ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ವಿಶ್ವದಾದ್ಯಂತ ಹೆಸರು ಮಾಡಿದೆ. 1969ರಲ್ಲಿ ಸ್ಥಾಪಿತವಾದ ISRO, ಇಂದು ಬಾಹ್ಯಾಕಾಶ ಸಂಶೋಧನೆ ಮತ್ತು ರಾಕೆಟ್ ಎಂಜಿನಿಯರಿಂಗ್‌ನಲ್ಲಿ ಅಗ್ರಗಣ್ಯ ಸಂಸ್ಥೆಯಾಗಿದೆ. ವಿಶೇಷವಾಗಿ, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಪರಿಣಾಮ ತರುವ ಉಡಾವಣೆಗಳಲ್ಲಿ ISRO ದೊಡ್ಡ ಶಕ್ತಿ.
ISRO ಹೆಮ್ಮೆ ಎಂದರೆ Polar Satellite Launch Vehicle (PSLV). ಈ ರಾಕೆಟ್‌ನಿಂದ ಭಾರತವು ನೂರಾರು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾಯಿಸಿದೆ. 2017ರಲ್ಲಿ PSLV ಒಂದೇ ಬಾರಿ 104 ಉಪಗ್ರಹಗಳನ್ನು ಉಡಾಯಿಸಿ ವಿಶ್ವದ ದಾಖಲೆ ನಿರ್ಮಿಸಿತು. ಅದೇ ರೀತಿ Geosynchronous Satellite Launch Vehicle (GSLV Mk III) ಅಥವಾ LVM3 ಮೂಲಕ ಭಾರತ ದೊಡ್ಡ ಉಡಾವಣೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ.
ISRO ಸಾಧನೆಗಳಲ್ಲಿ ಚಂದ್ರಯಾನ ಮಿಷನ್‌ಗಳು ವಿಶೇಷ. 2008ರ ಚಂದ್ರಯಾನ-1 ಭಾರತವನ್ನು ಚಂದ್ರನತ್ತ ಕೊಂಡೊಯ್ದರೆ, 2023ರ ಚಂದ್ರಯಾನ-3 ಭಾರತದ ತಂತ್ರಜ್ಞಾನ ಸಾಮರ್ಥ್ಯವನ್ನು ವಿಶ್ವದ ಮುಂದೆ ತೋರಿಸಿತು. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರವಾಗಿ ಭಾರತ ಇತಿಹಾಸ ನಿರ್ಮಿಸಿತು. ಇದೇ ರೀತಿ, ಮಂಗಳಯಾನ (Mangalyaan) ಕೂಡಾ ವಿಶ್ವದ ಗಮನ ಸೆಳೆಯಿತು. ಅತೀ ಕಡಿಮೆ ವೆಚ್ಚದಲ್ಲಿ ಮಂಗಳನ ಕಕ್ಷೆಗೆ ಯಶಸ್ವಿಯಾಗಿ ತಲುಪಿದ ಭಾರತ ಪ್ರಪಂಚಕ್ಕೆ ಅಚ್ಚರಿ ಪಡಿಸಿತು.
ರಾಕೆಟ್ ಎಂಜಿನಿಯರಿಂಗ್‌ನಲ್ಲಿ ISROನ ವೈಶಿಷ್ಟ್ಯವೆಂದರೆ ಕಡಿಮೆ ವೆಚ್ಚ, ಹೆಚ್ಚು ನಿಖರತೆ. ಇತರ ರಾಷ್ಟ್ರಗಳು ಕೋಟಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡುವಾಗ, ಭಾರತ ಅದಕ್ಕಿಂತ ತುಂಬಾ ಕಡಿಮೆ ಹಣದಲ್ಲಿ ಅದೇ ಮಟ್ಟದ ಯಶಸ್ಸು ಸಾಧಿಸುತ್ತಿದೆ. ಅದಕ್ಕಾಗಿ ಅನೇಕ ದೇಶಗಳು ತಮ್ಮ ಉಪಗ್ರಹಗಳನ್ನು ಉಡಾಯಿಸಲು ಇಂದಿಗೂ ISRO ಮೇಲೆಯೇ ಅವಲಂಬಿಸಿವೆ.
ಇದು ಕೇವಲ ತಂತ್ರಜ್ಞಾನವಲ್ಲ, ಅದು ನಮ್ಮ ವಿಜ್ಞಾನಿಗಳ ಶ್ರಮ, ಪರಿಶ್ರಮ ಮತ್ತು ನಾವೀನ್ಯತೆಯ ಫಲ. ISROದ ಮಹಿಳಾ ಹಾಗೂ ಪುರುಷ ವಿಜ್ಞಾನಿಗಳು ದಿನರಾತ್ರಿ ದುಡಿದು ಭಾರತವನ್ನು ವಿಶ್ವದ ಮಟ್ಟದಲ್ಲಿ ಮುನ್ನಡೆಸುತ್ತಿದ್ದಾರೆ.
ಭವಿಷ್ಯದಲ್ಲಿ ISRO ಗಗನ್ಯಾ(ಮಾನವರ ಬಾಹ್ಯಾಕಾಶ ಪ್ರಯಾಣ), ಮಂಗಳಯಾನ-2, ಹಾಗೂ ಇತರ ಆಕರ್ಷಕ ಮಿಷನ್‌ಗಳನ್ನು ಕೈಗೊಳ್ಳುತ್ತಿದೆ. ಇವು ಭಾರತದ ತಂತ್ರಜ್ಞಾನ ಶಕ್ತಿಯನ್ನು ಮತ್ತಷ್ಟು ಬೆಳಗಿಸಲಿವೆ. ಒಟ್ಟಿನಲ್ಲಿ ಹೇಳುವುದಾದರೆ, ISRO ರಾಕೆಟ್ ಎಂಜಿನಿಯರಿಂಗ್ ಕೇವಲ ತಂತ್ರಜ್ಞಾನ ಸಾಧನೆ ಅಲ್ಲ. ಇದು ಭಾರತದ ಕನಸು, ಶ್ರಮ ಮತ್ತು ಹೆಮ್ಮೆ.