ಇಂಗ್ಲೆಂಡ್: ತೆಂಡೂಲ್ಕರ್- ಅಂಡರ್ಸನ್ ಟ್ರೋಫಿಯ ನಿಮತ್ತ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡಿಗೆ ತೆರಳಿತ್ತು, ಐದು ಪಂದ್ಯಗಳ ಟೆಸ್ಟ್ ಮ್ಯಾಚ್‌ಗಳಲ್ಲಿ ಮೊದಲ ಪದ್ಯದಲ್ಲೇ ಸೋತು ಸೊರಗಿದ್ದ ಭಾರತ ಶುಭಮನ್ ಗಿಲ್ ಅವರ ನಾಯಕತ್ವದೊಂದಿಗೆ ಸಾಂಘಿಕ ಪ್ರದರ್ಶನ ನೀಡಿ ಎರಡನೇ ಟೆಸ್ಟ್ನಲ್ಲಿ ಗೆಲುವು ದಾಖಲಿಸಿತ್ತು, ನಂತರ ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಹಂತದಲ್ಲಿ ಎಡವಿದ್ದ ಭಾರತ ಅಂತಿಮವಾಗಿ ಸೋಲನ್ನು ಕಂಡಿತು.Vogaan Men's T-Shirt and Shorts Set | Top & Shorts Night Suits Set | Night Wear for Men
ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅನಾಯಾಸವಾಗಿ ಗೆದ್ದು ಸೀರೀಸ್‌ನಲ್ಲಿ ಮುನ್ನಡೆಯನ್ನು ಸಾಧಿಸಿತ್ತು, ಯಾವುದೇ ಒತ್ತಡವಿಲ್ಲದೆ ಐದನೇ ಟೆಸ್ಟ್ ಪಂದ್ಯವನ್ನು ಆಡಲು ಕಣಕ್ಕಿಳಿದ ಇಂಗ್ಲೆಂಡ್ ತಂಡ ಭಾರತವನ್ನು ಸೋಲಿಸುವ ಎಲ್ಲಾ ಲಕ್ಷಣಗಳನ್ನು ತೋರುತ್ತಿತ್ತು, ಆದರೆ ತಂಡದ ಆಟಗಾರರ ಆತ್ಮವಿಶ್ವಾಸ ಮತ್ತು ನಾಯಕ ಶುಭಮನ್ ಗಿಲ್ ಅವರ ನಿರ್ಣಯದಿಂದ ಐದನೇ ಟೆಸ್ಟ್‌ನಲ್ಲಿ 6 ರನ್‌ಗಳ ಭರ್ಜರಿ ಜಯಗಳಿಸಿದೆ. ಹೀಗಾಗಿ ಸರಣಿ ಸೋಲುವ ಭೀತಿಯಲ್ಲಿದ್ದ ಭಾರತ ತಂಡ, ಸರಣಿಯನ್ನು ಸಮಬಲಗೊಳಿಸಿಕೊಂಡಿದೆ.
5ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 224ಕ್ಕೆ 10 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಇಂಗ್ಲೆಂಡ್ ತನ್ನ ಮೊದಲ ಇನಿಂಗ್ಸ್ ನಲ್ಲಿ 247 ರನ್ನುಗಳಿಗೆ 10 ವಿಕೆಟ್ ಅನ್ನು ಕಳೆದುಕೊಂಡಿತು, ಎರಡನೇ ಇನ್ನಿಂಗ್ಸ್ನಲ್ಲಿ ಭಾರತ 396 ರನ್ನುಗಳಿಗೆ 10 ವಿಕೆಟ್ಗಳನ್ನು ಕಳೆದುಕೊಂಡರೆ, ಈ ಇನಿಂಗ್ಸ್ ನಲ್ಲಿ ಯಶಸ್ವಿ ಅವರ 118, ಆಕಾಶ್ ದೀಪ್ 66, ಜಡೇಜಾ ಅವರ 53, ವಾಷಿಂಗ್ಟನ್ ಸುಂದರ್ 53 ಜೂರೆಲ್ 34 ರನ್ನುಗಳು ತಂಡದ ಮೊತ್ತವನ್ನು ಹೆಚ್ಚಿಸಲು ಸಹಕಾರಿಯಾಯಿತು. ನಂತರ ಎರಡನೇ ಎನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಉತ್ತಮ ಆರಂಭ ಪಡೆದರು ಜೋ ರೂಟ್ 105 ರನ್ನು ಮತ್ತು ಆರಂಭಿಕ ಆಟಗಾರನಾದ ಡಕ್ಕೆಟ್ 54 ರನ್, ಬ್ರೂಕ್ 111, ಪೋಪ್ 27ರನ್ ಬಿಟ್ಟರೆ ಮತ್ತಿನ್ಯಾವ ಆಟಗಾರನು ಎರಡಂಕಿಯ ರನ್‌ಗಳನ್ನು ದಾಟಲಿಲ್ಲ. ಹೀಗಾಗಿ ಸಾಕಷ್ಟು ರೋಚಕತೆಯಿಂದ ಕೂಡಿದ್ದ 5ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಅಚ್ಚರಿಯ ಗೆಲವು ಕಂಡು ಸರಣಿಯಲ್ಲಿ ಸಮಬಲ ಕಂಡಿದೆ. ಹೀಗಾಗಿ ಟೆಸ್ಟ್ ಸರಣಿಯನ್ನು ಗೆದ್ದು ಬೀಗುವ ಖುಷಿಯಲ್ಲಿದ್ದ ಇಂಗ್ಲೆಂಡ್‌ನ ಆಸೆಗೆ ಭಾರತ ತಣ್ಣಿರೆರೆಚಿದೆ.