Skip to main content
ವಿಡಿಯೋ
1/2
general

ಮೈಸೂರು : ದಸರಾ ಆನೆಗಳ ತೂಕ ಪರೀಕ್ಷೆ: 5.465 ಕೆಜಿ ತೂಗಿ ಹೆಚ್ಚು ತೂಕ ಹೊಂದಿದ ಆನೆ ಎಂದು ಮೊದಲ ಸ್ಥಾನ ಗಿಟ್ಟಿಸಿಕೊಂಡ ಭೀಮಾ

By Pavitra Ganapathi Baradavalli
ಮೈಸೂರು : ದಸರಾ ಆನೆಗಳ ತೂಕ ಪರೀಕ್ಷೆ: 5.465 ಕೆಜಿ ತೂಗಿ ಹೆಚ್ಚು ತೂಕ ಹೊಂದಿದ ಆನೆ ಎಂದು ಮೊದಲ ಸ್ಥಾನ ಗಿಟ್ಟಿಸಿಕೊಂಡ ಭೀಮಾ

ನಾಡಹಬ್ಬ ದಸರಾ ದಿನಗಳು ಇನ್ನೇನು ಹತ್ತಿರ ಬರುತ್ತಿವೆ ಆದ್ದರಿಂದ ಮೈಸೂರಿನಲ್ಲಿ ದಸರಾ ಕುರಿತಾಗಿ ಆಚರಣೆಗಳು ಸಂಭ್ರಮದಿಂದ ಜರುಗುತ್ತವೆ. ನಾಡಹಬ್ಬ ದಸರಾಗೆ ಎಲ್ಲಾ ಮುಂಚೂಣಿ ತಯಾರಿಗಳು ನಡೆಯುತ್ತವೆ. ಆದರೆ ಇಂದು ಆನೆಗಳ ತೂಕವನ್ನು ಪರೀಕ್ಷಿಸಲಾಯಿತು.

ಮೈಸೂರು: ನಾಡಹಬ್ಬ ದಸರಾ ದಿನಗಳು ಇನ್ನೇನು ಹತ್ತಿರ ಬರುತ್ತಿವೆ ಆದ್ದರಿಂದ ಮೈಸೂರಿನಲ್ಲಿ ದಸರಾ ಕುರಿತಾಗಿ ಆಚರಣೆಗಳು ಸಂಭ್ರಮದಿಂದ ಜರುಗುತ್ತವೆ. ನಾಡಹಬ್ಬ ದಸರಾಗೆ ಎಲ್ಲಾ ಮುಂಚೂಣಿ ತಯಾರಿಗಳು ನಡೆಯುತ್ತವೆ.

ಆದರೆ ಇಂದು ಆನೆಗಳ ತೂಕವನ್ನು ಪರೀಕ್ಷಿಸಲಾಯಿತು. ಪ್ರತಿಯೊಂದು ಆನೆಯನ್ನು ತೂಕದ ಮೆಷಿನ್‌ ಮೇಲೆ ತೂಗಿ ಅವುಗಳು ಎಷ್ಟು ಭಾರ ಹೊಂದಿದ್ದಾವೆ ಮತ್ತು ಅಂಬಾರಿ ಹೊರಲು ಸೂಕ್ತವಾದ ತೂಕ ಹೊಂದಿವೆಯೇ ಎಂದು ತೂಗಿ ನೋಡಲಾಯಿತು. ಆನೆಗಳ ತೂಕ ನೋಡಿದ ನಂತರ ಕ್ಯಾಪ್ಟನ್‌ ಅಭಿಮನ್ಯು 5,360 ಕೆ.ಜಿ ತೂಕ ಹೊಂದಿ ಎರೆಡನೇ ಹೆಚ್ಚು ತೂಕದ ಆನೆಯಾಗಿ ಹೊರ ಹೊಮ್ಮಿದನು. ಮೊದಲನೇ ಸ್ಥಾನವನ್ನು  ಭೀಮ ಗಳಿಸಿಕೊಂಡನು. ಬರೋಬ್ಬರಿ 5465 ಕೆ.ಜಿ ತೂಗಿ ಇಡೀ ಶಿಬಿರದಲ್ಲೇ ಅತ್ಯಂತ ಹೆಚ್ಚು ತೂಕ ಹೊಂದಿದ ಆನೆಯಾಗಿ ಹೊರಹೊಮ್ಮಿದನು.


ಅರಮನೆ ಆವರಣದಲ್ಲಿ ಬಿಡಾರ ಹೂಡಿರುವ 9 ದಸರಾ ಆನೆಗಳ ತೂಕ ಪರೀಕ್ಷೆಯು ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಎಲೆಕ್ಟ್ರಾನಿಕ್‌ ವೇಬ್ರಿಡ್ಜ್‌ನಲ್ಲಿ ಇಂದು ನಡೆಸಲಾಯಿತು.
ಕಳೆದ ಭಾರಿ ನಡೆಸಿದ್ದ  ತೂಕ ಪರೀಕ್ಷೆಯಲ್ಲಿ  5.3 ಟನ್‌ ತೂಗುವ ಮೂಲಕ ಅಭಿಮನ್ಯು ಎಲ್ಲಾ ಆನೆಗಳಿಗಿಂತ ತೂಕಬಲದಲ್ಲಿ ಮೊದಲ ಸ್ಥಾನದಲ್ಲಿದ್ದನು. ಈ ಭಾರಿಯ ಮೊದಲ ತೂಕ ಪರೀಕ್ಷೆಯಲ್ಲಿ 60 ಕೆ.ಜಿ ಹೆಚ್ಚು ತೂಗಿದ್ದಾನೆ.

