Skip to main content
ವಿಡಿಯೋ
1/2
politics

ಕೇಂದ್ರ ಸಚಿವ ಕುಮಾರಸ್ವಾಮಿ ಮನೆಗೆ ಎಚ್‌.ಡಿ. ರೇವಣ್ಣ ಭೇಟಿ

By Pavitra Ganapathi Baradavalli
ಕೇಂದ್ರ ಸಚಿವ ಕುಮಾರಸ್ವಾಮಿ ಮನೆಗೆ ಎಚ್‌.ಡಿ. ರೇವಣ್ಣ ಭೇಟಿ

ದಿನೇ ದಿನೇ ರಾಜಕೀಯ ರಂಗದಲ್ಲಿ ಒಂದಲ್ಲಾ ಒಂದು ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲಿ ನಡೆದಿರುವ ಬೆಳವಣಿಗೆ ಸ್ವಲ್ಪ ವಿಶೇಷವಾಗಿದೆ ಏಕೆಂದರೆ ಸತತ ಕಳೆದೊಂದು ವರ್ಷದಿಂದ ಹೆಚ್‌ಡಿಕೆ ಮನೆಗೆ ಭೇಟಿ ಕೊಡದ ಹೆಚ್‌ಡಿ ರೇವಣ್ಣ ಇಂದು ಧಿಢೀರ್‌ ಭೇಟಿ ನೀಡಿದ್ದಾರೆ. 

ಬೆಂಗಳೂರು: ದಿನೇ ದಿನೇ ರಾಜಕೀಯ ರಂಗದಲ್ಲಿ ಒಂದಲ್ಲಾ ಒಂದು ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲಿ ನಡೆದಿರುವ ಬೆಳವಣಿಗೆ ಸ್ವಲ್ಪ ವಿಶೇಷವಾಗಿದೆ ಏಕೆಂದರೆ ಸತತ ಕಳೆದೊಂದು ವರ್ಷದಿಂದ ಹೆಚ್‌ಡಿಕೆ ಮನೆಗೆ ಭೇಟಿ ಕೊಡದ ಹೆಚ್‌ಡಿ ರೇವಣ್ಣ ಇಂದು ಧಿಢೀರ್‌ ಭೇಟಿ ನೀಡಿದ್ದಾರೆ. 


ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಹೊಸ ಗಾಳಿ ಬೀಸುವಂತೆ ಮಾಡಿದೆ. ಈ ಧಿಢೀರ್‌ ಬೆಳವಣಿಗೆಯಿಂದ ಉಂಟಾಗುವ ಬದಲಾವಣೆಗೆ ಕಾದು ನೋಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರು ಇಂದು ಮುಂಜಾನೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾದದ್ದು ವಿಶೇಷವಾಗಿದೆ.


ಬೆಳಿಗ್ಗೆ ಬೆಳಿಗ್ಗೆಯೇ ಜೆಪಿ ನಗರದಲ್ಲಿರುವ ಕುಮಾರಸ್ವಾಮಿಯವರ  ಮನೆಗೆ ರೇವಣ್ಣ ಅವರು ಭೇಟಿ ನೀಡಿದ್ದಾರೆ. ಈ ಭೇಟಿಯು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಪ್ರಜ್ವಲ್ ವಿರುದ್ಧ ತೀರ್ಪು ಪ್ರಕಟವಾದ ನಂತರ ಕುಟುಂಬದ ಒಳಗಿರುವ ಪರಿಸ್ಥಿತಿ ಹಾಗೂ ಮುಂದಿನ ರಾಜಕೀಯ ತಂತ್ರದ ಕುರಿತು ಮಾತುಕತೆ ನಡೆದಿರುವ ಸಾಧ್ಯತೆಗಳ ಬಗ್ಗೆ ಅಂದಾಜು ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ಮೋದಿಯವರ ಆಗಮನಕ್ಕೆ ಭರ್ಜರಿ ಸಿದ್ಧತೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಂದ ಪರಿಶೀಲನೆ

ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆಳವಣಿಗೆ, ಮುಂದಿನ ದಿನಗಳಲ್ಲಿ ಹೊಸ ತಿರುವು ಪಡೆಯುವ ಸಾಧ್ಯತೆಗಳಿವೆ.


Symbol Premium Men's Wrinkle-Resistant Regular Fit Cotton Formal Shirt