ದಿನನಿತ್ಯ ಕೊಲೆ ದರೋಡೆ ಹೆಸರಿನಲ್ಲಿ ಇನ್ನೊಬ್ಬರ ಪ್ರಾಣವನ್ನ ಯಾರೋ ಬಂದು ಎಲ್ಲಿಂದಾನೋ ತೆಗೆದು ಹೋಗುತ್ತಿರಬೇಕಾದರೆ ಆದರೆ ಇಲ್ಲಿ ಒಬ್ಬ ಡ್ರೈವರ್ ತನ್‌ತಾನೆ ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಹೆಸರು ಬರೆದಿಟ್ಟು ಚಾಲಕ ಆತ್ಮಹತ್ಯೆ ಮಾಡಿಕೊಂಡಿರೋ ಪ್ರಕರಣ ದಾಖಲಾಗಿದೆ.
ಈತ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ, ಜಿಲ್ಲಾ ಪಂಚಾಯತ್‌ನಲ್ಲಿ ಕೆಲಸ ಮಾಡುವ ಚೀಫ್ ಅಕೌಟೆಂಟ್ ಅವರ ಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಬಾಬು ಎಂಬವವರು ಗುತ್ತಿಗೆ ಆಧಾರಿತವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುಂಚಿತವಾಗಿ ಚೀಟಿ ಬರೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಚೀಟಿಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಮತ್ತು ಅವರ ಬೆಂಬಲಿಗ ನಾಗೇಶ್ ಅವರು ಹೆಸರು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಆ ಡೆತ್ ನೋಟ್‌ನಲ್ಲಿ ಲೋಕಸಭೆ ಸದಸ್ಯರ ಹೆಸರು ಸಹ ಉಲ್ಲೇಖವಾಗಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಜಬಲ್ಪುರದಲ್ಲಿ ದೊಡ್ಡ ಪ್ರಮಾಣದ ಚಿನ್ನದ ನಿಕ್ಷೇಪ ಪತ್ತೆ: ಭೂವಿಜ್ಞಾನಿಗಳ ಸಂಶೋಧನೆಯ ಮಹತ್ವದ ಫಲಿತಾಂಶ!
ಯಾರೇ ಆದರೂ ಕಾನೂನು ಪ್ರಕಾರ ತನಿಖೆ ಆಗಬೇಕು. ಅವರು ಪ್ರಭಾವಿ ವ್ಯಕ್ತಿಗಳು ಹಾಗೇ ಹೀಗೆ ಅವರ ಹತ್ತಿರ ಸಂಪತ್ತಿದೆ, ಕಾನೂನು ಅವರ ಕೈಯಲ್ಲಿದೆ ,ಪ್ರಭಾವಿಗಳು ಅಂತೆಲ್ಲಾ ಅವರನ್ನು ಬಿಡಬಾರದು ಸುಧೀರ್ಘ ತನಿಖೆ ಅಗಬೇಕು ಅಂತ ಸಂಬಂಧಿಕರು ಆಗ್ರಹಿದ್ದಾರೆ. ಅಲ್ಲ ಅದೇನೇ ಸಮಸ್ಯೆ ಇದ್ರುನೂ ಕೂತು ಮಾತಾಡಿ ಬಗೆಹರಿಸಿಕೊಳ್ಳಬಹುದಿತ್ತು ಆದರೆ ಪ್ರಾಣ ಕಳ್‌ಕೋಳ್ಳೋ ಅಂತ ಸಮಸ್ಯೆ ಏನಿತ್ತು ಅಂತ ಅರ್ಥ ಅಗುತ್ತಿಲ್ಲ.
Symbol Premium Men's Wrinkle-Resistant Regular Fit Cotton Formal Shirt