Skip to main content
ವಿಡಿಯೋ
1/3
religion

ಸನಾತನ ಧರ್ಮ ಅಂದ್ರೇನು ಗೊತ್ತಾ.? ಕಮಲ್ ಹಾಸನ್.!?

By Nandini J
 ಸನಾತನ ಧರ್ಮ ಅಂದ್ರೇನು ಗೊತ್ತಾ.? ಕಮಲ್ ಹಾಸನ್.!?

ಸರ್ವಾಧಿಕಾರ ಮತ್ತು ಸನಾತನ ಧರ್ಮ(Sanatan Dharma) ದ ಕೊಂಡಿಯನ್ನು ಕಳಚಲು ಶಕ್ತವಾಗಿರುವ ಏಕೈಕ ಶಕ್ತಿಯೆಂದರೆ ಅದು ಶಿಕ್ಷಣ’ ಎಂದು ಮಕ್ಕಳ್‌ ನಿಧಿ ಮಯ್ಯಂ ಪಕ್ಷದ ಮುಖ್ಯಸ್ಥ ನಟ ಕಮಲ್‌ ಹಾಸನ್‌ ವಿವಾದಿತ ಹೇಳಿಕೆ ನೀಡಿದ್ದಾರೆ.

ಕರ್ನಾಟಕದ ಪಕ್ಕದ ರಾಜ್ಯ ತಮಿಳುನಾಡು (Tamil Nadu) . ತಮಿಳುನಾಡಿನವರನ್ನ ಬಹುತೇಕ ದ್ರಾವಿಡರು ಅಂತಲೂ ಕರೆಯುತ್ತಾರೆ. ಕಳೆದ ಒಂದು ವರ್ಷದ ರಾಜಕೀಯ, ಭಾಷೆ ವಿಚಾರವಾಗಿ ತಮಿಳುನಾಡಿನ ರಾಜಕಾರಣಿ ಉದಯ್ ನಿಧಿ (Udhayanidhi Stalin) ವರ್ಷದ ಹಿಂದೆ ಸನಾತನ ಒಂದು ರೋಗ ಇದನ್ನ ನಿರ್ಮೂಲನೆ ಮಾಡಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿ ಕೋಲಾಹಲ ಸೃಷ್ಟಿಸಿದ್ದರು. ಈಗ ಮತ್ತೊಮ್ಮೆ ಈ ವಿವಾದ ಸಾರದಿ ಒಂದು ಬಣದ ಓಲೈಕೆಗಾಗಿ ಬಹುಭಾಷಾ ನಟ ಕಮಲ್ ಹಾಸನ್ (Kamal Haasan) ದಾಗಿದೆ.

ಸರ್ವಾಧಿಕಾರ ಮತ್ತು ಸನಾತನ ಧರ್ಮ(Sanatan Dharma) ದ ಕೊಂಡಿಯನ್ನು ಕಳಚಲು ಶಕ್ತವಾಗಿರುವ ಏಕೈಕ ಶಕ್ತಿಯೆಂದರೆ ಅದು ಶಿಕ್ಷಣ’ ಎಂದು ಮಕ್ಕಳ್‌ ನಿಧಿ ಮಯ್ಯಂ ಪಕ್ಷದ ಮುಖ್ಯಸ್ಥ ನಟ ಕಮಲ್‌ ಹಾಸನ್‌ ವಿವಾದಿತ ಹೇಳಿಕೆ ನೀಡಿದ್ದಾರೆ. ಹಾಗಾದರೆ ಏಕೆ ಹೀಗೆ ಸನಾತನ ಧರ್ಮದ ಕುರಿತು ಹಾದಿ ಬೀದಿ ವಿವಾದತ್ಮಕ ಹೇಳಿಕೆ ಕೊಡುತ್ತಾರೆ. ಸನಾತನ ಧರ್ಮ ಅಂದರೇನು ಅಂತಾ ಒಮ್ಮೆ ವಿಚಾರ ಮಾಡೊಣ.


ಮೊದಲಿಗೆ ವಿವಾದ ಹುಟ್ಟಿದ ಮೂಲ ಹೀಗೆ.

