ರಕ್ತದೊತ್ತಡ ಅಥವಾ ಬಿ.ಪಿ ಎನ್ನುವುದು ಇಂದಿನ ಜೀವನದಲ್ಲಿ ಸರ್ವೇ ಸಾಮಾನ್ಯವಾದದ್ದಾಗಿದೆ. ಇದನ್ನು ನಿಯಂತ್ರಿಸಲೆಂದೇ ಹಲವಾರು ಮಾರ್ಗಗಳನ್ನು ಹುಡುಕಿ ಬಸವಳಿದು ಹೋಗಿರುವವರು ಇದ್ದಾರೆ. ಆದರೆ ಈಗ ಅದಕ್ಕೆಲ್ಲಾ ಫುಲ್‌ಸ್ಟಾಪ್ ಹಾಕಿ ಈ ಸುದ್ದಿ ನೋಡೋದು ಮಾತ್ರ ಮರೆಯಬೇಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಇಲ್ಲಿದೆ ನೋಡಿ ಮಾಹಿತಿ.
ಹೆಚ್ಚು ರಕ್ತದೊತ್ತಡ (Hypertension) ಹೊಂದಿರುವವರು ತಮ್ಮ ಆಹಾರ ಕ್ರಮದಲ್ಲಿ ಕೆಲವು ಮುಖ್ಯ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ. ಆರೋಗ್ಯಕರ ಆಹಾರವು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಈ ಕೆಳಗಿನ ಆಹಾರಗಳನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು..
1.ಹಣ್ಣುಗಳು ಮತ್ತು ತರಕಾರಿಗಳು: ಪ್ರತ್ಯೇಕವಾಗಿ ಈ ತರಕಾರಿಗಳನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದಾಗಿದೆ.
ಬೀಟ್‌ರೂಟ್: ಇದರಲ್ಲಿ ನೈಟ್ರೇಟ್‌ಗಳು ಹೆಚ್ಚಿರುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೀಟ್‌ರೂಟ್ ಜ್ಯೂಸ್ ಅಥವಾ ಸಲಾಡ್ ರೂಪದಲ್ಲಿ ಸೇವಿಸಬಹುದು.
ಹಸಿರು ಎಲೆ ತರಕಾರಿಗಳು: ಸೊಪ್ಪು (ಸ್ಪಿನಾಚ್), ಕೇಲ್, ಮೆಂತೆ ಸೊಪ್ಪು ಮುಂತಾದವು ಪೊಟ್ಯಾಸಿಯಂ, ಮೆಗ್ನೀಸಿಯಂ ಮತ್ತು ಫೈಬರ್‌ನಿಂದ ಸಮೃದ್ಧವಾಗಿವೆ, ಇವು ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.
ಕಿತ್ತಳೆ ಮತ್ತು ಬಾಳೆಹಣ್ಣು: ಇವು ಪೊಟ್ಯಾಸಿಯಂನ ಉತ್ತಮ ಮೂಲವಾಗಿದ್ದು, ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತವೆ.
ಬೆರಿಗಳು: ಬ್ಲೂಬೆರಿಗಳು, ಸ್ಟ್ರಾಬೆರಿಗಳು ಮತ್ತು ರಾಸ್‌ಬೆರಿಗಳು ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿದ್ದು, ರಕ್ತನಾಳಗಳ ಆರೋಗ್ಯವನ್ನು ಸುಧಾರಿಸುತ್ತವೆ.
ಕ್ಯಾರೆಟ್ ಮತ್ತು ಟೊಮೆಟೊ: ಕಡಿಮೆ ಸೋಡಿಯಂ ಮತ್ತು ಹೆಚ್ಚು ಫೈಬರ್ ಒಳಗೊಂಡಿರುವ ಇವು ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿ.
2. ಧಾನ್ಯಗಳ ಬಳಕೆ: ನಾವು ಸೇವನೆ ಮಾಡುವ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಧಾನ್ಯಗಳನ್ನು ಬಳಕೆ ಮಾಡುವುದೂ ಸಹ ರಕ್ತದೊತ್ತಡವನ್ನು ಕಡಿಮೆಗೊಳಿಸುವಲ್ಲಿ ಸಹಕಾರಿಯಾಗುತ್ತದೆ.
