ಈ ಹಿಂದೆ ಯತೀಂದ್ರ ಅವರು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವಡಿ ಮಹಾರಾಜರಿಗಿಂತ ಹೆಚ್ಚು ಕೆಲಸಗಳನ್ನು ಮಾಡಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಸಾಕಷ್ಟು ಪರ-ವಿರೋಧ ಚರ್ಚೆಗಳಾಗಿದ್ದು ಈ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲವು ನಾಯಕರು ಈ ಹೇಳಿಕೆ ಬಾಲಿಶ ಮತ್ತು ಮೈಸೂರು ಮಹಾರಾಜರಿಗೆ
ಹೋಲಿಕೆಯಾಗುವಂತಹ ಯಾವುದೇ ಯೋಜನೆಗಳನ್ನು ಸಿದ್ದರಾಮಯ್ಯ ನೀಡಿಲ್ಲ ಎಂದು ಹರಿಹಾಯ್ದಿದ್ದರು. ಈ ಹೇಳಿಕೆಯನ್ನು ನೆನಪಿಸಿದ ಎಂ. ಲಕ್ಷ್ಮಣ್ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಅವರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.Fflirtygo Men Graphic Print Cotton T-Shirt & Short Set for Men/Boys
3800 ಕೋಟಿಯನ್ನು ಸಿದ್ದರಾಮಯ್ಯ ಅವರು ಮೈಸೂರು ನಗರಕ್ಕೆನೀಡಿದ್ದಾರೆ ಹಾಗೂ ರಸ್ತೆಗಳ ನಿರ್ಮಾಣ, ಆಸ್ಪತ್ರೆಗಳ ನಿರ್ಮಾಣ ಹೀಗೆ ಹಲವು ರೀತಿಯ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಮೈಸೂರಿಗೆ ನೀಡಿದ್ದಾರೆ ಹೀಗಾಗಿ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಮುಂಚೆ ಯೋಚಿಸಿ ಮಾತನಾಡಬೇಕು ಎಂದರು.. ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾತನಾಡಿದ ಎಂ. ಲಕ್ಷ್ಮಣ ಅವರು ನಿಮ್ಮ ಮೊಬೈಲ್ ಏನಾದರೂ sitಗೆ ಕೊಟ್ಟುಬಿಟ್ಟರೆ ನೂರಕ್ಕೆ ನೂರು ಪ್ರತಿಶತ ಪ್ರಜ್ವಲ್ ರೇವಣ್ಣ ತರ ನೀವು ಒಳಗಡೆ ಹೋಗುತ್ತೀರ ಎಂದಿದ್ದಾರೆ.