Skip to main content
ವಿಡಿಯೋ
crime

ʼಡೆತ್‌ನೋಟ್‌ʼ ವೆಬ್‌ಸೀರಿಸ್‌ನಿಂದ ಪ್ರೇರಿತನಾಗಿ 14 ವರ್ಷದ ಬಾಲಕನಿಂದ ʼಡೆತ್‌ನೋಟ್‌ʼ ಬರೆದು ಆತ್ಮಹತ್ಯೆ: ನಿಮ್ಮ ಮನೆಯ ಮಕ್ಕಳು ಹುಷಾರ್‌..! ಈ ವರದಿ ನೋಡಿ

By Gireesh Vasishta
ʼಡೆತ್‌ನೋಟ್‌ʼ ವೆಬ್‌ಸೀರಿಸ್‌ನಿಂದ ಪ್ರೇರಿತನಾಗಿ 14 ವರ್ಷದ ಬಾಲಕನಿಂದ ʼಡೆತ್‌ನೋಟ್‌ʼ ಬರೆದು  ಆತ್ಮಹತ್ಯೆ: ನಿಮ್ಮ ಮನೆಯ ಮಕ್ಕಳು ಹುಷಾರ್‌..! ಈ ವರದಿ ನೋಡಿ

ರಾತ್ರಿ ಊಟ ಮಾಡಿ ತನ್ನ ಪ್ರೀತಿಯ ನಾಯಿ ರಾಕಿ ಜೊತೆಗೆ ಮಲಗಿದ್ದ ಗಂಧಾರ್ ಬೆಳಗಿನ ವೇಳೆ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದ. ನೇಣಿಗೆ ಶರಣಾಗುವ ಮೊದಲು ಒಂದು ಡೆತ್ ನೋಟ್ (Death Note) ಬರೆದಿದ್ದ. ಅದರಲ್ಲಿ ತಂದೆ ತಾಯಿಯನ್ನು ಕುರಿತು ನೀವು ನನ್ನನ್ನು 14 ವರ್ಷ ಚೆನ್ನಾಗಿಯೇ ಸಾಕಿದ್ದೀರಿ. ನಿಮ್ಮ ಜೊತೆಗೆ ನಾನು ತುಂಬಾ ಖುಷಿಯಾಗಿದ್ದೆ. ಆದರೆ ನಾನು ಹೋಗುವ ಸಮಯ ಬಂದಿದೆ. ಈ ಪತ್ರ ಓದುವ ವೇಳೆಗೆ ನಾನು ಸ್ವರ್ಗದಲ್ಲಿ ಇರುತ್ತೇನೆ ಎಂಬ ಡೆತ್ ನೋಟ್ ಬರೆದಿದ್ದ.

ಬೆಂಗಳೂರು:  ಸಾಧಾರಣವಾಗಿ ಈಗಿನ ಕಾಲದ ಮಕ್ಕಳು ಅನಿಮೇಟೆಡ್ ವೆಬ್ ಸೀರೀಸ್‌ಗಳನ್ನು ಹೆಚ್ಚಾಗಿ ನೋಡುವುದು ವಾಡಿಕೆ ಹೀಗಾಗಿ ಆ ಅನಿಮೇಟೆಡ್ ಸೀರೀಸ್‌ಗಳಲ್ಲೆ ಈಗಿನ ಕಾಲದ ಮಕ್ಕಳು ಜೀವಿಸುತ್ತಾರೆ, ಎಷ್ಟೇ ಬೇಡವೆಂದರು ಹಠ ಮಾಡಿಯಾದರೂ ಮಕ್ಕಳು ಅದನ್ನು ನೋಡಲು ಬಯಸುತ್ತಾರೆ. ಆದರೆ ಕೆಲವು ಮಕ್ಕಳು ಅದನ್ನು ಅತಿರೇಕಕ್ಕೆ ಕೊಂಡೊಯ್ದು ತಮ್ಮ ಜೀವವನ್ನೇ ಬಲಿಕೊಡುತ್ತಾರೆ, ಬೆಂಗಳೂರಿನಲ್ಲಿ ಈ ರೀತಿಯ ಘಟನೆ ಒಂದು ಜರುಗಿದೆ.Monte Carlo Mens Solid Lace Up Genuine Leather Casual Shoes (201803FW)

