Skip to main content
ವಿಡಿಯೋ
politics

ಕರ್ನಾಟಕದಲ್ಲಿ ರೈತರಿಗೆ ಸಿಗುತ್ತಿಲ್ಲ ಬೇಕಾದಷ್ಟು ಗೊಬ್ಬರ, ಕೃಷಿ ಸಚಿವರೆ ಉತ್ತರ ಕೊಡಿ.! ತಪ್ಪು ಯಾರದ್ದು.?

By Gireesh Vasishta
ಕರ್ನಾಟಕದಲ್ಲಿ ರೈತರಿಗೆ ಸಿಗುತ್ತಿಲ್ಲ ಬೇಕಾದಷ್ಟು ಗೊಬ್ಬರ, ಕೃಷಿ ಸಚಿವರೆ ಉತ್ತರ ಕೊಡಿ.! ತಪ್ಪು ಯಾರದ್ದು.?

ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿಯ ಕಿತ್ತಾಟ ಜೋರಾಗಿದ್ದು ಮುಖ್ಯಮಂತ್ರಿ ನಾನಾಗಬೇಕು, ನೀನಾಗಬೇಕು ಎಂಬ ಜೋರು ಹೋರಾಟ, ಇದಕ್ಕೆ ಅವರ ಮಂತ್ರಿಮಂಡಲವು ಸಹಕರಿಸುತ್ತಿದ್ದು, ತಮ್ಮ ಜವಾಬ್ದಾರಿಯನ್ನು ಸಚಿವರು ಮರೆತು ಹೋಗಿದ್ದಾರೇನೋ ಎಂಬ ಅನುಮಾನ ಮೂಡುತ್ತಿದೆ.

ಕರ್ನಾಟಕ  ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಜಿಲ್ಲೆಯಲ್ಲಿಯೂ ಗೊಬ್ಬರದ ಅಭಾವ ಉಂಟಾಗಿದೆ. ಹೀಗಾಗಿ ರೈತರು ಈ ಹಿಂದೆ ಎಂದೂ ಪಟ್ಟಿರದ ಪಾಡನ್ನು ಅನುಭವಿಸುತ್ತಿದ್ದಾರೆ. ಹೀಗೆ ಆದರೆ ಕರ್ನಾಟಕ ರಾಜ್ಯದ ಅನ್ನದಾತರ ಸ್ಥಿತಿ-ಗತಿ ಏನು ಎಂಬುದರ ಚಿಂತೆ ಪ್ರತಿಯೊಬ್ಬ ಕರ್ನಾಟಕದ ಸಾರ್ವಜನಿಕನಿಗೂ ಉಂಟಾಗಿದೆ. ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ನೇರವಾಗಿ ಕಾಣುವುದೇ ಮಾನ್ಯ ಸಚಿವರು.YUISI ​​Sun Hat​​ for Men Women, Breathable Summer Hat for Travel, Hiking, Gardening, Sun Hats for Men​​ & Round Sun Cap for Hiking, Hats for Women​​ Indoor Outdoor Activities

image.png

ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಕುರ್ಚಿಯ ಕಿತ್ತಾಟ ಜೋರಾಗಿದ್ದು ಮುಖ್ಯಮಂತ್ರಿ ನಾನಾಗಬೇಕು, ನೀನಾಗಬೇಕು ಎಂಬ ಜೋರು ಹೋರಾಟ, ಇದಕ್ಕೆ ಅವರ ಮಂತ್ರಿಮಂಡಲವು ಸಹಕರಿಸುತ್ತಿದ್ದು, ತಮ್ಮ ಜವಾಬ್ದಾರಿಯನ್ನು ಸಚಿವರು ಮರೆತು ಹೋಗಿದ್ದಾರೇನೋ ಎಂಬ ಅನುಮಾನ ಮೂಡುತ್ತಿದೆ.

