Skip to main content
ವಿಡಿಯೋ
1/2
politics

ಕಾಂಗ್ರೆಸ್‌ ಪಕ್ಷ ಮೂರ್ಖರ ಪಕ್ಷ : ಬಿ.ವೈ ವಿಜಯೇಂದ್ರ

By Pavitra Ganapathi Baradavalli
ಕಾಂಗ್ರೆಸ್‌ ಪಕ್ಷ ಮೂರ್ಖರ ಪಕ್ಷ : ಬಿ.ವೈ ವಿಜಯೇಂದ್ರ

ಆಗಸ್ಟ್ 8, 2025ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮತಗಳ್ಳತನ ಆರೋಪಕ್ಕೆ ಸಂಬಂಧಿಸಿದಂತೆ ನಡೆಸಿದ 'ವೋಟ್ ಅಧಿಕಾರ ರ‍್ಯಾಲಿ'ಗೆ ಪ್ರತಿಕ್ರಿಯೆಯಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶುಕ್ರವಾರ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ನಿನ್ನೆ ಬೆಂಗಳೂರಿನಲ್ಲಿ ಮತಗಳ್ಳತನ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರೀಡಂಪಾರ್ಕ್‌ನಲ್ಲಿ

(FREEDOM PARK) ರಾಹುಲ್‌ ಗಾಂಧಿ (RAHUL GANDHI) ನಡೆಸಿದ ಪ್ರತಿಭಟನೆ ಕುರಿತಾಗಿ ಇಂದು ಬಿ.ವೈ ವಿಜಯೇಂದ್ರರವರು (B,Y VIJAYENDRA) ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲಾ ಮತದಾನದ ಅಕ್ರಮ ಆರೋಪ ಮಾಡುವ ರಾಹುಲ್‌ ಗಾಂಧಿ ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಏಕೆ ಒಪ್ಪುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.


ಶುಕ್ರವಾರ (FRIDAY) ಬಿಜೆಪಿ ಕಾರ್ಯಾಲಯದಲ್ಲಿ ಮಾಧ್ಯಮ (MEDIA) ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ದೇಶ ರಾಜ್ಯದಲ್ಲಿ ಅಕ್ರಮಗಳು ನಡೆದಿವೆ. ಮತದಾರರ ಪಟ್ಟಿಯಲ್ಲೂ ಸಹ ಅಕ್ರಮ ನಡೆದಿದೆ. ನಕಲಿ ಮತದಾರರು (VOTERS) ಆ ಪಟ್ಟಿಯಲ್ಲಿದ್ದರು ಎಂದು ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಆ ಬಳಿಕ ಕಾಂಗ್ರೆಸ್‌ನ ನಾಯಕರು ಮೂರ್ಖರಂತೆ ಮಾತನಾಡಿದ್ದಾರೆ. ಮತಗಳ ಕಳ್ಳ ಚಲಾವಣೆಯ ಬಗ್ಗೆ ಇಷ್ಟೆಲ್ಲಾ ಮಾತಾಡುವ ಇವರು ಬಿಹಾರದಲ್ಲಿ ನಡೆಯಬೇಕಾಗಿದ್ದ ಮತದಾರರ ಪಟ್ಟಿ ಪರಿಷ್ಕರಣೆಗೆ ಏಕೆ ವಿರೋಧಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದರು.


2005ರಲ್ಲಿ ಡಾ.ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದಾಗ, ಮಮತಾ ಬ್ಯಾನರ್ಜಿ ಸಂಸದರಾಗಿದ್ದು, ಎನ್ಡಿಎಯಲ್ಲಿದ್ದರು. ಆಗ ಲೋಕಸಭೆಯಲ್ಲಿ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಲದಲ್ಲಿ ಬಾಂಗ್ಲಾ ದೇಶದಿಂದ ಬಂದ ಅಕ್ರಮ ವಲಸಿಗರು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿದ್ದಾರೆ, ಇದರ ಕುರಿತು ಚರ್ಚೆ ಆಗಲಿ ಎಂದು ಪ್ರಸ್ತಾಪಿಸಿದ್ದರು. ಆಗ ಸ್ಪೀಕರ್ ಸೋಮನಾಥ ಚಟರ್ಜಿ, ಮಮತಾ ಬ್ಯಾನರ್ಜಿ ಮುಖದ ಮೇಲೆ ಪೇಪರ್ ಬಿಸಾಡಿ, ಅವರನ್ನು ಅಮಾನತು ಮಾಡಿದ್ದರು. ರಾಹುಲ್ ಗಾಂಧಿಯವರಿಗೆ ಇದು ಮರೆತು ಹೋಗಿದೆಯೇ?.

ಇದನ್ನೂ ಓದಿ: ಅಲಾಸ್ಕಾದಲ್ಲಿ ಟ್ರಂಪ್–ಪುಟಿನ್ ಐತಿಹಾಸಿಕ ಭೇಟಿ: ಉಕ್ರೇನ್ ಯುದ್ಧಕ್ಕೆ ಶಾಂತಿ ಮಾತುಕತೆ!

ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ   16 ಸೀಟ್‌ಗಳನ್ನು ಪಡೆಯಲಿದೆ ಎಂದು ರಾಹುಲ್‌ ಗಾಂಧಿಯವರು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ 16 ಸ್ಥಾನ ಪಡೆಯಲಿದೆ ಎಂಬುದನ್ನು ಯಾವ ಸಮೀಕ್ಷೆಗಳು ತಿಳಿಸಿಲ್ಲ. ಆದರೆ  16 ಸೀಟ್‌ಗಳನ್ನು ಗೆಲ್ಲಲಿದೆ ಎಂದು ರಾಹುಲ್‌ ಗಾಂಧಿ ಅವರಿಗೆ ಕಾಂಗ್ರೆಸ್‌ನ ಮೂರ್ಖರು ಹೇಳಿರಬೇಕು ಎಂದು ಟೀಕಿಸಿದರು.

Calvin Klein Men's Solid Regular Fit Polo T-Shirt

ಕಾಂಗ್ರೆಸ್‌ ನಾಯಕರು ಸೋಲಿನ ಹತಾಷೆಯಿಂದ ಮಾತನಾಡಿದ್ದಾರೆ. ಇದು ಸೋಲಿನ ಹತಾಷೆಯಲ್ಲಿ ಮತದಾರರಿಗೆ ಮಾಡುವ ಅಪಮಾನವೇ ಹೊರತು ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಚುನಾವಣೆ ಮುಗಿದು ಫಲಿತಾಂಶ ಬಂದು 45 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಬೇಕಿತ್ತು. ಬೆಂಗಳೂರಿನಲ್ಲಿ ಸೋತ ಕಾಂಗ್ರೆಸ್‌ ಅಭ್ಯರ್ಥಿಯೇ
  ಪ್ರಶ್ನೆ ಮಾಡಬೇಕಿತ್ತು. ಕಾಂಗ್ರೆಸ್‌ ಪಕ್ಷ ಎಂಬುದು ಪಕ್ಕಾ ಮೂರ್ಖರ ಪಕ್ಷವಾಗಿದೆ ಎಂದು ಲೇವಡಿ ಮಾಡಿದರು.