3 ದಿನಗಳ ಹಿಂದೆ ಬೆಂಗಳೂರಿನ ಚೆನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 14 ವರ್ಷದ ಬಾಲಕ ಗಂಧಾರ್ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದ. ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ಅಮ್ಮ, ಅಣ್ಣ ಎಲ್ಲರ ಜೊತೆಗೂ ಚೆನ್ನಾಗಿಯೇ ಇದ್ದ, ಆ ಬಾಲಕ ಏಕಾಏಕಿ ನೇಣಿಗೆ ಶರಣಾಗಿದ್ದು ಎಲ್ಲರಿಗೂ ಶಾಕ್‌ ಆಗಿದೆ. ಈ ಪ್ರಕರಣದ ತನಿಖೆಗೆ ಇಳಿದಾಗ ಹಲವರು ಶಾಕಿಂಗ್‌ ವಿಚಾರಗಳು ಮುನ್ನೆಲೆಗೆ ಬಂದಿವೆ.

ರಾತ್ರಿ ಊಟ ಮಾಡಿ ತನ್ನ ಪ್ರೀತಿಯ ನಾಯಿ ರಾಕಿ ಜೊತೆಗೆ ಮಲಗಿದ್ದ ಗಂಧಾರ್ ಬೆಳಗಿನ ವೇಳೆ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದ. ನೇಣಿಗೆ ಶರಣಾಗುವ ಮೊದಲು ಒಂದು ಡೆತ್ ನೋಟ್ (Death Note) ಬರೆದಿದ್ದ. ಅದರಲ್ಲಿ ತಂದೆ ತಾಯಿಯನ್ನು ಕುರಿತು ನೀವು ನನ್ನನ್ನು 14 ವರ್ಷ ಚೆನ್ನಾಗಿಯೇ ಸಾಕಿದ್ದೀರಿ. ನಿಮ್ಮ ಜೊತೆಗೆ ನಾನು ತುಂಬಾ ಖುಷಿಯಾಗಿದ್ದೆ. ಆದರೆ ನಾನು ಹೋಗುವ ಸಮಯ ಬಂದಿದೆ. ಈ ಪತ್ರ ಓದುವ ವೇಳೆಗೆ ನಾನು ಸ್ವರ್ಗದಲ್ಲಿ ಇರುತ್ತೇನೆ ಎಂಬ ಡೆತ್ ನೋಟ್ ಬರೆದಿದ್ದ.

ಪ್ರಕರಣ ದಾಖಲಿಸಿದ ಪೊಲೀಸರು ತನಿಖೆಗೆ ಇಳಿದಾಗ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಗಂಧಾರ್, ಜಪಾನೀಸ್ ಭಾಷೆಯಲ್ಲಿ ಬಿಡುಗಡೆಯಾಗಿ ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದ್ದ ಡೆತ್ ನೋಟ್(Death Note)  ವೆಬ್‌ ಸೀರಿಸ್‌ನ (Web Series) ಎಲ್ಲಾ ಸಂಚಿಕೆಯನ್ನು ತಪ್ಪದೇ ನೋಡುತ್ತಿದ್ದ. ಅಷ್ಟೇ ಅಲ್ಲದೇ ಆ ವೆಬ್ ಸಿರಿಸ್ ಬರುವ ಒಂದು ಪಾತ್ರವನ್ನು ಗಂಧಾರ್‌ ತನ್ನ ರೂಮಿನಲ್ಲಿ ಬಿಡಿಸಿದ್ದ.

ಈ ವೆಬ್‌ ಸೀರಿಸ್‌ನಲ್ಲಿ ಒಂದು ಪಾತ್ರವಿದ್ದು. ಆ ಪಾತ್ರ ಹೇಳಿದಂತೆ ಹೀರೋ ನಡೆದುಕೊಳ್ಳುತ್ತಾನೆ. ಆ ಮಾಯಬುಕ್‌ನಲ್ಲಿ ಯಾರ ಹೆಸರು ಬರೆದು ಅವರು ಹೇಗೆ ಸಾಯಬೇಕು ಎಂದು ಊಹೆ ಮಾಡಿಕೊಂಡರೆ ಆ ವ್ಯಕ್ತಿ ಆ ರೀತಿ ಸಾಯುತ್ತಾನೆ. ಕೆಟ್ಟವರು ಯಾರು ಕೂಡ ಭೂಮಿ ಮೇಲೆ ಬದಕಬಾರದು. ಅವರನ್ನು ಕೊಲೆ ಮಾಡಬೇಕು ಎನ್ನುವುದೇ ಆ ವೆಬ್‌ ಸೀರಿಸ್‌ನ ಕಥಾವಸ್ತು.

ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಅವರ ₹439 ಕೋಟಿ ಸಾಲ ವಂಚಿಸಿರುವ ಆರೋಪ: ವಿಚಾರಣೆ ನಡೆಸಲಿರುವ ಹೈಕೋರ್ಟ್. ಏನಿದು ಪ್ರಕರಣ.?

ಡೆತ್ನೋಟ್ ಅನಿಮೇಟೆಡ್‌ ವೆಬ್ ಸೀರೀಸ್‌ ಬಗ್ಗೆ:
ಡೆತ್
ನೋಟ್ಒಂದು ಜನಪ್ರಿಯ ಜಪಾನೀಸ್ಮಾಂಗಾ ಮತ್ತು ಅನಿಮೆ ಸರಣಿಯಾಗಿದ್ದು, ಇದನ್ನು ತ್ಸುಗುಮಿ ಒಹ್ಬಾ ಬರೆದಿದ್ದಾರೆ ಮತ್ತು ತಕೇಶಿ ಒಬಾಟಾ ಚಿತ್ರಿಸಿದ್ದಾರೆ. ಸರಣಿಯು ಲೈಟ್ಯಾಗಾಮಿ ಎಂಬ ಒಬ್ಬ ವಿದ್ಯಾರ್ಥಿಯ ಕಥೆಯನ್ನು ಕೇಂದ್ರೀಕರಿಸುತ್ತದೆ, ಅವನು ಡೆತ್ನೋಟ್ಎಂಬ ಅತೀಂದ್ರಿಯ ನೋಟ್ಬುಕ್ಅನ್ನು ಪಡೆಯುತ್ತಾನೆ. ನೋಟ್ಬುಕ್ನಲ್ಲಿ ಯಾರ ಹೆಸರನ್ನು ಬರೆಯಲಾಗುತ್ತದೆಯೋ ವ್ಯಕ್ತಿಯ ಸಾವನ್ನು ತರುತ್ತದೆ, ಬರೆಯುವವನಿಗೆ ವ್ಯಕ್ತಿಯ ಮುಖ ಗೊತ್ತಿರಬೇಕು. ಡೆತ್ನೋಟ್‌ 2006-2007ರಲ್ಲಿ ನಿಪ್ಪಾನ್ಟಿವಿಯಲ್ಲಿ ಪ್ರಸಾರವಾದ ಅನಿಮೆಯಾಗಿ ಮತ್ತು ಲೈವ್‌-ಆಕ್ಷನ್ಚಲನಚಿತ್ರಗಳಾಗಿ ಜಾಗತಿಕವಾಗಿ ಜನಪ್ರಿಯವಾಗಿದೆ.

ಹೀಗಾಗಿ, ಮಕ್ಕಳ ಮನಸ್ಸು ಅತಿ ಸೂಕ್ಷ್ಮವಾಗಿದ್ದು ಚಿಕ್ಕವಯಸ್ಸಿನಲ್ಲಿ ಯಾವ ರೀತಿಯ ಕಾರ್ಟೂನ್ ಗಳನ್ನು ನೋಡುತ್ತಾರೋ ತಾವು ಹಾಗೆ ಆಗಬೇಕು ಎಂದು, ಅದರಲ್ಲಿ ಜೀವಿಸಲು ಅಥವಾ ಅದರಿಂದ ಜೀವನದಲ್ಲಿ ಹೆಚ್ಚು ಭಯಭೀತರಾಗಿ ಬದುಕಲು ಶುರು ಮಾಡುತ್ತಾರೆ. ಹೀಗಾಗಿ ಪೋಷಕರು ತಮ್ಮ ಮಕ್ಕಳ ಮೇಲೆ ಗಮನ ಇಡಬೇಕಾಗಿರುವುದು ಅವರ ಜವಾಬ್ದಾರಿಯಾಗಿದೆ. ಇಲ್ಲವಾದಲ್ಲಿ ರೀತಿಯ ಘಟನೆಗಳು ಸಂಭವಿಸುತ್ತದೆ. ಹೀಗಾಗಿ ನಿಮ್ಮ ಮಕ್ಕಳ ಬಗ್ಗೆ ಎಚ್ಚರವಿರಲಿ.