Skip to main content
ವಿಡಿಯೋ
local

ಹೊಸೂರಿನಲ್ಲಿ ಆಸ್ಪತ್ರೆ ಉದ್ಘಾಟನೆ: ಲಿಫ್ಟ್‌ನಲ್ಲಿ ಸಿಲುಕಿದ ಸಚಿವ ರಾಮಲಿಂಗಾರೆಡ್ಡಿ.!

By Shravanthi R
ಹೊಸೂರಿನಲ್ಲಿ ಆಸ್ಪತ್ರೆ ಉದ್ಘಾಟನೆ: ಲಿಫ್ಟ್‌ನಲ್ಲಿ ಸಿಲುಕಿದ ಸಚಿವ ರಾಮಲಿಂಗಾರೆಡ್ಡಿ.!

ಸುಮಾರು 10 ನಿಮಿಷ ಲಿಫ್ಟ್ ನಲ್ಲಿ ಸಿಲುಕಿದ ಸಚಿವ ರಾಮಲಿಂಗಾರೆಡ್ಡಿ, ಹೊಸೂರು ಶಾಸಕ ಪ್ರಕಾಶ್ ಸೇರಿದಂತೆ ಸುಮಾರು ಹತ್ತು ಜನರಿದ್ದ ಲಿಫ್ಟ್ ಕಾರಣವಾಗಿ ಕೆಲ ಹೊತ್ತು ಆಸ್ಪತ್ರೆ ಆವರಣದಲ್ಲಿ ಗೊಂದಲಕ್ಕೆಡೆಯಾಗಿತ್ತು.

ಆನೇಕಲ್ : ಇಲ್ಲಿನ ರಾಜ್ಯ ಗಡಿಭಾಗ ತಮಿಳುನಾಡಿನ ಹೊಸೂರಿನ ಖಾಸಗಿ ಆಸ್ಪತ್ರೆಯ ಉದ್ಘಾಟನೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಆಹ್ವಾನಿಸಲಾಗಿತ್ತು. ಜಾರ್ಖಂಡ್‌ನ ಗೊಡ್ಡಾದಲ್ಲಿ ಕುಖ್ಯಾತ ಅಪರಾಧಿ ಸೂರ್ಯ ನಾರಾಯಣ ಹನ್ಸದಾ ಪೊಲೀಸ್ ಚಕಮಕಿಯಲ್ಲಿ..! ಸ್ಥಳಕ್ಕೆ ಆಗಮಿಸಿದ ಅವರು ಕೆಲ ಹೊತ್ತು ಲಿಫ್ಟ್ ನಲ್ಲಿ ಸಿಲುಕಿದ ಘಟನೆ ನಡೆದಿದೆ. ನೆಲಮಹಡಿಯಿಂದ ಲಿಫ್ಟ್ ನಲ್ಲಿ ಹೋಗುವಾಗ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹೊಸೂರು ಎಂಎಲ್ಎ ಕೂಡ ಲಿಫ್ಟ್ ನಲ್ಲಿ ಲಾಕ್ ಆಗಿ ಪರದಾಡುವ ಸ್ಥಿತಿ ಎದುರಾಗಿತ್ತೆಂದು ವರದಿಯಾಗಿದೆ. 


DIGITEK® DWM-116 2-in-1 Wireless Microphone, 2.4GHz, Magnetic Collar Clip, 360° Sound Capture, 40m Range, 6Hr Battery, Type C-to-C & C to LTC, DSLR, iOS & Android Compatible, for Interviews & Vlogging

ಆಸ್ಪತ್ರೆ ಉದ್ಘಾಟನೆ ಮಾಡಲು ಹೋಗುವ ಸಂದರ್ಭದಲ್ಲಿ ಕೆಟ್ಟು ನಿಂತ ಲಿಫ್ಟ್, ಸುಮಾರು 10 ನಿಮಿಷ ಲಿಫ್ಟ್ ನಲ್ಲಿ ಸಿಲುಕಿದ ಸಚಿವ ರಾಮಲಿಂಗಾರೆಡ್ಡಿ, ಹೊಸೂರು ಶಾಸಕ ಪ್ರಕಾಶ್ ಸೇರಿದಂತೆ ಸುಮಾರು ಹತ್ತು ಜನರಿದ್ದ ಲಿಫ್ಟ್  ಕಾರಣವಾಗಿ ಕೆಲ ಹೊತ್ತು ಆಸ್ಪತ್ರೆ ಆವರಣದಲ್ಲಿ ಗೊಂದಲಕ್ಕೆಡೆಯಾಗಿತ್ತು. ಆನಂತರದಲ್ಲಿ ಲಿಫ್ಟ್ ಆಪರೇಟರ್ ಸಹಾಯದಿಂದ ಡೋರ್ ಓಪನ್ ಮಾಡಲಾಗಿದೆ. ಇದಾದ ಬಳಿಕ, ಆಸ್ಪತ್ರೆ ಉದ್ಘಾಟಿಸಿ ಸಚಿವ ರಾಮಲಿಂಗಾರೆಡ್ಡಿ ತೆರಳಿದರು ಎನ್ನಲಾಗಿದೆ.