ಚಿತ್ರನಟ ಸೂರ್ಯ (Suriya) ಅವರ ಅಗರಂ ಫೌಂಡೇಷನ್‌ನ 15ನೇ ವಾರ್ಷಿಕೋತ್ಸವದಂದು ಮಾತನಾಡಿದ ಕಮಲ್‌ ಹಾಸನ್, ‘ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಿಂದಾಗಿ ಹಲವು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ನೀಟ್‌ ಪರೀಕ್ಷೆ (NET exam)ಯು 2017ರಿಂದ ಎಷ್ಟೋ ಮಕ್ಕಳನ್ನು ವಿದ್ಯಾಭ್ಯಾಸದಿಂದ ದೂರವಿಟ್ಟಿದೆ. ಶಿಕ್ಷಣವನ್ನು ಹೊರತುಪಡಿಸಿ ಬೇರೆ ಯಾವ ವಿಧಾನವನ್ನು ಕೈಗೆತ್ತಿಕೊಂಡರೂ ಫಲವಿಲ್ಲ. ಅದರಲ್ಲಿ ನಿಮಗೆ ಗೆಲುವು ಸಿಗುವುದು ಕಷ್ಟ. ಏಕೆಂದರೆ ಬಹುಸಂಖ್ಯಾತರು ನಿಮ್ಮನ್ನು ಸೋಲಿಸುತ್ತಾರೆ ಎಂದು ದ್ವೇಷ ಭಾಷಣ ಮಾಡಿದ್ದಾರೆ. ಈ ಹಿಂದೆ ಸಹ ಕಮಲ್‌ ಹಾಸನ್ ಹಿಂದೂ ಧರ್ಮ ಮತ್ತು ದೇವರುಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು.ಬೇರೆ ಧರ್ಮಗಳಿಗೆ ಹೋಲಿಸಿದರೆ ಹಿಂದೂ ದೇವರುಗಳು ಸಹಾನುಭೂತಿ ಹೀನರು ಎಂದು ಟೀಕಿಸಿದರು. ಅದೇ ವೇಳೆ ಕೆಲ ದೇವತೆಗಳ ವಸ್ತ್ರದ ಬಗ್ಗೆ ಅಪಮಾನಕರ ಹೇಳಿಕೆ ನೀಡಿ, ದ್ರೌಪದಿಯ ಒಪ್ಪಿಗೆ ಇಲ್ಲದೆ ಪಗಡೆ ಆಟದಲ್ಲಿ ಪಣಕ್ಕಿಡುವ ಕಥೆಯುಳ್ಳ ಮಹಾಭಾರತವನ್ನು ಸಮಾಜ ಏಕೆ ಗೌರವಿಸುತ್ತದೆ?’ ಎಂದು ಪ್ರಶ್ನಿಸಿದ್ದರು.

ಅದರೊಂದಿಗೆ ಸನಾತನದ ಕೊಂಡಿಯನ್ನು ತೊಲಗಿಸಲು ಅಗರಂ ಕೂಡ ಏನೂ ಮಾಡಲಾಗದು. ಆದರೆ ಶಿಕ್ಷಣವು ಕಾನೂನನ್ನು ಬದಲಿಸುವ ಶಕ್ತಿ ಕೊಡುತ್ತದೆ. ಅದು ಕೇವಲ ಅಸ್ತ್ರವಲ್ಲ, ಯುದ್ಧವಾಗಿದೆ. ರಾಷ್ಟ್ರದ ಭವಿಷ್ಯವನ್ನು ಕೆತ್ತಬಲ್ಲ ಉಳಿ ಎಂದು 4 ಆಗಸ್ಟ್ 2025 ರಂದು ಹೇಳಿದರು.

ಇಷ್ಟಲ್ಲದೇ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎನ್ನುವ ವಿವಾದತ್ಮಕ ಹೇಳಿಕೆಯನ್ನ ಈ ಹಿಂದೆ ನೀಡಿ ಕಮಲ್ ಹಾಸನ್ ಕೋರ್ಟ್ ಕೆಂಗಣ್ಣಿಗೂ ಗುರಿಯಾಗಿದ್ದರು. ಸದ್ಯ ಕಮಲ್ ಮೂರು ವಿವಾದತ್ಮಕ ಹೇಳಿಕೆಗಳನ್ನ ಇಲ್ಲಿ ನೆನೆಯಬಹುದು.