ಓಟ್ಸ್: ಓಟ್ಸ್‌ನಲ್ಲಿ ಫೈಬರ್ ಮತ್ತು ಬೀಟಾ-ಗ್ಲೂಕನ್ ಇದ್ದು, ಇದು ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಿ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಕಂದು ಅಕ್ಕಿ (ಬ್ರೌನ್ ರೈಸ್): ಬಿಳಿ ಅಕ್ಕಿಗಿಂತ ಕಂದು ಅಕ್ಕಿಯಲ್ಲಿ ಫೈಬರ್ ಮತ್ತು ಪೋಷಕಾಂಶಗಳು ಹೆಚ್ಚಿರುತ್ತವೆ, ಇದು ಹೃದಯಕ್ಕೆ ಒಳ್ಳೆಯದು.
ರಾಗಿ: ಇವು ಮೆಗ್ನೀಸಿಯಂ ಸಮೃದ್ಧವಾಗಿದ್ದು, ರಕ್ತನಾಳಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತವೆ.
3.ಪ್ರೋಟೀನ್ ಸಮೃದ್ಧ ಆಹಾರಗಳು:
ಕಡಲೆಕಾಯಿ ಮತ್ತು ಬೀಜಗಳು: ಬಾದಾಮಿ, ವಾಲ್‌ನಟ್‌ಗಳು, ಚಿಯಾ ಬೀಜಗಳು, ಫ್ಲಾಕ್ಸ್‌ಸೀಡ್‌ಗಳು ಒಮೆಗಾ-3 ಕೊಬ್ಬಿನಾಂಶಗಳಿಂದ ಕೂಡಿದ್ದು, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಮೀನು: ಸಾಲ್ಮನ್, ಮ್ಯಾಕರಲ್ ಮುಂತಾದ ಒಮೆಗಾ-3 ಕೊಬ್ಬಿನಾಂಶ ಸಮೃದ್ಧ ಮೀನುಗಳು ಹೃದಯದ ಆರೋಗ್ಯಕ್ಕೆ ಸಹಕಾರಿ.
ಕಡಲೆಕಾಯಿ ಮತ್ತು ಬೇಳೆಕಾಳು: ಇವು ಫೈಬರ್ ಮತ್ತು ಪೊಟ್ಯಾಸಿಯಂನಿಂದ ಕೂಡಿದ್ದು, ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ.
4.ಕೊಬ್ಬು ಕಡಿಮೆ ಇರುವ ಡೈರಿ ಉತ್ಪನ್ನಗಳು:
ಕಡಿಮೆ ಕೊಬ್ಬಿನ ಮೊಸರು: ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿರುವ ಮೊಸರು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
new balance Unisex 574 Sneakers
5.ಇತರೆ ಆಹಾರಗಳು:
ಬೆಳ್ಳುಳ್ಳಿ: ಬೆಳ್ಳುಳ್ಳಿಯು ರಕ್ತನಾಳಗಳನ್ನು ಸಡಿಲಗೊಳಿಸಿ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಆಲಿವ್ ಎಣ್ಣೆ: ಇದರಲ್ಲಿ ಆರೋಗ್ಯಕರ ಕೊಬ್ಬುಗಳಿದ್ದು, ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯಕ.
ಗ್ರೀನ್ ಟೀ: ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿದ್ದು, ರಕ್ತದೊತ್ತಡವನ್ನು ಸ್ಥಿರವಾಗಿಡಲು ಸಹಕಾರಿ.
ಈ ರೀತಿಯಾದ ಆಹಾರ ಕ್ರಮಗಳನ್ನು ದಿನನಿತ್ಯ ನೀವು ಸೇವನೆ ಮಾಡುವ ಆಹಾರ ಪದಾರ್ಥಗಳಲ್ಲಿ ಬಳಸಿದ್ದೇ ಆದಲ್ಲಿ ನಿಮ್ಮ ರಕ್ತದೊತ್ತಡ ಅಥವಾ ಬಿ.ಪಿ ನಿಮ್ಮ ನಿಯಂತ್ರಣಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ.