ನವ ದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಓಡಾಡುವ ವಾಹನ ಮಾಲೀಕರಿಗೆ ಅನುಕೂಲ ಮಾಡಿಕೊಡುವ ಹಾಗೂ ಟೋಲ್ ಗೇಟ್ಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಹೆದ್ದಾರಿ ಸಚಿವಾಲಯ ಇದೇ ಆಗಸ್ಟ್ 15 ರಿಂದ ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್‌ಗೆ ಚಾಲನೆ ನೀಡುತ್ತಿದ್ದು, ವಾಹನ ಚಾಲಕರಿಗೆ ಇದರಿಂದ ಉಪಯೋಗ ಆಗುವ ಎಲ್ಲಾ ಲಕ್ಷಣಗಳು ಇದೆ ಎನ್ನಲಾಗುತ್ತಿದೆ.
ವಾರ್ಷಿಕ ಫಾಸ್ಟ್‌ಟ್ಯಾಗ್ ಪಾಸ್ ವಿತರಣಾ ಕಾರ್ಯಕ್ಕೆ ಆಗಸ್ಟ್ 15ರಿಂದ ಚಾಲನೆ ಸಿಗಲಿದ್ದು, ವಾಣಿಜ್ಯೇತರ ವಾಹನಗಳಾದ ಖಾಸಗಿ ಕಾರು, ಜೀಪು ಮತ್ತು ವ್ಯಾನ್ಗಳ ಮಾಲೀಕರಿಗೆ ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ನೀಡಲಾಗುತ್ತಿದೆ. ಈ ವರ್ಷ ಜೂನ್‌ನಲ್ಲೇ ಈ ಫಾಸ್ಟ್‌ಟ್ಯಾಗ್ ಪಾಸ್ ಕುರಿತು ಘೋಷಣೆ ಮಾಡಲಾಗಿದ್ದು, ಇದು ಕೇವಲ ಖಾಸಗಿ ಹಾಗೂ ವಾಣಿಜ್ಯೇತರ ವಾಹನಗಳಿಗಷ್ಟೇ ಸೀಮಿತವಾಗಿದೆ.TRASE Block Heels Sandals For Women, Dusky Stylish & Comfortable Footwear
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ನಿರ್ವಹಿಸುವ ಭಾರತದ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ, ಫಾಸ್ಟ್ಟ್ಯಾಗ್, ಹೊಸ ವಾರ್ಷಿಕ ಪಾಸ್ನ ಪರಿಚಯದೊಂದಿಗೆ ಗಮನಾರ್ಹ ನವೀಕರಣವನ್ನು ಪಡೆಯಲಿದ್ದು, ವಿಶೇಷವಾಗಿ ಆಗಾಗ್ಗೆ ಪ್ರಯಾಣಿಸುವವರಿಗೆ ಇದು ಪ್ರಯೋಜನವನ್ನು ನೀಡುತ್ತದೆ.
ಒಮ್ಮೆ ನೀವು ಈ ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ಖರೀದಿಸಿದರೆ ಇದು ಗರಿಷ್ಠ 200 ಟ್ರಿಪ್ ಅಥವಾ ಒಂದು ವರ್ಷ ಟೋಲ್ ಬಳಕೆಯ ಅವಧಿ ಹೊಂದಿರುತ್ತದೆ. ಅಂದರೆ ವಾಹನ ಚಾಲಕ 3000 ರೂ ಪಾವತಿಸಿದರೆ ಒಂದು ಫಾಸ್ಟ್ ಟ್ಯಾಗ್ ವಾರ್ಷಿಕ ಪಾಸ್ ಗರಿಷ್ಠ 200 ಟ್ರಿಪ್ ಅಥವಾ ಒಂದಿಡೀ ವರ್ಷ ಟೋಲ್ ಬಳಕೆ ಇವುಗಳಲ್ಲಿ ಯಾವುದು ಮೊದಲೋ ಅದನ್ನು ಬಳಕೆಗೆ ಅನುಮತಿಸುತ್ತದೆ. ಈ ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ನಿಂದ ಪದೇ ಪದೆ ಫಾಸ್ಟ್ಟ್ಯಾಗ್ ರಿಚಾರ್ಜ್ ಮಾಡುವ ಕಿರಿಕಿರಿಯಿಂದ ವಾಹನ ಮಾಲೀಕರಿಗೆ ಮುಕ್ತಿ ಸಿಗಲಿದೆ ಎಂದು ಹೇಳಲಾಗಿದೆ.