Skip to main content
ವಿಡಿಯೋ
general

ಧರ್ಮಸ್ಥಳ ಶವ ಉತ್ಖನನ: ಅಸ್ಥಿಪಂಜರದ ಮೂಳೆಗಳ ಫೊರೆನ್ಸಿಕ್ ಪರೀಕ್ಷೆಯಿಂದ ಲಿಂಗ ಪತ್ತೆ ಹೇಗೆ?

By Shravanthi R
ಧರ್ಮಸ್ಥಳ ಶವ ಉತ್ಖನನ: ಅಸ್ಥಿಪಂಜರದ ಮೂಳೆಗಳ ಫೊರೆನ್ಸಿಕ್ ಪರೀಕ್ಷೆಯಿಂದ ಲಿಂಗ ಪತ್ತೆ ಹೇಗೆ?

ಫೊರೆನ್ಸಿಕ್‌ ವೈದ್ಯರ ಪ್ರಕಾರ, ಮೂಳೆಗಳು ಸಿಕ್ಕ ಮಾತ್ರಕ್ಕೆ ಕರಾರುವಕ್ಕಾಗಿ ಅದು ಹೆಂಗಸೋ ಅಥವಾ ಗಂಡಸೋ ಎಂಬುದಾಗಿ ಹೇಳಲು, ಅದಕ್ಕಾಗಿ ಮೂರು ವಿಧಾನಗಳಲ್ಲಿ ಲಿಂಗಪತ್ತೆ ಸಾಧ್ಯವಾಗುವುದು ಎಂದಿದ್ದಾರೆ.

ಧರ್ಮಸ್ಥಳದಲ್ಲಿ ಶವಗಳ ಉತ್ಖನನ ಇದೀಗ ಎಲ್ಲೆಡೆ ಹಬ್ಬಿರುವ ಬಿಸಿಬಿಸಿ ಸುದ್ದಿ. ಅಸ್ಥಿಪಂಜರದಿಂದ ಲಿಂಗಪತ್ತೆ ಸಾಧ್ಯ ಎನ್ನುವುದು ಆರೋಪಿಗಳ ಎದೆಯಲ್ಲಿ ನಡುಕ ಹುಟ್ಟಿಸಿರಬಹುದು ಎನ್ನಲಾಗಿದೆ. ಇದೀಗ ಯಾವ ಪ್ರಕ್ರಿಯೆಯಲ್ಲಿ ಮೂಳೆಗಳ ಪರೀಕ್ಷೆ ಮತ್ತು ಲಿಂಗ ಪತ್ತೆ ಹಚ್ಚಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. 

Logitech Lift Vertical Ergonomic Mouse, Wireless, Bluetooth or Logi Bolt USB Receiver, Quiet clicks, 4 Buttons, Compatible with Windows/macOS/iPadOS, Laptop, PC - Graphite

ಫೊರೆನ್ಸಿಕ್‌ ವೈದ್ಯರ ಪ್ರಕಾರ, ಮೂಳೆಗಳು ಸಿಕ್ಕ ಮಾತ್ರಕ್ಕೆ ಕರಾರುವಕ್ಕಾಗಿ ಅದು ಹೆಂಗಸೋ ಅಥವಾ ಗಂಡಸೋ ಎಂಬುದಾಗಿ ಹೇಳಲು, ಅದಕ್ಕಾಗಿ ಮೂರು ವಿಧಾನಗಳಲ್ಲಿ ಲಿಂಗಪತ್ತೆ ಸಾಧ್ಯವಾಗುವುದು ಎಂದಿದ್ದಾರೆ.

ಮೊದಲಿಗೆ, ಸಿಕ್ಕ ಅಸ್ಥಪಂಜರವು, ಮಹಿಳೆಯದ್ದಾದರೆ ಸೊಂಟ ಭಾಗದ ಮೂಳೆಯನ್ನು ಪರೀಕ್ಷಿಸಲಾಗುವುದು. ಪ್ರಾಕೃತಿಕವಾಗಿ ಮಹಿಳೆಯರಲ್ಲಿ ಸೊಂಟದ ಭಾಗವು ಅಗಲವಾಗಿದ್ದು, ಭುಜವು ಚಿಕ್ಕದಾಗಿರುತ್ತದೆ. ಮಹಿಳೆಯರಿಗಿರುವ ಪ್ರಾಕೃತಿಕ ಶಕ್ತಿ ಗರ್ಭಾವಸ್ಥೆ ಹಾಗೂ ಶಿಶು ಜನನ ಕಾರಣ, ಪುರುಷರಿಗಿಂತ ವಿಭಿನ್ನವಾಗಿರಲಿದೆ ಎನ್ನಲಾಗುತ್ತದೆ. ಪುರುಷರ ಸೊಂಟಭಾಗವು ಚಿಕ್ಕದಾಗಿದ್ದು ಭುಜದೊಡ್ಡದಾಗಿರುತ್ತದೆ. 

ಸೊಂಟದ ನಂತರ ಎರಡನೆಯದ್ದಾಗಿ ಬೇಕಾಗಿರುವಂತದ್ದು, ತಲೆ ಬುರುಡೆ. ಮಹಿಳೆಯದ್ದಾದರೆ, ಹಣೆಯು ಲಂಬಾಕಾರವಾಗಿರುತ್ತದೆ. ಪುರುಷರಲ್ಲಿ ಓರೆಯಾಕಾರದಲ್ಲಿರುತ್ತದೆ. ದವಡೆ ಕೂಡ ಮಹಿಳೆಯರಲ್ಲಿ ಕಿರಿದಾಗಿದ್ದು ಪುರುಷರಲ್ಲಿ ದೊಡ್ಡದಾಗಿರುತ್ತದೆ. 

ಮೂರನೆಯದಾಗಿ ತೊಡೆ ಮೂಳೆ ಬೇಕಾಗುತ್ತೆ ಫೀಮರ್ ಮೂಳೆ ನೋಡಿ ಲಿಂಗಪತ್ತೆ ಮಾಡಬಹುದಾಗಿ ವೈದ್ಯರು ಕೊಟ್ಟಂತಹ ಮಾಹಿತಿ ಸಾಯುವಾಗ ಎಷ್ಟು ವಯಸ್ಸಾಗಿದೆ ಇಲ್ಲಿವರೆಗೂ ಯಾವ ಪ್ರಕ್ರಿಯೆಗಳಾಗಿವೆ ಸೇರಿದಂತೆ ಸಿಕ್ಕ ಶವಗಳ ಇತ್ಯಾದಿ ವಿವರಗಳ ಕುರಿತು ಕಂಡು ಹಿಡಿಯುವ ಬಗ್ಗೆ ವೈದ್ಯರು ಅಸ್ಥಿಪಂಜರದ ಮೂಳೆಗಳ ಪರೀಕ್ಷೆ ಮಾಡಿ ಲಿಂಗ ಪತ್ತೆ ಸಾಧ್ಯವೆನ್ನಲಾಗಿದೆ.