ಸದ್ಯಕ್ಕಂತೂ ಬಹುಸಂಖ್ಯಾರ ಟೀಕಿಸಿರುವ ಕುರಿತು ದೊಡ್ಡ ವಿವಾದ ಮೈ ಮೇಲೆ ಎಳೆದುಕೊಂಡಂತೆ ಆಗಿದೆ.

ಈ ಬಗ್ಗೆ ತಮಿಳುನಾಡಿನ ಬಿಜೆಪಿ ನಾಯಕಿಯಾದ ತಮಿಳ್ ಸಾಯ್ ಸೌಂದರ್ಯ ರಾಜನ್(Tamilisai Soundararajan) ಮಾತನಾಡಿ ಕಮಲ್ ಅವರಿಗೆ ತಮ್ಮ ಪಕ್ಷಕ್ಕಿಂತ ಡಿಎಂಕೆಗೆ ನಿಷ್ಠರಾಗಿರುವಂತಿದೆ. ಮೊದಲು ಭಾಷಾ ಸಮಸ್ಯೆಯನ್ನು ಎತ್ತಿ, ವಿವಿಧ ರಾಜ್ಯಗಳ ಜನರನ್ನು ವಿಭಜಿಸಿದರು. ಈಗ, ಧಾರ್ಮಿಕ ಭಾವನೆಗಳ ಆಧಾರದಲ್ಲಿ ಜನರನ್ನು ಒಡೆಯಲು ಧಾರ್ಮಿಕ ವಿಷಯವನ್ನು ಎತ್ತುತ್ತಿದ್ದಾರೆ’ ಎಂದು ಟೀಕಿಸಿದ್ದರು.

ಕಾಂಗ್ರೆಸ್ ಪಕ್ಷದ ನಾಯಕರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಅಂತರ ಕಾಯ್ದುಕೊಂಡಿದೆ.

ಈಗ ವಿವಾದ , ವಿವಾದಕ್ಕೆ ಬಲಪಂಥೀಯ ಟೀಕೆ ತಿಳಿದುಕೊಂಡಿದ್ದಿವಿ. ಈಗ ನಿಜಕ್ಕೂ ಸನಾತನ ಧರ್ಮ ಎಂದರೇನು ಅಂತಾ ತಿಳಿಯಬೇಕಿದೆ. ಇಂದು ಸಂಜೆ ದೆಹಲಿಯಲ್ಲಿ ಕರ್ತವ್ಯ ಭವನ ಉದ್ಘಾಟಿಸಲಿರುವ ಪ್ರಧಾನಿ ಮೋದಿ..!



ಸನಾತನ ಧರ್ಮ

ಹುಟ್ಟು - ಅಂತ್ಯ ಕಾಣದ ಧರ್ಮವೇ ಸನಾತನ:

ಬೇರೆ ಧರ್ಮಗಳ ಪೈಪೋಟಿ ಇಲ್ಲದೇ ಏಕಚಕ್ರಾಧಿಪತ್ಯ ಹೊಂದಿದ್ದ ಪ್ರಾಚೀನ‌,ಪುರಾತನ  ಧರ್ಮವೇ ಸನಾತನ ಧರ್ಮ. ಸಿಂಧೂ ನದಿ ವ್ಯಾಪ್ತಿಯಲ್ಲಿ ವಿರಾಜಮಾನವಾಗಿ ವಿಜೃಂಭಿಸಿದ ಧರ್ಮವೇ ಸನಾತನ. ಸಾಕಷ್ಟು ಐತಿಹ್ಯವನ್ನ ತನ್ನಲ್ಲಿ ಬಚ್ಚಿಟ್ಟುಕೊಂಡಿರುವುದೇ ಸನಾತನ ಧರ್ಮ. ಹೀಗೆ ಒಂದೇ ನಿರ್ದಿಷ್ಟ  ವ್ಯಾಖ್ಯಾನದಲ್ಲಿ ವಿವರಿಸಲಾಗದೇ ಕೇವಲ ಅರ್ಥ ಮಾಡಿಕೊಂಡು ಜೀವನ ನಡೆಸಲು ಎಲ್ಲ ಹಂತದಲ್ಲೂ ಉಪಯೋಗಿಸಿಕೊಳ್ಳುವ ಉತ್ತಮ ಮಾರ್ಗವೇ ಸನಾತನ ಧರ್ಮ ಎಂದು ಕೆಲವೆಡೆ ಹೇಳಲಾಗಿದೆ. ಹಾಗೇ ಹಲವೆಡೆ ಹಿಂದೂ (Hinduism) ಧರ್ಮವನ್ನ ಅಳವಡಿಸಿಕೊಂಡಿರುವುದೇ ಸನಾತನ ಮಾರ್ಗ ಎಂದು ವಾದಿಸುವವರು ಇದ್ದಾರೆ.

