Skip to main content
ವಿಡಿಯೋ
1/2
crime

ಕಿವಿಯಲ್ಲಿ ವಿಷಬಿಟ್ಟು ಗಂಡನನ್ನೇ ಕೊಂದ ಪಾಪಿ ಹೆಂಡತಿ

By Pavitra Ganapathi Baradavalli
ಕಿವಿಯಲ್ಲಿ ವಿಷಬಿಟ್ಟು ಗಂಡನನ್ನೇ ಕೊಂದ ಪಾಪಿ ಹೆಂಡತಿ

ಇಂದಿನ ಜೀವನದಲ್ಲಿ ತಾಂತ್ರಿಕ ಉಪಕರಣಗಳು ಸೇರಿದಂತೆ ತಂತ್ರಜ್ಞಾನ ಹೆಚ್ಚಾಗುತ್ತಾ ಹೋಗುತ್ತದೆ ಅದರಲ್ಲಿ ತಂತ್ರಜ್ಞಾನವನ್ನ ಯಾವುದ್ಯಾವುದಕ್ಕೆ ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸುವುದಾದರೆ ಈಗ ಯ್ಯೂಟ್ಯೂಬ್‌ ಅನ್ನೇ ತೆಗೆದುಕೊಳ್ಳಿ ಯ್ಯೂಟ್ಯೂಬ್‌ನಿಂದ ಹಲವರು ಹೊಸ ತಂತ್ರಜ್ಞಾನಗಳ ಕುರಿತು ಕಲಿಯುತ್ತಿದ್ದಾರೆ ಅಷ್ಟೇ ಅಲ್ಲದೇ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದಾರೆ.

ಇಂದಿನ ಜೀವನದಲ್ಲಿ ತಾಂತ್ರಿಕ ಉಪಕರಣಗಳು ಸೇರಿದಂತೆ ತಂತ್ರಜ್ಞಾನ ಹೆಚ್ಚಾಗುತ್ತಾ ಹೋಗುತ್ತದೆ ಅದರಲ್ಲಿ ತಂತ್ರಜ್ಞಾನವನ್ನ ಯಾವುದ್ಯಾವುದಕ್ಕೆ ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸುವುದಾದರೆ ಈಗ ಯ್ಯೂಟ್ಯೂಬ್‌ ಅನ್ನೇ ತೆಗೆದುಕೊಳ್ಳಿ ಯ್ಯೂಟ್ಯೂಬ್‌ನಿಂದ ಹಲವರು ಹೊಸ ತಂತ್ರಜ್ಞಾನಗಳ ಕುರಿತು ಕಲಿಯುತ್ತಿದ್ದಾರೆ ಅಷ್ಟೇ ಅಲ್ಲದೇ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದಾರೆ.


ಅಷ್ಟೇ ಅಲ್ಲದೇ ಯ್ಯೂಟ್ಯೂಬ್‌ನಿಂದ ಹಣ ಗಳಿಸುವವರ ಸಂಖ್ಯೆಯೂ ಅಧಿಕವಾಗೇ ಇದೆ. ಆದರೆ ಯ್ಯೂಟ್ಯೂಬ್‌ ಕೆಲವು ಕೆಟ್ಟ ಕೆಲಸಕ್ಕೆ ಬಳಕೆಯಾಗುತ್ತಿದೆ ಎಂದರೆ ನೀವು ನಂಬುತ್ತೀರಾ ಹೌದು ಸ್ನೇಹಿತರೇ ಯ್ಯೂಟ್ಯೂಬ್‌ನಿಂದ ಹಲವಾರು ಆಘಂತುಕ ಘಟನೆಗಳು ಸಾಕ್ಷಿಯಾಗುತ್ತಿವೆ ಅದೇನಂದರೆ ಮೊನ್ನೆ ಮೊನ್ನೆಯಷ್ಟೇ ಯ್ಯೂಟ್ಯೂಬ್‌ ನೋಡಿ ಒಬ್ಬ ಕಳ್ಳ ಭರ್ಜರಿ ಕಳ್ಳತನವನ್ನೇ ಮಾಡಿದ್ದಾನೆ ಮತ್ತು ಇಂದು ಯ್ಯೂಟ್ಯೂಬ್‌ ನೋಡುಕೊಂಡು ಒಬ್ಬಳು ತನಗೆ ತಾಳಿ ಕಟ್ಟಿದ ಗಂಡನ ಜೀವವನ್ನೇ ಹಾರಿಸಿಬಿಟ್ಟಿದ್ದಾಳೆ .