ಭೀಮ ಎಲ್ಲಾ ಆನೆಗಳಿಗಿಂತ ಒಂದು ಪಟ್ಟು ಜಾಸ್ತಿಯೇ ತೂಗಿ ಎಲ್ಲರಿಗಿಂತ ಒಂದು ಕೈ ಹೆಚ್ಚು ಎನಿಸಿಕೊಂಡಿದ್ದಾನೆ.


2017 ರಿಂದ  ಅಂದರೆ ಭೀಮ ಸತತ ನಾಲ್ಕು ವರ್ಷದಿಂದ  ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಾ ಬರುತ್ತಿರುವ ಭೀಮ ದಾಖಲೆಯ ಪ್ರಮಾಣದಲ್ಲಿ ಬಲ ಹೆಚ್ಚಿಸಿಕೊಂಡಿದ್ದಾನೆ.2024  ರ ದಸರಾದಲ್ಲಿ ಸುಮಾರು 4 ಸಾವಿರ ಕೆ.ಜಿ ತೂಗುತ್ತಿದ್ದವ ವರ್ಷದಿಂದ ವರ್ಷಕ್ಕೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಾ ಬರುತ್ತಿದ್ದಾನೆ.ಸದ್ಯ ಭೀಮ 5.5  ಟನ್‌ ಅಂಚಿಗೆ ಬಂದು ನಿಂತಿದ್ದಾನೆ.  ಕೇವಲ 25 ವರ್ಷದ ಕಿರಿಯ ಆನೆಯಾಗಿದ್ದರೂ ತೂಕದಲ್ಲಿ ಬಲಶಾಲಿಯಾಗಿ ಹೊರಹೊಮ್ಮಿದ್ದಾನೆ. 6  ಟನ್‌ಗಿಂತಲೂ ಹೆಚ್ಚು ತೂಗುವ ಮಾಸ್ಟರ್‌ ಅರ್ಜುನನ ದಾಖಲೆ ಮುರಿಯುವ ತವಕದಲ್ಲಿದ್ದಾನೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ 2025: 78ನೇ ಅಲ್ಲ 79ನೇ! ಈ ಗೊಂದಲದ ಸತ್ಯ ಏನು?

ಕಳೆದ 9  ವರ್ಷದಿಂದ ದಸರಾಗ ಬರುತ್ತಿರುವ ಅನುಭವಿ ಆನೆ ಧನಂಜಯ  5,310  ಕೆ.ಜಿ ತೂಗಿ ಮೂರನೇ ಸ್ಥಾನ ಪಡೆದರೆ. ಎತ್ತರದ ಆನೆ ಎನಿಸಿಕೊಂಡಿರುವ ಮತ್ತು ಆಕರ್ಷಕ ಕಿವಿಗಳನ್ನು ಹೊಂದಿರುವ 40ವರ್ಷದ ಏಕಲವ್ಯ  5,305  ಕೆ.ಜಿ ತೂಗಿ   4ನೇ ಸ್ಥಾನ ಪಡೆದಿದ್ದಾನೆ. ಶ್ರೀರಂಗಪಟ್ಟಣ ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ, ಕೂಂಬಿಂಗ್ ಕಾರ್ಯಾಚರಣೆಯಲ್ಲಿ 'ಅರ್ಜುನ' ಸ್ಥಾನ ತುಂಬಿರುವ 'ಮಹೇಂದ್ರ' 5,120 ಕೆ.ಜಿ ತೂಗಿದರೆ, 'ಪ್ರಶಾಂತ' 5,110 ಕೆ.ಜಿ ಇದ್ದನು.

Amazon Brand - Symbol Men's Cotton Rich Striped Polo Tshirts | Collar Tshirts | Half Sleeves - Regular Fit (Available in Plus Size and Combo Pack of 2)

ಮೂರನೇ ಬಾರಿ ದಸರೆಯಲ್ಲಿ ಪಾಲ್ಗೊಳ್ಳುತ್ತಿರುವ ಸುಂದರ ಆನೆ 26 ವರ್ಷದ 'ಕಂಜನ್' 4,880 ಕೆ.ಜಿ ತೂಗಿದರೆ, ಹೆಣ್ಣಾನೆಗಳಲ್ಲಿಲಕ್ಷ್ಮಿ 3,730 ಕೆ.ಜಿ ಹಾಗೂ 'ಕಾವೇರಿ' 3,010 ಕೆ.ಜಿ ತೂಕವಿದ್ದರು.

ಈ ಕಾರ್ಯಕ್ರಮದಲ್ಲಿ ಡಿಸಿಎಫ್ .ಬಿ.ಪ್ರಭುಗೌಡ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.