ್ ಸಿಮ್ಯುಲೇಷನ್‌ಗಳು, ಉದ್ಯೋಗದಲ್ಲಿ ಆನ್‌ಲೈನ್ ಆಫೀಸ್‌ಗಳು, ವರ್ಚುವಲ್ ಮೀಟಿಂಗ್‌ಗಳು, ಹೂಡಿಕೆ ಮತ್ತು ವ್ಯವಹಾರಗಳಲ್ಲಿ ಕ್ರಿಪ್ಟೋ, NFT ಮಾರಾಟ, ಡಿಜಿಟಲ್ ಆಸ್ತಿ ಹೂಡಿಕೆ, ಆರೋಗ್ಯ ಕ್ಷೇತ್ರದಲ್ಲಿ ವೈದ್ಯಕೀಯ ತರಬೇತಿ, ರೋಬೋಟಿಕ್ ಶಸ್ತ್ರಚಿಕಿತ್ಸೆಯ ಸಿಮ್ಯುಲೇಷನ್ ಗಳಲ್ಲಿ ಬಳಸುತ್ತಾರೆ.

ಮೆಟಾವರ್ಸ್‌ಗೆ ಅವಕಾಶಗಳಷ್ಟು ಸವಾಲುಗಳೂ ಇವೆ, ಗೌಪ್ಯತೆ ಮತ್ತು ಭದ್ರತೆ: ಡಿಜಿಟಲ್ ಜಗತ್ತಿನಲ್ಲಿ ಡೇಟಾ ಲೀಕ್ ಅಪಾಯ, ವ್ಯಾಸನ (Addiction): ಜನರು ಹೆಚ್ಚು ಸಮಯ ಕಳೆಯುವ ಸಾಧ್ಯತೆ, ಡಿಜಿಟಲ್ ಅಸಮಾನತೆ: ಎಲ್ಲರಿಗೂ ತಂತ್ರಜ್ಞಾನ ಲಭ್ಯವಿಲ್ಲ, ನಿಯಂತ್ರಣದ ಕೊರತೆ: ಕಾನೂನು ಮತ್ತು ನಿಯಮಗಳು ಇನ್ನೂ ಸ್ಪಷ್ಟವಾಗಿಲ್ಲ.

ಮೆಟಾವರ್ಸ್ ಇನ್ನೂ ಆರಂಭದ ಹಂತದಲ್ಲಿದೆ. ಆದರೆ, ಮುಂದಿನ ದಶಕದಲ್ಲಿ ಇದು ಶಿಕ್ಷಣ, ಉದ್ಯೋಗ, ಮನರಂಜನೆ, ವ್ಯವಹಾರ ಎಲ್ಲ ಕ್ಷೇತ್ರಗಳಲ್ಲೂ ಕ್ರಾಂತಿ ತರಬಹುದು. ನಿಜ ಜೀವನದಂತೆಯೇ ಡಿಜಿಟಲ್ ಜೀವನಕ್ಕೂ ಸಮಾನ ಮಹತ್ವ ಸಿಗಬಹುದಾದ ಕಾಲ ಬಂದಿದೆ. ಹೀಗಾಗಿ, ಮೆಟಾವರ್ಸ್ ಕೇವಲ ಒಂದು ಟೆಕ್ ಟ್ರೆಂಡ್ ಅಲ್ಲ – ಅದು ಭವಿಷ್ಯದ ಡಿಜಿಟಲ್ ಸಮಾಜದ ಅಡಿಪಾಯ.