ಅಂದರೆ ಲೆಕ್ಕಾ ಹಾಕಿ ಯ್ಯೂಟ್ಯೂಬ್‌ ನೋಡಿಕೊಂಡು ಒಬ್ಬರನ್ನು ಕೊಲೆ ಮಾಡುವ ಹಂತಕ್ಕೆ ಹೋಗುತ್ತಾರೆ ಎಂದರೆ ತಂತ್ರಜ್ಞಾನ ಎಂಬುದು ಯಾವುದಕ್ಕೆ ಬಳಕೆಯಾಗುತ್ತಿದೆ ಅಂತ . ಈ ಘಟನೆ ದಾಖಲಾಗಿದ್ದು ಬೇರೆ ಎಲ್ಲೂ ಅಲ್ಲ ನಮ್ಮ ಪಕ್ಕದ ತೆಲಂಗಾಣದಲ್ಲಿ ನಡೆದಿದೆ. ನಾವು ನೋಡಿದ ಹಾಗೆ ವಿಷವನ್ನು ಕುಡಿದರೆ ಸಾಯುತ್ತಾರೆ ಅಥವಾ ಯಾವುದರಲ್ಲಾದರೂ ಮಿಶ್ರಣ ಮಾಡಿ ಕೊಟ್ಟರೆ ಸಾಯುವ ಸಂಭವವಿದೆ ಆದರೆ ಇಲ್ಲಿ ಈಕೆ ಮಾಡಿದ್ದು ಮಾಸ್ಟರ್‌ ಪ್ಲಾನ್‌ ಅದೂ ಯ್ಯೂಟ್ಯೂಬ್‌ ನೋಡಿಕೊಂಡು ರೂಪಿಸಿದ್ದ ಸಂಚು ಗಂಡನ ಕಿವಿಗೆ ವಿಷ ಸುರಿಯುವ ಮೂಲಕ ಗಂಡನ ಪ್ರಾಣವನ್ನೇ ತೆಗೆದಿದ್ದಾಳೆ.

ಇದನ್ನೂ ಓದಿ: ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣಕ್ಕೆ ಸರ್ಕಾರಕ್ಕೆ ಶಿಫಾರಸು

ತೆಲಂಗಾಣದಲ್ಲಿ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಕೊಲೆಗೆ ಎಷ್ಟು ಚೆನ್ನಾಗಿ ಸಂಚು ರೂಪಿಸಲಾಗಿತ್ತೆಂದರೆ, ಅದನ್ನು ಕಾರ್ಯಗತಗೊಳಿಸಲು ಆ ಮಹಿಳೆ ಯೂಟ್ಯೂಬ್ ನಿಂದ ಸಲಹೆಗಳನ್ನು ಪಡೆದಿದ್ದಳು. ಯಾರಿಗೂ ಅನುಮಾನ ಬರಬಾರದು, ಗಂಡನ ದೇಹದಲ್ಲಿ ವಿಷದ ಅಂಶ ಸಿಗಬಾರದು ಎಂದು ಆಕೆ ಆತನ ಕಿವಿಗೆ ವಿಷ ಸುರಿದು ಕೊಲೆ ಮಾಡಿದ್ದಾಳೆ.

UNITED COLORS OF BENETTON Polo T Shirt | Collar Tshirts | T-Shirt For Men | Half Sleeves Plain T Shirt | T-Shirt |Tshirt For Men Stylish | Men's Tshirt | Solid Polo T-Shirt with Colored Collar Tipping

ಅಲ್ಲ ಎಂಥಾ ಪ್ಲಾನ್‌ ನೋಡಿ ಇಬ್ಬರು ಖತರ್ನಾಕ್‌ಗಳು ಸೇರಿಕೊಂಡು ಒಬ್ಬ ಅಮಾಯಕನ ಜೀವವನ್ನೆ ತೆಗೆದಿದ್ದಾರೆ. ಅವಳ ಗಂಡ ಸಂಪತ್‌ಕುಮಾರ್‌ ಎಂದು ಪಾಪ ಗ್ರಂಥಾಲಯದಲ್ಲಿ ಕ್ಲೀನರ್‌ ಕೆಲಸ ಮಾಡುತ್ತಿದ್ದ ಆದರೆ ಈತನಿಗೆ ಕುಡಿತದ ಚಟ ಎನ್ನುವುದು ಹೆಚ್ಚಾಗಿಯೇ ಮೈಗೂಡಿತ್ತು. ದಿನಾ ಕುಡಿದುಬಂದು ಹೆಂಡತಿಗೆ ಹೊಡೆಯುತ್ತಿದ್ದ ಇವನಿಗೆ ಮೂರು ಮಕ್ಕಳಿದ್ದವು .ಹೆಂಡತಿ ಒಂದು ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಬಂದು ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಳು. ಅಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರಾಜಯ್ಯ ಎಂಬುವವನ ಜೊತೆ ಮಾತುಕಥೆ ಶುರುವಾಗಿದೆ. ಅದು ಪ್ರೀತಿಗೆ ತಿರುಗಿದೆ.

