Skip to main content
ವಿಡಿಯೋ
1/2
entertainment

ಇವತ್ತಿನಿಂದ ಬಿಗ್ ಬಾಸ್ ಮಲಯಾಳಂ ಸೀಜನ್‌ 07 ಶುರು.! ಈ ಬಾರಿ ಮನೆ ಪ್ರವೇಶಿಸಲಿರುವ ಸ್ಪರ್ಧಿಗಳು ಇವರೇ ನೋಡಿ..!

By Pavitra Ganapathi Baradavalli
ಇವತ್ತಿನಿಂದ ಬಿಗ್ ಬಾಸ್ ಮಲಯಾಳಂ ಸೀಜನ್‌ 07  ಶುರು.! ಈ ಬಾರಿ ಮನೆ ಪ್ರವೇಶಿಸಲಿರುವ ಸ್ಪರ್ಧಿಗಳು ಇವರೇ ನೋಡಿ..!

ಮಲಯಾಲಂ ಟೆಲಿವಿಷನ್‌ನ ಅತ್ಯಂತ ಚರ್ಚಿತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ ಹೊಸ ಋತುವು ಆರಂಭವಾಗಲು ಒಂದೇ ದಿನ ಉಳಿದಿದ್ದು, ಅಭಿಮಾನಿಗಳಲ್ಲಿ ಉತ್ಸಾಹ ತುಂಬಿದೆ. ನಾಳೆಯಿಂದ ಶೋ ಆರಂಭವಾಗಲಿದ್ದು, ಈ ಬಾರಿ ಸ್ಪರ್ಧಿಗಳ ಪಟ್ಟಿ ಕುರಿತು ಊಹಾಪೋಹಗಳು ಚರ್ಚೆಯಲ್ಲಿ ಇವೆ.

ಬೆಂಗಳೂರು: ಮಲಯಾಳಂ ಟೆಲಿವಿಷನ್‌ನ ಅತ್ಯಂತ ಚರ್ಚಿತ ರಿಯಾಲಿಟಿ ಶೋ ಬಿಗ್ ಬಾಸ್ ಮಲಯಾಳಂದ ಹೊಸ ಋತುವು ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ.. ಇವತ್ತಿನಿಂದ ಶೋ ಆರಂಭವಾಗಲಿದ್ದು, ಈ ಬಾರಿ ಸ್ಪರ್ಧಿಗಳ ಪಟ್ಟಿ ಕುರಿತು ಊಹಾಪೋಹಗಳು ಚರ್ಚೆಯಲ್ಲಿ ಇವೆ. ಖಚಿತವಾಗಿ ಯಾರು ಭಾಗವಹಿಸುತ್ತಾರೆ ಎಂಬುದು ಇನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ, ಕೆಲವು ಸಂಭಾವ್ಯ ಹೆಸರುಗಳು ಕೇಳಿಬರುತ್ತಿವೆ.

 


ಈ ಬಾರಿಯ ಬಿಗ್ ಬಾಸ್ ಶೋವನ್ನು ಖ್ಯಾತ ಮಲಯಾಳಂ ನಟ ಮೋಹನ್‌ ಲಾಲ್‌ ನಡೆಸಿಕೊಡಲಿದ್ದಾರೆ. ಮೂಲಗಳ ಪ್ರಕಾರ, ಈ ಸೀಸನ್‌ನಲ್ಲಿ ಸಿನಿಮಾ, ಧಾರಾವಾಹಿ, ಸಾಮಾಜಿಕ ಮಾಧ್ಯಮ ಇಂಫ್ಲೂಯೆನ್ಸರ್‌ಗಳು ಸೇರಿದಂತೆ ವಿವಿಧ ಕ್ಷೇತ್ರದಿಂದ ಸ್ಪರ್ಧಿಗಳು ಆಯ್ಕೆಯಾಗಿರಬಹುದು. ನಾಳೆಯಿಂದ 'ಬಿಗ್ ಬಾಸ್ ಶುರು, ಈ ಬಾರಿ ಮನೆ ಪ್ರವೇಶಿಸಲಿರುವ ಸ್ಪರ್ಧಿಗಳು ಇವರೇ?

*ಮುನ್ಶಿ ರಂಜಿತ್ - ಮಲಯಾಳಂ ಚಿತ್ರರಂಗದ ಗೌರವಾನ್ವಿತ್ ನಟ

* ಗಾಯತ್ರಿ ದೇವಿ { ಕಿಂಗಿನಿ } - ಹಾಸ್ಯಪ್ರಜ್ಞೆಯಿಂದ ಹೆಸರುವಾಸಿಯಾದ ಚೆಲುವೆ

* ಬೋಬನ್ ಅಲುಮ್ಮೊಡನ್ - 'ನಿರಾಮ್' ಖ್ಯಾತಿಯ ನಟಿ,

* ರೇಖಾ ರತೀಶ್ - 'ಪರಸ್ಪರಂ' ಖ್ಯಾತಿಯ ಕಿರುತೆರೆ ನಟಿ.

