ಬಿಜೆಪಿ (BJP) ವಿರುದ್ಧ ಮತಗಳ್ಳತನ ಆರೋಪ ಮಾಡಿರುವ ಸಂಸದ ರಾಹಲ್ ಗಾಂಧಿ,( RAHUL GANDHI) ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (FREEDOM PARK) ಬೃಹತ್ ಪ್ರತಿಭಟನೆ (PROTEST) ನಡೆಸುತ್ತಿದ್ದಾರೆ. ಇದರ ಭಾಗವಾಗಿ ಮಾತನಾಡಿದ ಅವರು ಬಿಜೆಪಿ ವಿರುದ್ಧ ಗುಡುಗಿದ್ದು, ಆರೋಪಗಳ ಸುರಿಮಳೆಗೈದಿದ್ದಾರೆ. ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ ಎಂಬ ಘೋಷಣೆಯಲ್ಲಿ ಪ್ರತಿಭಟನಾ ಕಿಚ್ಚು ಹೊರಹೊಮ್ಮಿದೆ.
ಇಂದು ಬೆಂಗಳೂರಿನ (BENGALORE) ಫ್ರೀಡಂ ಪಾರ್ಕ್‌ನಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನವನ್ನು (CONTITUTION) ಮುಗಿಸಲು ಬಿಜೆಪಿ ಷಡ್ಯಂತ್ರ ಮಾಡಿತ್ತು. ಆದರೆ ನಾವು ಸಂವಿಧಾನವನ್ನು ಉಳಿಸಿದ್ದೇವೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಒಂದು ಕೋಟಿ ಮತದಾರರನ್ನು ಪಟ್ಟಿಗೆ ಸೇರಿಸಲಾಗಿತ್ತು. ಆದರೆ ಆ ಒಂದು ಕೋಟಿ ಜನ ವೋಟ್ ಮಾಡಿರಲಿಲ್ಲ.. ಲೋಕಸಭೆ ಚುನಾವಣೆ ಬಳಿಕ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ. ಮಹಾರಾಷ್ಟ್ರದಲ್ಲಿ INIDA ಗೆಲುವು ಕಂಡಿತು. ಹೇಗೆಂದರೆ ಆ ಹೊಸ ಒಂದು ಕೋಟಿ ಮತದಾರರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಒಂದು ಕೋಟಿ ಹೊಸ ಮತದಾರರು ವೋಟ್ ಮಾಡಿದ್ದರು ಎಂಬ ಆರೋಪ ಮಾಡಿದ್ದಾರೆ.
ಇದಿಷ್ಟೇ ಅಲ್ಲ ಮಹಾದೇವಪುರದಲ್ಲಿ 6.5 ಲಕ್ಷ ಮತಗಳಿವೆ. ಆದರೆ ಈ ಪೈಕಿ 1 ಲಕ್ಷದ 250 ಮತಗಳು ಕಳ್ಳತನವಾಗಿವೆ ಎಂದು ಘಂಟಾಘೋಷವಾಗಿ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ. ಇದರ ಅರ್ಥ. ಆರು ಮತಗಳ ಪೈಕಿ ಒಂದು ಮತ ಕಳ್ಳತನವಾಗಿವೆ ಎಂದಿದ್ದಾರೆ. ಅಂದಹಾಗೆ ಈ ಮತಗಳ್ಳತನ ಐದು ವಿಧದಲ್ಲಿ ಕಳ್ಳತನ ಆಗಿದೆ. ಮತದಾರರ ಪಟ್ಟಿಯಲ್ಲಿ ಒಬ್ಬರ ಹೆಸರೇ ಹಲವಾರು ಬಾರಿ ಉಲ್ಲೇಖವಾಗಿದ್ದಾಗಿಯೂ ಆರೋಪ ಮಾಡಿದ್ದಾರೆ. ನಾಲ್ಕು, ಐದು ಮತಗಟ್ಟೆಗಳಲ್ಲಿ ಆ ವ್ಯಕ್ತಿ ಹೋಗಿ ಮತದಾನ ಮಾಡಿ ಬಂದಿದ್ದಾನೆ ಎಂದು ಆರೋಪಿಸಿದ್ದು, ಇದನ್ನು ಇಂದು ಕಾಂಗ್ರೆಸ್ ಪತ್ತೆ ಹೆಚ್ಚಿದೆ ಎಂದಿದ್ದಾರೆ.