ಅಲ್ಲಿಂದ ಸ್ಟಾಟ್‌ ಆಯ್ತು ನೋಡಿ ಈ ಗಂಡನನ್ನೇ ಮುಗಿಸುವ ಖತರ್ನಾಕ್‌ ಪ್ಲಾನ್‌ . ಇವಳ ಪ್ಲಾನ್‌ ಅನ್ನು ತನ್ನ ಪ್ರಿಯಕರನಿಗೆ ವಿವರಿಸಿದ್ದಾಳೆ ಆತ ಗಂಡನನ್ನು ಬೇಗ ಮುಗಿಸು ನಾವು ಖುಷಿಯಾಗಿ ಇರಬಹುದು ಎಂದು ಅಂಗಡಿಯಿಂದ ಕಳೆನಾಶಕ ತಂದು ಕೊಟ್ಟಿದ್ದಾನೆ. ರಾತ್ರಿ ಗಂಡ ಕುಡಿದು ಮನೆಗೆ ಬಂದಾಗ ಪ್ರಜ್ಞೆ ಇಲ್ಲದೇ ಮಲಗಿದ್ದಾಗ ಗಂಡನ ಕಿವಿಗೆ ಕಳೆನಾಶಕ ಸುರಿದು ಸಾಯಿಸಿದ್ದಾಳೆ ಹಾಗೇ ಯಾವುದೇ ಅನುಮಾನ ಬರಬಾರದೂ ಅಂತ ಪೊಲೀಸ್‌ ಠಾಣೆಗೆ ತಾನೆ ಹೋಗಿ ನನ್ನ ಗಂಡ ಕಾಣಿಸುತ್ತಿಲ್ಲ ಎಂದು ದೂರನ್ನೂ ಸಹ ದಾಖಲಿಸಿದ್ದಾಳೆ.

ಅಲ್ಲಾ ಎಂಥ ಕಿಲಾಡಿ ಇರ್ಬೇಕು ನೋಡಿ ಈಕೆ ತನ್ನ ಗಂಡನ್ನ ತಾನೇ ಸಾಯಿಸಿ ಪೊಲೀಸ್‌ ಮುಂದೆ ಅದೇಗೆ ಹೋಗಿ ನಿಂತುಕೊಂಡು ದೂರನ್ನ ದಾಖಲಿಸಿದ್ದಾಳೆ. ಅಲ್ಲ ಈಗಿನ ಕಾಲದಲ್ಲಿ ಮದುವೆ ಎನ್ನುವ ಬಂಧದಲ್ಲಿ ನಂಬಿಕೆಯನ್ನೇ ಕಳೆದುಕೊಳ್ಳುತ್ತಿರುವ ಯುವ ಪೀಳಿಗೆಯ ಕಣ್ಣಿಗೆ ಇಂಥಾ ಘಟನೆಗಳೆ ಇನ್ನೂ ಬೀಳುತ್ತಾ ಹೋದರೆ ಸಂರ್ಪೂರ್ಣ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಅಲ್ಲದೆ ತಮ್ಮ ಜೀವನವನ್ನ ಒಬ್ಬಂಟಿಯಾಗಿ ಕಳೆಯಲು ನಿರ್ಧಾರ ಮಾಡಿಬಿಡುವುದರಲ್ಲಿ ಆಶ್ಚರ್ಯವಿಲ್ಲ.. ಇದೇ ರೀತಿಯ ವಿಶೇಷ ಕಂಟೆಂಟ್‌ಗಳಿಗಾಗಿ ನೋಡ್ತಾ ಇರಿ ಇನ್ಸೈಟ್‌ರಶ್‌ ನ್ಯೂಸ್‌ ನಮಸ್ಕಾರ .. ವೀಡಿಯೋ ನೋಡಿದಕ್ಕಾಗಿ ನಿಮಗೆ ಧನ್ಯವಾದಗಳು…