ಅನಿಲ್ ಅಂಬಾನಿ ಅವರ ಒಡೆತನದ ಕಂಪನಿಗಳಲ್ಲಿ ಅಕ್ರಮ ಹಣ ವರ್ಗಾವಣೆ ಹಾಗೂ ಸಾಲ ವಂಚನೆಗೆ ಸಂಬಂಧಿಸಿದ ಆರೋಪದ ಮೇಲೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಜಾರಿ ನಿರ್ದೇಶನಲಯವು ಲುಕ್ ಔಟ್ ನೋಟಿಸ್ ನೀಡಿದ ಬೆನ್ನಲ್ಲೇ ಇಂದು ದೆಹಲಿಯಲ್ಲಿರುವ ಇ.ಡಿ ಕಚೇರಿಗೆ ಅನಿಲ್ ಅಂಬಾನಿ ವಿಚಾರಣೆಯ ಹಿನ್ನೆಲೆಯಲ್ಲಿ ಹಾಜರಾದರು. ಈ ಪ್ರಕರಣದಲ್ಲಿ ಅನಿಲ್ ಅಂಬಾನಿ ಅವರ ಹೇಳಿಕೆ ನಿರ್ಣಾಯಕ ಪಾತ್ರವನ್ನು ಹೊಂದಿರಲಿದೆ.
ಸಾಲ ವಂಚನೆ ಪ್ರಕರಣದಲ್ಲಿ ಲುಕ್ ಔಟ್ ನೋಟಿಸ್ ಹೊರಡಿಸಿರುವ ಮೂಲಕ ಇ.ಡಿ ತನ್ನ ತನಿಖೆ ವಿಚಾರಣೆಗೆ ದೇಶ ತೊರೆಯದಂತೆ ಸೂಚನೆ ನೀಡಿದೆ. ಹಣಕಾಸು ಅಕ್ರಮಗಳು ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಯಮಗಳು ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ತನಿಖೆಗೆ ಒಳಪಟ್ಟಿರುವ ಆಸ್ತಿ ಮತ್ತು ಕಂಪನಿ ಘಟಕಗಳಲ್ಲಿನ ಪಾತ್ರದ ಕುರಿತು ಇ.ಡಿ ಪರಿಶೀಲನೆ ನಡೆಸಿದೆ.
ZOUK Ziya Sling Bag - | Stylish Vegan Leather Crossbody Bag for Women |
ಜುಲೈ 24ರಂದು ರಿಲಯನ್ಸ್ ಗ್ರೂಪ್ ಕಂಪನಿಗಳ ವಿರುದ್ಧ 35 ಆಸ್ತಿ ಮೌಲ್ಯಗಳು, 50 ಕಂಪನಿ ಸೇರಿದಂತೆ 25ಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಶೋಧ ಕಾರ್ಯ ನಡೆಸಲಾಗಿತ್ತು. ಅದಾದ ನಂತರ ಎಫ್ಐಆರ್ ದಾಖಲಿಸಿತ್ತು. ಓರ್ವ ಸಿಬ್ಬಂದಿಯನ್ನು ಬಂಧಿಸಲಾಗಿತ್ತು. ಇದೀಗ ತನಿಖೆ ಕೈಗೊಂಡಿದೆ. ಈ ವಂಚನೆಯಲ್ಲಿ ಬ್ಯಾಂಕುಗಳು, ಷೇರುದಾರರು, ಹೂಡಿಕೆದಾರರು ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ವಂಚಿಸಿದ ಸಾರ್ವಜನಿಕ ಹಣವನ್ನು ತಿರುಗಿಸಲು ಮತ್ತು ದುರುಪಯೋಗಪಡಿಸಿಕೊಳ್ಳುವ ವಿಚಾರವು ಬಯಲಾಗಿದೆ.