ರಾಜ್ಯ ಕಾಂಗ್ರೆಸ್ ಸಚಿವರಾಗಿದ್ದೆ ಕೆ ಎನ್ ರಾಜಣ್ಣ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದು ರಾಜ್ಯದೆಲ್ಲೆಡೆ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ತಮ್ಮ X ಖಾತೆಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.ಕಾಶಿಯಲ್ಲಿ ನಾವು ಪೂಜಿಸುತ್ತಿರುವುದು ನಿಜವಾಗಿಯೂ ವಿಶ್ವನಾಥನಿಗೆಯೇ.? ನಿಜವಾದ ಜ್ಯೋತಿರ್ಲಿಂಗ ಎಲ್ಲಿದೆ.?
' ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇದೀಗ ಹತಾಶರಾಗಿದ್ದಾರೆ, ಇದರಿಂದಾಗಿ ಇದ್ದದ್ದು ಇದ್ದಂಗೆ ಹೇಳಿದ ಕೆ ಎನ್ ರಾಜಣ್ಣ ಅವರ ತಲೆದಂಡವಾಗಿದೆ. ಪಕ್ಷದ ಆಂತರಿಕ ದಬ್ಬಾಳಿಕೆಯನ್ನು ನಿಷ್ಟೂರವಾಗಿ ಬಿಚ್ಚಿಡುತ್ತಿದ್ದ ರಾಜಣ್ಣ ಅವರು ಕಾಂಗ್ರೆಸ್ ಹೈಕಮಾಂಡ್ ಗೆ ಬಿಸಿ ತುಪ್ಪವಾಗಿದ್ದರು, ರಾಹುಲ್ ಗಾಂಧಿ ಅವರ ಎಡಬಿಡಂಗಿ ನಡೆಯನ್ನು ಎತ್ತಿ ಹಿಡಿದಕ್ಕಾಗಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರು ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದಾರೆ, ಇದಕ್ಕೆ ಕರ್ನಾಟಕ ಸರ್ಕಾರದ ನಿರ್ಧಾರಗಳನ್ನು ಹೈಕಮಾಂಡ್ ಅಂಗಳದಲ್ಲಿ ಪ್ರಕಟಿಸುತ್ತಿರುವುದು ಸಾಕ್ಷಿ. ಕಾಶಿಯ ಆ ಬಾವಿಗೆ ಜ್ಞಾನವಾಪಿ ಎನ್ನೋ ಹೆಸರು ಹೇಗೆ ಬಂತು.?
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಕಾರಣಕ್ಕಾಗಿ ಜನರು ಶಪಿಸುತ್ತಿದ್ದಾರೆ, ಇದರ ನಡುವೆ ದಮನಿತ ಸಮುದಾಯದ ನಾಯಕರನ್ನು ರಾಜಕೀಯವಾಗಿ ಮುಗಿಸಲು ನಡೆಯುತ್ತಿರುವ ಷಡ್ಯಂತ್ರ ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡವನ್ನು ಜನ ತಿಳಿಯುವಂತೆ ಮಾಡಿದೆ.' ಎಂದು ಬಿ ವೈ ವಿಜಯೇಂದ್ರ ಕಿಡಿ ಕಾರಿದ್ದಾರೆ.