ಗುರುತರವಾದ ಪ್ರಕರಣವೊಂದರಲ್ಲಿ ಖುದ್ದು ಸುಪ್ರೀಂ ಕೋರ್ಟ್() ಹೇಳಿದೆ. ಹಿಂದೂ ಎನ್ನುವುದು ಒಂದು ಧರ್ಮವಲ್ಲ ಬದಲಾಗಿ ಬದುಕುವ ರೀತಿ ಅಂತಾ ಅಭಿಪ್ರಾಯಿಸಿದೆ.


ಈ ಮಧ್ಯೆ ಬಲಪಂಥೀಯ(Right-wing) ಗುಂಪು ಎಂದಿನಂತೆ ಸನಾತನ ಎಂದರೆ ಉತ್ತಮ ಬದುಕುವ ಶೈಲಿಯೆಂದರೆ , ವಿರೋಧಿಗಳ ಗುಂಪು ಸನಾತನ ಜಾತಿ ವ್ಯವಸ್ಥೆ ಪೋಷಿಸುವ ಪಿಡುಗು ಎಂದು ಆರ್ಥೈಸುತ್ತದೆ. ಈ ಪ್ರಕಾರ ಕೆಲವು ವರ್ಷಕ್ಕೆ ಬೋದಿಸುವ, ಆಳುವ ಅಧಿಕಾರ ಕೊಟ್ಟು, ಮತ್ತೆ ಕೆಲವರಿಗೆ ದುಡಿಯುವ, ದೌರ್ಜನ್ಯಕ್ಕೆ ತುತ್ತಾಗುವ ಶಿಕ್ಷೆ ನೀಡುತ್ತದೆ ಎಂದು ಸನಾತನ ಧರ್ಮವನ್ನ ಟೀಕೆ ಮಾಡುವವರು ವಿವರಿಸುತ್ತಾರೆ.

ಸನಾತನ ಎಂಬುದು ಸಂಸ್ಕೃತ ಪದವಾಗಿದು, ಆದಿ - ಅನಂತ, ಪುರಾತನ ಎಂಬರ್ಥ ಹೊಂದಿದೆ. ಇನ್ನೂ, ಹಿಂದೂ ಧರ್ಮದಲ್ಲಿ ಈ ಗ್ರಂಥವನ್ನ ಅಧ್ಯಯನ ಮಾಡಿದರೆ, ಈ ರೀತಿ ಇರಬೇಕು ಎಂದು ಹಿಂದೂ ಧರ್ಮದಲ್ಲಿ ಎಲ್ಲೂ ಉಲ್ಲೇಖಗಳು ಇರುವುದ್ ಕಡಿಮೆ. ಹಾಗೇ ಹಿಂದೂ ಧರ್ಮದಲ್ಲಿ ಒಳಗೆ ಇರುವುದನ್ನ ಒಪ್ಪುವುದು, ಬದಲಾಯಿಸಲು ಅವಕಾಶ ಇದ್ದು, ಹೊರಗೆ ಇರುವುದನ್ನ ಸ್ವೀಕರಿಸಿ, ಬ್ಯಾಡ ಎಂದರೆ ಅದನ್ನ ಗಟ್ಟಿ ಧ್ವನಿಯಲ್ಲಿ ಬದಲಾವಣೆಗಳ ಹೇಳುವಷ್ಟ ಸ್ವಾತಂತ್ರ್ಯ ಇದೆ.


