Skip to main content
ವಿಡಿಯೋ
cinema

ಟಾಮ್ ಹಾಲೆಂಡ್ ರಿಯಲ್ ಸ್ಟಂಟ್ ನೋಡಿ ಅಭಿಮಾನಿಗಳಿಗೆ ಕ್ರಶ್! ಅಬ್ಬಾ ಸ್ಪೈಡರ್ ಮ್ಯಾನ್ ಇಷ್ಟೊಂದು ರಿಸ್ಕ್?

By Ram Chethan
ಟಾಮ್ ಹಾಲೆಂಡ್ ರಿಯಲ್ ಸ್ಟಂಟ್ ನೋಡಿ ಅಭಿಮಾನಿಗಳಿಗೆ ಕ್ರಶ್! ಅಬ್ಬಾ ಸ್ಪೈಡರ್ ಮ್ಯಾನ್ ಇಷ್ಟೊಂದು ರಿಸ್ಕ್?

ಟಾಮ್ ಹಾಲೆಂಡ್ ಸ್ಪೈಡರ್ ಮ್ಯಾನ್ ವೇಷದಲ್ಲಿ ಓಡುತ್ತಿರುವುದು, ಟ್ಯಾಂಕ್ ಮೇಲೆ ಹಾರುತ್ತಿರುವುದು, ಚಲಿಸುವ ಕಾರಿನ ಮೇಲೆ ಸ್ಟಂಟ್ ಮಾಡುತ್ತಿರುವ ದೃಶ್ಯಗಳು ಕಾಣಿಸುತ್ತವೆ.

ಹಾಲಿವುಡ್‌ನ ಜನಪ್ರಿಯ ನಟ ಟಾಮ್ ಹಾಲೆಂಡ್ ಮತ್ತು ಅವರ ಸ್ಟಂಟ್ ಡಬಲ್ ಇತ್ತೀಚೆಗೆ ಬ್ರಿಟನ್‌ನ ಗ್ಲ್ಯಾಸ್ಗೋ ನಗರದಲ್ಲಿ ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಚಿತ್ರೀಕರಿಸಿದ ಬೃಹತ್ ಚೇಸಿಂಗ್ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚಿತ್ರದ ಆಯ್ದ ಭಾಗಗಳನ್ನು ಚಿತ್ರೀಕರಿಸಲು ಗ್ಲ್ಯಾಸ್ಗೋ ನಗರದ ರಸ್ತೆಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿದ್ದವು. ಈ ಸಂದರ್ಭ, ಸ್ಟಂಟ್ ತಂಡ ಹಾಗೂ ಕ್ಯಾಮೆರಾ ಸಿಬ್ಬಂದಿಗಳು ಸ್ಫೋಟಕ ಆಕ್ಷನ್ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ತೊಡಗಿದ್ದರು. ಊರಿನ ಜನರಿಗೆ ಇದು ಸಿನೆಮಾ ಚಿತ್ರೀಕರಣದ ನೇರ ಅನುಭವವನ್ನು ನೀಡಿದಂತಾಯಿತು.

Seiko Aluminium Analog Orange Dial Men's Watch-Ssk005K1

ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ಟಾಮ್ ಹಾಲೆಂಡ್ ಸ್ಪೈಡರ್ ಮ್ಯಾನ್ ವೇಷದಲ್ಲಿ ಓಡುತ್ತಿರುವುದು, ಟ್ಯಾಂಕ್ ಮೇಲೆ ಹಾರುತ್ತಿರುವುದು, ಚಲಿಸುವ ಕಾರಿನ ಮೇಲೆ ಸ್ಟಂಟ್ ಮಾಡುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಈ ದೃಶ್ಯಗಳಿಗಾಗಿ ಅವರಿಗೆ ಭದ್ರತಾ ಕೇಬಲ್‌ಗಳು ಜೋಡಿಸಲಾಗಿತ್ತು. ಇದು ಆಕ್ಷನ್ ದೃಶ್ಯಗಳಾದರೂ ಸಹ, ಎಲ್ಲಾ ಬಗೆಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.

ಮಡೆನೂರು ಮನು ಮೇಲೆ ಅತ್ಯಾ*ರ ಆರೋಪ ಮಾಡಿದ್ದ ಮಿಂಚು ಉಲ್ಟಾ ಹೊಡೆದ್ರಾ? ಕೇಸ್ ವಾಪಸ್ ತಗೊಂಡಿದ್ದು ಯಾಕೆ?

ಗ್ಲ್ಯಾಸ್ಗೋ ನಗರ ಈ ಚಿತ್ರೀಕರಣದಿಂದ ಕೆಲ ದಿನಗಳ ಕಾಲ ಮಾರ್ವೆಲ್ ಸಿನೆಮಾ ಲೋಕದ ಹಿನ್ನಲೆಯಲ್ಲಿ ಬದಲಾಗಿರುವಂತಾಯಿತು. ಸ್ಥಳೀಯ ಅಭಿಮಾನಿಗಳು ಇದನ್ನು ಉತ್ಸಾಹದಿಂದ ಸ್ವೀಕರಿಸಿ, ಸೆಟ್‌ನಲ್ಲಿ ಕಂಡಂತೆ ತಮ್ಮ ಮೊಬೈಲ್‌ಗಳಿಂದ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಇದರಿಂದ ಸಿನಿಮಾ ಬಿಡುಗಡೆಗಿಂತ ಮುಂಚೆ ಈ ಚಿತ್ರಕ್ಕೆ already ಭಾರೀ ಕುತೂಹಲ ನಿರ್ಮಾಣವಾಗಿದೆ.