Skip to main content
ವಿಡಿಯೋ
crime

ಅಸ್ಸಾಂ ಚಹಾ ತೋಟದಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ: ಆರೋಪಿಯ ಬಂಧನ..!

By Vinutha U
ಅಸ್ಸಾಂ ಚಹಾ ತೋಟದಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ: ಆರೋಪಿಯ ಬಂಧನ..!

ಆತನನ್ನು ಈಗ ಬಂಧಿಸಲಾಗಿದ್ದು, POCSO ಕಾಯ್ದೆ ಮತ್ತು BNSನ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ನಾಮ್ರೂಪ್‌ನ DSP ಪ್ರಸೆಂಜಿತ್ ದಾಸ್ ತಿಳಿಸಿದ್ದಾರೆ.

ಅಸ್ಸಾಂನ ದಿಬ್ರುಗಢ ಜಿಲ್ಲೆಯ ಕಚಾರಿ ಪಥಾರ್ನಲ್ಲಿರುವ ಒಂದು ಸಣ್ಣ ಚಹಾ ತೋಟದಲ್ಲಿ ಆಗಸ್ಟ್ 10, 2025 ರಂದು 8 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಶನಿವಾರ ಬಾಲಕಿಯು ಕಟ್ಟಿಗೆ ತರಲು ಹೋದಾಗ ನಡೆದಿರುವ ಘಟನೆ.

ಪೊಲೀಸರ ಪ್ರಕಾರ, ಆರೋಪಿಯಾದ ಜಿತನ್ ಲೋಕರ್ (45 ವರ್ಷ) ಎಂಬಾತ ಸಮೀಪದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಬಾಲಕಿಯನ್ನು ಒಂಟಿಯಾಗಿ ಕಂಡು ಅತ್ಯಾಚಾರವೆಸಗಿದ್ದಾನೆ, ನಂತರ ಆ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. ಆರೋಪಿಯು ಬಾಲಕಿಯ ಶವವನ್ನು ಒಂದು ಒಳಚರಂಡಿಯಲ್ಲಿ ಹಾಕಿ, ಹುಲ್ಲು ಮತ್ತು ಒಣಗಿದ ಗಿಡಗಳಿಂದ ಮುಚ್ಚಿದ್ದಾನೆ. ಬಾಲಕಿಯು ತುಂಬ ಸಮಯವಾದರೂ ಕೂಡ ಮನೆಗೆ ಹೋಗದಿದ್ದಾಗ ಅವಳ ಪೋಷಕರು ಮತ್ತು ನೆರೆಹೊರೆಯವರು ಸುತ್ತ-ಮುತ್ತಾ ಹುಡುಕಾಟ ನಡೆಸಿದ್ದಾರೆ, ಮತ್ತು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಪೋಲಿಸರು ಬಾಲಕಿಯನ್ನು ಪ್ರತಿಯೊಂದು ಕಡೆಯು ಹುಡುಕಾಟ ನಡೆಸಿದ್ದಾರೆ ನಂತರ ಬಾಲಕಿಯ ಶವ ರಾತ್ರಿ 8:40 ಸುಮಾರಿಗೆ ಪತ್ತೆಹಚ್ಚಲಾಗಿದೆ.

YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal

ಆರೋಪಿಯು ಓಡಿಹೋಗಲು ಯತ್ನಿಸಲು ಪ್ರಯತ್ನ ಮಟ್ಟ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯು ಹಿಂದೆ ತನ್ನ ತಾಯಿಯನ್ನು ಕೊಲೆ ಮಾಡಿದ್ದಕ್ಕಾಗಿ 14 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿ, ಮೂರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಈಗ ಬಂಧಿಸಲಾಗಿದ್ದು, POCSO ಕಾಯ್ದೆ ಮತ್ತು BNS ಸಂಬಂಧಿತ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ನಾಮ್ರೂಪ್ DSP ಪ್ರಸೆಂಜಿತ್ ದಾಸ್ ತಿಳಿಸಿದ್ದಾರೆ.