ಹಾಗೇ ಸನಾತನ ಧರ್ಮಕ್ಕೆ ಕೆಲವು ಮೌಲ್ಯಗಳನ್ನ ಗುರುತಿಸಲಾಗಿದೆ. ಒ, ನಂಬಿಕೆ, ನಿಯತ್ತು, ಪ್ರಾಮಾಣಿಕತನ ಇರಬೇಕಿದೆ. ಹಾಗೇ ಮನುಷ್ಯ ಬದುಕಿಗೆ ಬೇಕಿರುವುದು ಏನೆಲ್ಲ ಅಂಶಗಳು ಅನ್ನುವುದನ್ನ ರೂಢಿ ಮೂಲಕ ಕಲಿಸುವ ಯತ್ನಕ್ಕೂ ಕೈ ಹಾಕಿದೆ. ಈ ಪ್ರಕಾರ ಬದುಕಿಗೆ ಜ್ಞಾನ ಬೇಕು, ಬೆಳಿಗ್ಗೆ ಎದ್ದು ಧ್ಯಾನ ಮಾಡಬಹುದು, ತಮ್ಮ ಆಧ್ಯಾತ್ಮವನ್ನ ಯೋಗದಿಂದ ಸಂಪಾದಿಸಿದವರು ಯೋಗಿಗಳು. ಅವರಂತೆ ನಮ್ಮ ಬದುಕಿನ ಕರ್ಮವನ್ನ ಮಾಡಬೇಕು. ಬದುಕಲ್ಲಿ ಪಾಪ - ಪುಣ್ಯ ಪಾತ್ರವನ್ನೂ ಸನಾತನ ಧರ್ಮ ಉಲ್ಲೇಖಿಸುತ್ತದೆ. ಒಳ್ಳೆಯ ಕೆಲಸಕ್ಕೆ ಪುಣ್ಯ, ಪಾಪದ ಕೆಲಸಗಳಿಗೆ ಪಾಪದ ಗಂಟು ನಮ್ಮ ಬದುಕಿನ ಖಾತೆಗೆ ಕ್ರೆಡಿಟ್ ಆಗುವುದಂತೂ ಪಕ್ಕಾ ಆಗುತ್ತದೆ ಎಂಬ ನಂಬಿಕೆಯೂ ಇದೆ.

ಭರತ ಖಂಡ (Bharat Kanda)ದ ಆರಂಭಿಕ ದಿನದಿಂದಲೂ ಉತ್ತಮ ಜೀವನ ಶೈಲಿಯನ್ನ ಅನುಯಾಯಿಗಳು ಪಾಲಿಸುತ್ತಾ ಬಂದಿದ್ದಾರೆ. ಸಿಂಧೂ ನದಿಯಿಂದ ಹಿಂದೂ ಪದ ಬಂದಿದೆ ಅಂತಾ ಈಗಾಗಲೇ ನಿಮಗೆ ಮೇಲೆ ತಿಳಿದ ಮಾಹಿತಿಯಿಂದ ಗೊತ್ತಾಗಿದೆ. ಈ ಹಿಂದೂ ಧರ್ಮ ಆಚರಣೆಯಲ್ಲಿ ಪಶು ಪತಿ ಹಾಗೂ ಮಾತೃ ದೇವಿಯರನ್ನ ಆರಾಧನೆ ಮಾಡುವ ಪ್ರತೀತಿ ನಡೆಯುತ್ತಾ ಬಂದಿತು ಎಂಬ ಗ್ರಂಥ ಉಲ್ಲೇಖ ಮಾಹಿತಿ ಹೇಳುತ್ತಾ ಬಂದಿದೆ. ವೇದಗಳ ಸಾಹಿತ್ಯ ಮೂಲದಲ್ಲೂ ಸನಾತನ ಧರ್ಮದ ಆಚರಣೆ ,ಪ್ರಾಚೀನತೆ ಬಗ್ಗೆ ಹೇಳಲಾಗಿದೆ. ರಾಮಾಯಣ, ಭಗವತ್ ಗೀತೆ, ಮಹಾಭಾರತ ವೇದ ಎಲ್ಲೆಡೆ ಹೇಳಿರುವುದು ಇದೇ ಸನಾತನ ಧರ್ಮದ ಸಂಪ್ರದಾಯಗಳನ್ನ.

ಹಾಗೇ ಸನಾತನ ಧರ್ಮವನ್ನ ವಿರೋಧಿಸುವವರು ವರ್ಣಾಶ್ರಮ ಜೊತೆಗೆ ಜಾತಿ ವ್ಯವಸ್ಥೆಯನ್ನ ಪೋಷಿಸುತ್ತದೆ.