ಇದನ್ನು ನೇರವಾಗಿ ಹೇಳುವುದಾದರೆ ಒಬ್ಬ ಜವಾಬ್ದಾರಿಯುತ ಸಚಿವನ ಕೆಲಸ ಅದರಲ್ಲೂ ಕೃಷಿ ಸಚಿವನ ಕೆಲಸವೆಂದರೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲಗಳನ್ನು ಗುರುತಿಸಿ ಆಯಾ ಸಮಯಕ್ಕೆ ರಾಜ್ಯಕ್ಕೆ ಯಾವ ಗೊಬ್ಬರ ಬೇಕು, ಬೇಡ, ಎಷ್ಟು ಬೇಕು ಎಂಬ ತೀರ್ಮಾನವನ್ನು ಮಾಡಿ ಮೂರ್ನಾಲ್ಕು ತಿಂಗಳುಗಳ ಹಿಂದೆಯೇ ಕೇಂದ್ರ ಸರ್ಕಾರಕ್ಕೆ ಮಾಹಿತಿಯನ್ನು ನೀಡಬೇಕು, ಇದರಿಂದ ಕೇಂದ್ರ ಸರ್ಕಾರ ಮುಂಗಡವಾಗಿ ಗೊಬ್ಬರಗಳನ್ನು ರಾಜ್ಯಗಳಿಗೆ ಸಾಗಿಸುತ್ತದೆ. ಆದರೆ ಇದು ಯಾವುದನ್ನು ಮಾಡದ ಸಚಿವರು ಬರಿ ಕೆಲಸಕ್ಕೆ ಬಾರದ ಮಾತುಗಳನ್ನಾಡಿಕೊಂಡು ರಾಜ್ಯದ ರೈತರ ಹಿತವನ್ನು ಕಾಯದೆ ಯಾವಾಗಲೂ ಅಧಿಕಾರದ ಆಸೆಗಾಗಿ, ಅಧಿಕಾರದ ಬಗ್ಗೆ ಮಾತನಾಡುತ್ತಾ ಸಮಯ ವ್ಯರ್ಥ ಮಾಡುತ್ತಿದ್ದಾರೆ.also read: “ಸಿಕ್ಕಿಂನ” ಪ್ರವಾಸೋದ್ಯಮ: "ಭಾರತದ ಗುಪ್ತ ರತ್ನ"ದ ಮಾರ್ಗದರ್ಶಿ! ಇಲ್ಲಿದೆ ಬಾಬಾ ಹರ್ಭಜನ್ ಸಿಂಗ್ ದೇವಾಲಯ!

ಹೀಗಾಗಿ ಇನ್ನು ಮುಂದಾದರೂ ಮಾನ್ಯ ಕೃಷಿ ಸಚಿವರು ಎಚ್ಚೆತ್ತುಕೊಂಡುಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರೂ” ಎನ್ನುವ ಹಾಗೆ ಗೊಬ್ಬರದ ಹಹಾಕಾರ ಸೃಷ್ಟಿಯಾದಾಗ ಕೇಂದ್ರ ಸರ್ಕಾರದತ್ತ ಬೆರಳು ತೋರುವ ಬದಲು ಒಬ್ಬ ಬುದ್ಧಿವಂತ ರಾಜಕಾರಣಿಯಾಗಿ ಯೋಚಿಸಿ ರಾಜ್ಯಕ್ಕೆ ಮುಂಗಡವಾಗಿ ಗೊಬ್ಬರದ ಸ್ಟಾಕ್ ಗಳನ್ನು ಎತ್ತಿಟ್ಟುಕೊಳ್ಳಬೇಕು. ಹೀಗಾಗಿ ಕೇಂದ್ರದ ವಿರುದ್ಧ ಕೈ ತೋರುವ ಬದಲು ಬುದ್ಧಿವಂತ ಸಚಿವರಾಗುವುದು ಉತ್ತಮ. ಇಲ್ಲವಾದರೆ ರಾಜ್ಯದ ರೈತರು ಇನ್ನು ಕಷ್ಟ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.