Skip to main content
ವಿಡಿಯೋ
cinema

ನಟ ಧ್ರುವ ಸರ್ಜಾ ಬೆನ್ನು ಹತ್ತಿದ ಹಣ ವಂಚನೆ ಆರೋಪ...3 ಕೋಟಿ ಸ್ಕ್ಯಾಮ್ ಆಗಿದೆ ಎಂದು ಮುಂದೆ ಬಂದವರ್‍ಯಾರು?

By Ram Chethan
ನಟ ಧ್ರುವ ಸರ್ಜಾ ಬೆನ್ನು ಹತ್ತಿದ ಹಣ ವಂಚನೆ ಆರೋಪ...3 ಕೋಟಿ ಸ್ಕ್ಯಾಮ್ ಆಗಿದೆ ಎಂದು ಮುಂದೆ ಬಂದವರ್‍ಯಾರು?

‘ಜಗ್ಗು ದಾದ’ ನಿರ್ಮಾಪಕ-ನಿರ್ದೇಶಕ ರಾಘವೇಂದ್ರ ಹೆಗ್ಡೆ, ನಟ ಧ್ರುವ ಸರ್ಜಾ ಮೇಲೆ 3 ಕೋಟಿ ರೂಪಾಯಿ ವಂಚನೆ ಆರೋಪ ಮಾಡಿ ಮುಂಬೈನ ಅಂಬೋಲಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಬಡ್ಡಿ ಸೇರಿ 9 ಕೋಟಿಯಾಗಿ ಬೆಳೆದ ಹಣ ಪಾವತಿಸಿಲ್ಲವೆಂಬ ಆರೋಪದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಟ ಧ್ರುವ ಸರ್ಜಾ ಸದ್ಯ ‘ಕೆಡಿ: ದಿ ಡೆವಿಲ್’ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಅವರು ಒಂದು ವಂಚನೆ ಪ್ರಕರಣದಲ್ಲಿ ಕಿತ್ತುಕೋಂಡಿದ್ದಾರೆ. ‘ಜಗ್ಗು ದಾದ’ ಸಿನಿಮಾದ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಧ್ರುವ ಸರ್ಜಾ ವಿರುದ್ಧ ದೂರು ನೀಡಿದ್ದಾರೆ. ಅವರು ತಮ್ಮ ಬಳಿ 3 ಕೋಟಿ ರೂಪಾಯಿ ನೀಡಬೇಕು ಎಂದು ಕೇಳಿ, ಅದನ್ನು ವಂಚಿಸಿರುವಂತೆ ಆರೋಪಿಸಿದ್ದಾರೆ.

ರಾಘವೇಂದ್ರ ಹೆಗ್ಡೆ ಅವರ ದೂರಿನಲ್ಲಿ ಹೇಳಿರುವಂತೆ, 2016ರಲ್ಲಿ ಅವರ ಮೊದಲ ಸಿನಿಮಾ ‘ಜಗ್ಗು ದಾದ’ ಯಶಸ್ವಿಯಾಗಿತ್ತು. ಆ ಸಮಯದಲ್ಲಿ ಧ್ರುವ ಸರ್ಜಾ ಅವರು ಅವರು ತಮ್ಮ ಕಚೇರಿಗೆ ಬಂದು ಅವರೊಂದಿಗೆ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದರು. 2016ರಿಂದ 2018ರವರೆಗೆ ಧ್ರುವ ಸರ್ಜಾ ಸಿನಿಮಾದ ಬಗ್ಗೆ ಬಹಳ ಆಸಕ್ತಿ ತೋರಿಸಿದ್ದರು ಮತ್ತು ‘ದಿ ಸೋಲ್ಜರ್’ ಎಂಬ ಚಿತ್ರದ ಸ್ಕ್ರಿಪ್ಟ್ ಕೂಡ ನೀಡಿದ್ದರು.

adidas Men Runally M Running Shoe


ರಜನಿಕಾಂತ್‌ 50 ವರ್ಷದ ಸಿನಿ ಜರ್ನಿ! ಅಬ್ಬಾ ರಜನಿ ದೇವಾಲಯಕ್ಕೆ ಅಭಿಮಾನಿ ಮಾಡಿದ್ದೇನು ಗೊತ್ತಾ?

ಹೆಗ್ಡೆ ಅವರ ಹೇಳಿಕೆಯಲ್ಲಿ, ಧ್ರುವ ಸರ್ಜಾ ಅವರಿಂದ ಸಿನೆಮಾ ಕಾನ್ಟ್ರ್ಯಾಕ್ಟ್ಗೆ ಮೊದಲು 3 ಕೋಟಿ ರೂ. ನೀಡುವಂತೆ ಕೇಳಿದ್ದರೆ. ಅದನ್ನು ಅವರು ಫ್ಲಾಟ್ ಖರೀದಿಸಲು ಬಳಸಲು ಯೋಜಿಸಿದ್ದರು. ಈ ಹಣ ಹಾಗೂ ಬಡ್ಡಿ ಸೇರಿ ಒಟ್ಟು 9 ಕೋಟಿ ರೂಪಾಯಿಗಳಷ್ಟು ಆಗಿದ್ದು, ಹಣ ಪಾವತಿಸಿಲ್ಲ ಎಂದು ರಾಘವೇಂದ್ರ ದೂರಿನಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದ ಆಧಾರದಲ್ಲಿ ಅಂಬೋಲಿ ಪೊಲೀಸರಲ್ಲಿ ಎಫ್ಐಆರ್ ದಾಖಲಾಗಿದೆ ಮತ್ತು ತನಿಖೆ ನಡೆಯುತ್ತಿದೆ. ಈ ವಿವಾದದ ಬಗ್ಗೆ ನಟ ಧ್ರುವ ಸರ್ಜಾ ಇನ್ನೂ ಅಧಿಕಾರಿಕವಾಗಿ ಪ್ರತಿಕ್ರಿಯಿಸಿಲ್ಲ.