ಈ ವ್ಯವಸ್ಥೆಯ ಕೆಲ ಆಚರಣೆಗಳಿಂದ ಸಮಾಜದಲ್ಲಿ ಎಷ್ಟೆಲ್ಲ ಮೇಲು - ಕೀಳು ಉಂಟಾಗಿತು ಎನ್ನುವುದಕ್ಕೆ ನಿದರ್ಶನಗಳೂ ಇವೆ. ಇದನ್ನ ಗುರಿಯಾಗಿಸಿಕೊಂಡು ಅರ್ಹತೆ ಇದ್ದರೂ, ಆದ್ಯತೆ ದೊರೆಯದೇ ಇರಲು ಸನಾತನ ಧರ್ಮ ಆಚರಣೆ ಕಾರಣ ಎಂದು ಅಂದುಕೊಂಡಿರುವವರು ಈ ಆಚರಣೆಯನ್ನ ವಿರೋಧಿಸುತ್ತಾ ಬಂದಿದ್ದಾರೆ. ಹೀಗೆ ಟೀಕೆ ಮಾಡುವವರಿಗೆ ಅಸ್ತ್ರಗಳಿದೇಯೋ ಹಾಗೇ, ಇದನ್ನ ಸಮರ್ಥಿಸುವವರಿಗೂ ಪ್ರಬಲ ಅಸ್ತ್ರ ಪ್ರಯೋಗಿಸಿ ಸಮಾಜಕ್ಕೆ ತಕ್ಕಂತೆ ಎಲ್ಲವೂ ಸಮಾನತೆಯಿಂದ ಕಾಲಘಟ್ಟಕ್ಕೆ ತಕ್ಕಂತೆ ಬದಲಾಯಿಸಲು ಈ ಸನಾತನ ಧರ್ಮದಲ್ಲಿ ಅವಕಾಶ ಇದೆ. ಬೇರೆ ಧರ್ಮದಲ್ಲಿ ಆ ಅವಕಾಶ ಇಲ್ಲದಾಗಿದೆ. ಹೀಗಿರುವಾಗ ಬಹುಭಾಷಾ ನಟನಾಗಿದು, ಇತ್ತೀಚೆಗೆ ವಿಪಕ್ಷಗಳ ನಾಮ ನಿರ್ದೇಶಿತ ಸಂಸದನಾಗಿದು ಕೂಡ ಸಮಾಜ ಮುಖಿಯಾಗಿರು ಕಮಲ್ ಹಾಸನ್ ಜನರಿಗೆ ಒಂದು ಸಮುದಾಯ ಪೂಜಿಸುವ ಸನಾತನ ಧರ್ಮದ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿದಕ್ಕೆ ಟೀಕೆಗಳ ಸುರಿಮಳೆಯಾಗುತ್ತದೆ.

ಅದರಲ್ಲೂ ನಟರಾಗಿರುವ ಕಮಲ್ ಹಾಸನ್ ಹಲವು ಚಿತ್ರದಲ್ಲಿ ಸನಾತನ ಆಚರಣೆ ನಂಬುವ ಪಾತ್ರವನ್ನ ಮಾಡಿದ್ದಾರೆ. ಈ ಓಲೈಕೆ ರಾಜಕಾರಣಕ್ಕಾಗಿ ಸನಾತನ ಧರ್ಮವನ್ನೇ ಟೀಕಿಸಿರುವುದು ಸೋಷಿಯಲ್ ಮೀಡಿಯಾದ ಕೆಂಗಣ್ಣಿಗೆ ಕಾರಣವಾಗಿದೆ.


