Skip to main content
ವಿಡಿಯೋ
1/2
local

ಭಾರತೀಯ ಉಡುಪು ಧರಿಸಿ ಬಂಧಿದ್ದಕ್ಕೆ ರೆಸ್ಟೋರೆಂಟ್‌ ಪ್ರವೇಶ ನಿಷೇಧ: ದೆಹಲಿ ಪಿತಂಪುರ ಪ್ರದೇಶದಲ್ಲಿ ಘಟನೆ

By Pavitra Ganapathi Baradavalli
ಭಾರತೀಯ ಉಡುಪು ಧರಿಸಿ ಬಂಧಿದ್ದಕ್ಕೆ ರೆಸ್ಟೋರೆಂಟ್‌ ಪ್ರವೇಶ ನಿಷೇಧ: ದೆಹಲಿ ಪಿತಂಪುರ ಪ್ರದೇಶದಲ್ಲಿ ಘಟನೆ

ಭಾರತೀಯ ಉಡುಪಿಗೆ ಬೇರೆ ರೀತಿಯದ್ದೇ ಆದ ಒಂದು ಸಾಂಸ್ಕೃತಿಕ ಮೆಚ್ಚುಗೆ ಇದೆ. ಅಚ್ಚುಕಟ್ಟಾದ ಉಡುಪು ಎಂಬ ಎಲ್ಲರ ಪ್ರೀತಿಯನ್ನು ಗಳಿಸಿಕೊಂಡಿದೆ. ಆದರೆ ದೆಹಲಿಯಲ್ಲಿ ಭಾರತೀಯ ಉಡುಪು ಧರಿಸಿಕೊಂಡು ರೆಸ್ಟೋರೆಂಟ್‌ಗೆ ಹೋದ ದಂಪತಿಗೆ ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ.

ದೆಹಲಿ: ಭಾರತೀಯ (INDIAN DRESS) ಉಡುಪಿಗೆ ಬೇರೆ ರೀತಿಯದ್ದೇ ಆದ ಒಂದು ಸಾಂಸ್ಕೃತಿಕ (CULTURAL) ಮೆಚ್ಚುಗೆ ಇದೆ. ಅಚ್ಚುಕಟ್ಟಾದ ಉಡುಪು ಎಂಬ ಎಲ್ಲರ ಪ್ರೀತಿಯನ್ನು (LOVE) ಗಳಿಸಿಕೊಂಡಿದೆ. ಆದರೆ ದೆಹಲಿಯಲ್ಲಿ (DELHI) ಭಾರತೀಯ ಉಡುಪು ಧರಿಸಿಕೊಂಡು ರೆಸ್ಟೋರೆಂಟ್‌ಗೆ (RESTORENT) ಹೋದ ದಂಪತಿಗೆ ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ.


ಭಾರತೀಯ ಉಡುಪು ಧರಿಸಿದ್ದಕ್ಕಾಗಿ ದೆಹಲಿಯ ಪಿತಂಪುರ ಪ್ರದೇಶಲ್ಲಿರುವ ರೆಸ್ಟೋರೆಂಟ್‌ವೊಂದರಲ್ಲಿ ಇಬ್ಬರು ದಂಪತಿಗೆ ಪ್ರವೇಶ ನಿಷೇಧಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾನದಲ್ಲಿ ವೀಡಿಯೋ ಹರಿಬಿಟ್ಟಿದ್ದಾರೆ.


ಬೇರೆಯವರಿಗೆ ರೆಸ್ಟೋರಂಟ್‌ ಒಳಗೆ ಹೋಗಲು ಬಿಡತ್ತಿದ್ದರು ಮತ್ತು ನಮಗೆ ಪ್ರವೇಶವನ್ನು ನಿರಾಕರಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಾಗೇ ರೆಸ್ಟೋರೆಂಟ್‌ನ ವ್ಯವಸ್ಥಾಪಕರು ನಮ್ಮೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಬಟ್ಟೆ ನೋಡಿ ಪ್ರವೇಶ ನೀಡುವುದು ಸರಿಯಲ್ಲ  ಎಂದಿದ್ದಾರೆ. ಆದರೂ ಕೇಳದ ಸಿಬ್ಬಂದಿಗಳು ಇವರನ್ನು ಹೊರಕ್ಕೆ ದಬ್ಬಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಚಿಕ್ಕಬಾಣಾವಾರದಲ್ಲಿ ರೌಡಿಶೀಟರ್ ಕೊಲೆ: ಮೂವರು ಆರೋಪಿಗಳ ಬಂಧನ

ಇದರ ಮಧ್ಯೆ ಈ ಆರೋಪವನ್ನು ರೇಸ್ಟೋರೆಂಟ್‌ ಮಾಲೀಕ ನೀರಜ್‌ ಅಗರ್ವಾಲ್‌ ನಿರಾಕರಿಸಿದ್ದಾರೆ. ದಂಪತಿ ಟೇಬಲ್‌ ಬುಕ್‌ ಮಾಡಿರಲಿಲ್ಲ ಅದಕ್ಕಾಗಿಯೇ ಪ್ರವೇಶ ನಿರಾಕರಿಸಲಾಗಿದೆ ಎಂದು ರೆಸ್ಟೋರೆಂಟ್‌ ವ್ಯವಸ್ಥಾಪಕರು ತಿಳಿಸಿದ್ದಾರೆ. ಇಂತದ್ದೇ ಉಡುಪು ಧರಿಸಿ ರೆಸ್ಟೋರೆಂಟ್‌ ಒಳಗೆ ಬರಬೇಕು ಎಂಬ ನಿಯಮವೇನು ಇಲ್ಲ ಎಂದು ತಿಳಿಸಿದ್ದಾರೆ. ಹಾಗೆ ಬಂದ ಎಲ್ಲಾ ಗ್ರಾಹಕರನ್ನು ಪ್ರೀತಿ ಮತ್ತು ಆದರದಿಂದ ಸ್ವಾಗತಿಸಲಾಗುತ್ತದೆ ಎಂದಿದ್ದಾರೆ.


TIMEX Marlin Analog Watch for Men with Round Dial & Water Resistant Man's Wrist Watches

ಇನ್ನು, ದಂಪತಿಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಕಪಿಲ್ ಮಿಶ್ರಾ, ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ಈ ವಿಷಯದ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.