ಸರಿ ಸುಮಾರು 40 ಸಾವಿರಕ್ಕೂ ಹೆಚ್ಚು ಇಂತಹ ಮತದಾರರಿದ್ದಾರೆ. ಒಂದೇ ವಿಳಾಸದ ಹಲವಾರು ಮತದಾರರನ್ನೂ ಕೂಡ ನಾವು ಪತ್ತೆ ಹಚ್ಚಿದ್ದೇವೆ ಎಂದು ಆರೋಪ ಮಾಡಿದ್ದಾರೆ. ಕರ್ನಾಟಕ ಚುನಾವಣೆಯಲ್ಲಿ ಆಂತರಿಕ ಸಮೀಕ್ಷೆ ನಡೆಸಿದಾಗ, ನಮಗೆ ಹದಿನೈದರಿಂದ ಹದಿನಾರು ಸೀಟ್‌ಗಳು ಬರುವ ನಿರೀಕ್ಷೆ ಇತ್ತು. ವಿಡಿಯೋಗ್ರಫಿ, ವೋಟರ್ ಲಿಸ್ಟ್ ಎಲ್ಲವನ್ನೂ ನಾವು ಚುನಾವಣಾ ಆಯೋಗಕ್ಕೆ ಕೇಳಿದ್ವಿ, ಆದ್ರೆ ಅಲ್ಲಿ ವಿಡಿಯೋಗಳನ್ನು ಅಳಿಸುವ ಕುತಂತ್ರ ನಡೆಯಿತು ಎಂದು ವಾಗ್ಬಾಣ ಬಿಟ್ಟರು.
ಇದನ್ನೂ ಓದಿ: ಟ್ರಂಪ್ ಸುಂಕ ಬಿಸಿ..ಇಂದು ಮಧ್ಯಾಹ್ನ ಪ್ರಧಾನಿ ಮೋದಿ ಸಂಪುಟ ಸಭೆ! ನೂತನ ಬೆಳವಣಿಗೆ ಬಗ್ಗೆ ಚರ್ಚೆ!
ಮತದಾರರ ಪಟ್ಟಿಯ ನಮೂನೆ 6ರಲ್ಲಿ ಹೊಸ ಮತ ಹಾಕಬೇಕಿತ್ತೋ ಅದರಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ನಮೂನೆ ಹೊಸ ಮತದಾರರಿಗೆ ಮೀಸಲಾದದ್ದು ಎಂದಿದ್ದಾರೆ. ಆದರೆ ಇದರಲ್ಲಿ ವಯಸ್ಸು 80, 90 ದಾಟಿದ ವಯಸ್ಕರ ಸಂಖ್ಯೆ 35 ಸಾವಿರ ಇದೆ.. ಈ ಮಾದರಿಯಲ್ಲಿ ಬಿಜೆಪಿ ಪಕ್ಷ ಒಂದು ಲಕ್ಷ ಮತಗಳ್ಳತನ ಮಾಡಿದೆ ಎಂದು ಆರೋಪಿಸಿದ್ದಾರೆ.
Symbol Premium Men's Wrinkle-Resistant Regular Fit Cotton Formal Shirt
ನಕಲಿ ಮತದಾರರ ಪಟ್ಟಿಯಲ್ಲಿರುವ ಒಬ್ಬನೇ ಮತದಾರ ಕರ್ನಾಟಕದಲ್ಲಿ, ಯುಪಿಯಲ್ಲಿ ಹೀಗೆ ಬೇರೆ ಬೇರೆ ಕಡೆ ಮತ ಹಾಕುತ್ತಾನೆ. ಈ ಹಕ್ಕು ಕೂಡ ಅವನಿಗೆ ದೇಶದ ವಿವಿಧ ಭಾಗದಲ್ಲಿದೆ ಎಂದಿದ್ದಾರೆ. ಮತಗಳ್ಳತನ ಆರೋಪ ಮಾಡಿದ ರಾಹುಲ್ ಗಾಂಧಿ ಇಂದು ಈ ಎಲ್ಲಾ ವಿಚಾರವಾಗಿ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆರೋಪ ಮಾಡಿದರು.
ಚುನಾವಣಾ ಅಕ್ರಮ ಖಂಡಿಸಿ ಬೃಹತ್ ಪ್ರತಿಭಟನೆ. ಕಳೆದ ಚುನಾವಣೆಯಲ್ಲಿ ನಾವು ಸಂವಿಧಾನವನ್ನು ರಕ್ಷಣೆ ಮಾಡಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಹುಲ್ ಗಾಂಧಿ ವಾಗ್ದಾಳಿ. ಸಂವಿಧಾನ ಪುಸ್ತಕ ತೋರಿಸಿ ಭಾಷಣ ಆರಂಭಿಸಿದ ರಾಹುಲ್ ಗಾಂಧಿ. ನಮ್ಮ ಹಕ್ಕು, ನಮ್ಮ ಮತ, ನಮ್ಮ ಹೋರಾಟ ಎಂಬ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.