Skip to main content
ವಿಡಿಯೋ
1/2
local

ಆರ್‌ಸಿಬಿ ಕಾಲ್ತುಳಿತ: ಮೈಕಲ್‌ ಕುನ್ಹಾ ವರದಿ ಪ್ರಶ್ನಿಸಿ ಡಿಎನ್‌ಎ ಹೈಕೋರ್ಟ್‌ಗೆ ಅರ್ಜಿ

By Pavitra Ganapathi Baradavalli
ಆರ್‌ಸಿಬಿ ಕಾಲ್ತುಳಿತ: ಮೈಕಲ್‌ ಕುನ್ಹಾ ವರದಿ ಪ್ರಶ್ನಿಸಿ  ಡಿಎನ್‌ಎ ಹೈಕೋರ್ಟ್‌ಗೆ ಅರ್ಜಿ

ಸುಮಾರು ದಿನಗಳ ಹಿಂದೆ ಆರ್‌ಸಿಬಿ (RCB) ವಿಜಯೋತ್ಸವದ ವೇಳೆಗೆ ಸಂಭ್ರಮಕ್ಕೆಂದು ಚಿನ್ನ ಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ ಕೆಲವರು ಹೆಣವಾಗಿ ಸಿಕ್ಕಿದರು. ಈಗ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ (STAMPEDE) ಕೇಸ್‌ಗೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್‌ ಲಭ್ಯವಾಗಿದೆ.

ಬೆಂಗಳೂರು: ಸುಮಾರು ದಿನಗಳ ಹಿಂದೆ ಆರ್‌ಸಿಬಿ (RCB) ವಿಜಯೋತ್ಸವದ ವೇಳೆಗೆ ಸಂಭ್ರಮಕ್ಕೆಂದು ಚಿನ್ನ ಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ ಕೆಲವರು ಹೆಣವಾಗಿ ಸಿಕ್ಕಿದರು. ಈಗ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ (STAMPEDE) ಕೇಸ್‌ಗೆ ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್‌ ಲಭ್ಯವಾಗಿದೆ.

Symbol Premium Men's Wrinkle-Resistant Regular Fit Cotton Formal Shirt

ಚಿನ್ನಸ್ವಾಮಿ ಸ್ಟೇಡಿಯಂ (CHINNASWAMY STADIUM) ಕಾಲ್ತುಳಿತದಲ್ಲಿ 11  ಜನರ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಮೈಕೆಲ್‌ ಕುನ್ಹಾ ವರದಿ ಪ್ರಶ್ನಿಸಿ ಡಿಎನ್‌ಎ ಹೈಕೋರ್ಟ್‌ ( HIGHCOURT) ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಕೆ ಮಾಡಿದೆ. ಹೈಕೋರ್ಟ್‌ ವಿಭಾಗೀಯ ಪೀಠದಲ್ಲಿ ಇಂದು ಅರ್ಜಿ ವಿಚಾರಣೆ ನಡೆಯಲಿದೆ.


ಹಿಂದೆ ಆರ್‌ಸಿಬಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಹಿಂದೆ  ಮುಚ್ಚಿದ ಲಕೋಟೆಯಲ್ಲಿ ನ್ಯಾಯಮೂರ್ತಿ ಮೈಕಲ್‌ ಕುನ್ಹಾ  (Michael D'Cunha) ವರದಿ ಸಲ್ಲಿಕೆಯಾಗಿತ್ತು. ಹೈಕೋರ್ಟ್‌ಗೆ ಅಡ್ವೊಕೆಟ್‌ ಜನರಲ್‌ ಆದಂತಹ ಶಶಿಕಿರಣ್‌ ಶೆಟ್ಟಿ ಅವರು ವರದಿ ಸಲ್ಲಿಸಿದ್ದರು. ವರದಿ ಪರಿಶೀಲಿಸಿದ ನ್ಯಾಯಮೂರ್ತಿ (JUSTICE) ಜಯಂತ್ ಬ್ಯಾನರ್ಜಿ, ಉಮೇಶ್ ಎಂ ಅಡಿಗ ಅವರ ಪೀಠ ಎಸ್. ಕಿರಣ್ ಕುಮಾರ್ ಯಾರೆಂದು ಡಿಎನ್ಎ ಪರ ವಕೀಲರಿಗೆ ಪ್ರಶ್ನೆ ಹಾಕಿತ್ತು.

ಇದನ್ನೂ ಓದಿ: ತುಮಕೂರು: ನಿಗೂಢವಾಗಿ 20 ನವಿಲುಗಳ ಸಾವು, ತನಿಖೆಗೆ ಆದೇಶ

ಆಗ ಡಿಎನ್‌ಎ ಪರ ವಕೀಲರು ( LAWYER) ಕಿರಣ್‌ ಕುಮಾರ್‌ ಡಿಎನ್ಎ (DNA)  ಸಂಸ್ಥೆಯ ಉದ್ಯೋಗಿ ಎಂದು ಅರ್ಜಿದಾರರ ಉತ್ತರಿಸಿದ್ದರು. ನಂತರ ಪೀಠವು ಜುಲೈ 4 ರಂದು ಆಯೋಗದ ಮುಂದೆ ಹಾಜರಾಗಲು ಸಂಸ್ಥೆಯ ಅನುಮತಿ ಇತ್ತೇ ?  ಎಂದು ಹೈಕೋರ್ಟ್ ಪ್ರಶ್ನಿಸಿತ್ತು. ಈಬಗ್ಗೆ ಮಾಹಿತಿ ಪಡೆದು ಉತ್ತರಿಸುವುದಾಗಿ ವಕೀಲರು ಪ್ರತಿಕ್ರಿಯಿಸಿದ್ದರು. ಆದರೆ ಈ ಕೇಸ್‌ಗೆ ಸಂಬಂಧಿಸಿದ ಕುರಿತು ವಿಚಾರಣೆನ್ನು ಹೈಕೋರ್ಟ್‌ ಆಗಷ್ಟ್‌ 12ಕ್ಕೆ ಮುಂದೂಡಿದೆ.