ತಮಿಳುನಾಡಿನ ಮೂಲದಿಂದಲೇ ಸನಾತನ‌ಧರ್ಮದ ಬಗ್ಗೆ ಟೀಕೆ ಇದೇನು ಮೊದಲ್ಲ ಬದಲಾಗಿ, ಬೃಹದೀಶ್ವರ ರಾಜ ರಾಜ ಚೋಳರು ಹಿಂದೂನೆ ಅಲ್ಲ ಅಂತಾ ಹೇಳಿದ ಸನ್ನಿವೇಶವೂ ಇದೆ. ಇಷ್ಟೆಲ್ಲ ಟೀಕೆಯ ತೋರಿಕೆಯನ್ನ ರಾಜಕೀಯ ನಾಯಕರು ಮಾಡುತ್ತಿದ್ದರೂ, ತಮಿಳುನಾಡಿನ ರಾಜ್ಯ ಸರ್ಕಾರದ ಲಾಂಭನದಲ್ಲಿ ಹಿಂದೂ ದೇಗುಲ ಹೋಲುವ ಲಾಂಭವವೂ ಇದೆ. ಆದರೂ ಇವರ ಟೀಕೆ ಪ್ರಚಾರ ಮಾತ್ರ ನಿಂತಿಲ್ಲ. ಆರ್ಯ ದ್ರಾವಿಡ ಚಳುವಳಿಯನ್ನ ಜೀವಂತವಾಗಿ ಇಡಲು ನಿರಂತರವಾಗಿ ತಮಿಳುನಾಡಿನ ಕೆಲ ನಾಯಕರ ಪ್ರಯತ್ನ ನಡೆಯುತ್ತಿತ್ತು. ದ್ರಾವಿಡರು ಮೂಲಿಗರು, ಆರ್ಯ ಹೊರಗಿನಿಂದ ಬಂದವರು ಅವರ ಆಚರಣೆಯನ್ನ ಒಪ್ಪಬಾರದು ಎನ್ನುವ ಸಿದ್ಧಾಂತವನ್ನ ದ್ರಾವಿಡರು ಹೊಂದಿದ್ದಾರೆ. ಈ ಪಟ್ಟಿಗೆ ಸಿನಿಮಾ ನಟ ಕಮಲ್ ಹಾಸನ್ ಸೇರ್ಪಡೆ ಆಗಿದೆ. ಈಗ ವಿಪಕ್ಷಗಳಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕಮಲ್ ಹಾಸನ್ ತಾವು ಹಿಂದೂ ಧರ್ಮದ ರಕ್ಷಕ ಎಂದು ಬಿಂಬಿಸಿಕೊಳ್ಳುವ ಬಿಜೆಪಿಗೆ ಟಾಂಗ್ ಕೊಡುವ ಭರದಲ್ಲಿ ಸನಾತನ ಧರ್ಮ ಟೀಕಿಸುವ ಕೆಲಸಕ್ಕೆ ಕಮಲ್ ಕೈ ಹಾಕಿದ್ದಾರೆ.

ASICS Men Gel-Nimbus 26 Running Shoe

ಕಮಲ್ ಹಾಸನ್ ಸಕ್ಸಸ್ ಫುಲ್ ನಾಯಕ ನಟ, ಸಂಸದ ಹಾದು. ಇವರೇ ಹೇಳುವ ಪ್ರಕಾರ ಬಹುಸಂಖ್ಯಾತರು ಸಮಾಜದಲ್ಲಿ ಅವಕಾಶ ಕೊಡಲ್ಲ, ಬಿಡಲ್ಲ ಬೆಳೆಯಲು ಎನ್ನುವುದು ಸತ್ಯವಾಗಿದರೆ ಇವತ್ತೂ ಇವರ ಸ್ಥಾನ ಟೀಕಿಸುವ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಬದಲಾಗಿ ಅವರೇ ಹೇಳಿದಂತೆ ಕೇಳುವ ಸ್ಥಿತಿ ಎದುರಿಸಬೇಕಾಗಿತು. ಆಧುನಿಕ ಸಮಾಜದಲ್ಲಿ ಒಳಿತನ್ನ ಪಡೆಯುವ, ಕೆಡಕನ್ನ ತಿರಸ್ಕರಿಸುವ ಪೂರ್ಣ ಅವಕಾಶ ಇದೆ. ಹೀಗಿರುವಾಗ ರಾಜಕೀಯ, ಮಾತನಾಡುವ ಉದ್ದೇಶಕ್ಕಾಗಿ ವ್ಯವಸ್ಥೆ ಟೀಕಿಸುವ ಭರಕ್ಕೆ ಕಮಲ್ ಹಾಸನ್ ಕೈ ಹಾಕಿರುವುದ್ ಎಷ್ಟ ಸರಿ ಅನ್ನುವ ಚರ್ಚೆ ಜೋರಾಗಿದೆ.