* ರೇಜನೀಶ್ ವಿಆರ್ - ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್

* ಶಾನವಾಸ್ ಶಾನು - ''ಕುಂಕುಮಪೂವು''ದ ''ರುದ್ರ''ಪಾತ್ರಕ್ಕೆ ಹೆಸರುವಾಸಿಯಾದ ನಟ

* ಸುಜಯ ಪಾರ್ವತಿ - ಹಿರಿಯ ಪತ್ರಕರ್ತೆ ಮತ್ತು

* ಬಿನ್ನಿ ಸೆಬಾಸ್ಟಿಯನ್ - "ಗೀತ ಗೋವಿಂದಂ' ಮೂಲಕ ಪರಿಚಿತರಾದ ನೂಬಿನ್ ಜಾನಿ ಅವರ ಪತ್ನಿ ಮತ್ತು ನಟಿ

* ವಿನ್ಸಿ ಅಲೋಶಿಯಸ್ - ''ಭೀಮಂತೆ ವಾಜಿ'" ಮತ್ತು "ರೇಖಾ" ಖ್ಯಾತಿಯ ಭರವಸೆಯ ಸ್ಟಾ‌ರ್

* ಆದಿತ್ಯನ್ ಜಯನ್ - ಟಿವಿ ನಟ ಅಂಬಿಲಿ ದೇವಿಯ ಮಾಜಿ ಪತಿ.

* ಕಿಲಿ ಪಾಲ್ - ಟಾಂಜಾನಿಯಾ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್

* ರೇಣು ಸುಧಿ - ಮಾಡೆಲ್ ಮತ್ತು ದಿವಂಗತ ಹಾಸ್ಯನಟ ಕೊಲ್ಲಂ ಸುಧಿ ಅವರ ಪತ್ನಿ.

* ಮೈತ್ರೇಯನ್ - ಸಾಮಾಜಿಕ ಕಾರ್ಯಕರ್ತೆ ಮತ್ತು ಲೇಖಕಿ ಇವರುಗಳು ಆಯ್ಕೆಯಾಗಿದ್ದಾರೆ.


ಶೋದಲ್ಲಿ ಸ್ಪರ್ಧಿಗಳು ಗ್ರಾಹಕರ ಮತದ ಮೂಲಕ ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಇದ್ದು, ಪ್ರಥಮ ದಿನದಿಂದಲೇ ಉತ್ಸಾಹ ತುಂಬುವ ದೃಶ್ಯಗಳು ನಿರೀಕ್ಷೆಯಲ್ಲಿವೆ. ಈ ಬಾರಿ ಮನೆಯಲ್ಲಿ ಹೊಸ ಥೀಮ್‌ ಮತ್ತು ಕಾರ್ಯಕ್ರಮಗಳು ಜೋಡಿಸಲಾಗಿದ್ದು, ಸ್ಪರ್ಧಿಗಳ ನಡುವೆ ತೀವ್ರ ಸ್ಪರ್ಧೆ ನಡೆಯಲಿದೆ. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು 100 ದಿನಗಳ ಕಾಲ ವಿಶ್ವದಿಂದ ಪ್ರತ್ಯೇಕವಾಗಿ ಇರುವುದರಿಂದ, ಅವರ ನಡುವಿನ ಸ್ನೇಹ, ಜಗಳ ಮತ್ತು ತಂತ್ರಗಳು ಪ್ರೇಕ್ಷಕರನ್ನು ಕಟ್ಟಿಕೊಳ್ಳಲಿವೆ.

Samsung Galaxy Watch6 Classic LTE (43mm, Silver, Compatible with Android only) | Introducing BP & ECG Features

ಅಧಿಕೃತ ಪಟ್ಟಿ ಇನ್ನಷ್ಟು ಸಮಯದಲ್ಲಿ ಬಹಿರಂಗವಾಗಬಹುದಾದರೂ, ಅಭಿಮಾನಿಗಳು ಈಗಾಗಲೇ ತಮ್ಮ ಮೆಚ್ಚಿನ ಸ್ಪರ್ಧಿಗಳನ್ನು ಬೆಂಬಲಿಸಲು ಮುಂದಾಗಿದ್ದಾರೆ. 'ಬಿಗ್ ಬಾಸ್' ಕನ್ನಡ 7 ರ ಗ್ರ್ಯಾಂಡ್ ಪ್ರೀಮಿಯರ್ ಆಗಸ್ಟ್ 04ರಂದು ಸಂಜೆ 6:00 ಗಂಟೆಯಿಂದ ಬಿಗ್ ಬಾಸ್ ಮಲಯಾಳಂ ಸೀಸನ್ 7 ಏಷ್ಯಾನೆಟ್‌ನಲ್ಲಿ ಪ್ರಸಾರವಾಗಲಿದೆ. ವೀಕ್ಷಕರು ಇದನ್ನು ಜಿಯೋಹಾಟ್‌ಸ್ಟಾರ್ ಮತ್ತು ಒಟಿಟಿಪ್ಲೇ ಪ್ರೀಮಿಯಂನಲ್ಲಿಯೂ ಪ್ರಸಾರವಾಗಲಿದೆ. ಈ ಶೋವನ್ನು ಕಾದುನೋಡುವ ಎಲ್ಲರಿಗೂ ಉತ್ಸಾಹ  ಎದುರಾಗಿದೆ!