ಮಧುಗಿರಿ: ಈ ಹಿಂದೆ ಕರ್ನಾಟಕ ರಾಜ್ಯ ಕಾಂಗ್ರೆಸ್‌ನ ಸಚಿವ ಸಂಪುಟದಲ್ಲಿ ಸದಸ್ಯರಾಗಿದ್ದ ಕೆ ಎನ್. ರಾಜಣ್ಣ ಅವರು ತಮ್ಮ ನೇರ ಮತ್ತು ದಿಟ್ಟ ಮಾತುಗಳಿಂದ ರಾಜ್ಯದಲ್ಲಿ ಮನೆಮಾತಾಗಿದ್ದರು. ಆದರೆ ಇದಕ್ಕೆ ಸ್ವಪಕ್ಷಯರೇ ವಿರೋಧವನ್ನು ವ್ಯಕ್ತಪಡಿಸಿದ್ದರು, ಸಾಕಷ್ಟು ಬಾರಿ ಕರ್ನಾಟಕ ರಾಜ್ಯ ಕಾಂಗ್ರೆಸ್‌ನ ಸಚಿವರು ಶಾಸಕರು ಮತ್ತು ರಾಷ್ಟ್ರೀಯ ನಾಯಕರು ಅವರ ವೈಯಕ್ತಿಕ ಹೇಳಿಕೆಗಳಿಗೆ ವಿರೋಧ ವ್ಯಕ್ತಪಡಿಸಿದ್ದರೂ, ರಾಜಣ್ಣ ಅವರು ಗಮನಹರಿಸಿರಲಿಲ್ಲ, ಹೀಗಾಗಿ ಕಾಂಗ್ರೆಸ್ ಪಕ್ಷ ಸಚಿವ ಸಂಪುಟದಿಂದ ಬಲವಂತವಾಗಿ ರಾಜೀನಾಮೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಹೆಜ್ಜೆ ಕೆ.ಎನ್ ರಾಜಣ್ಣರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.BULLMER Trendy Clothing Set with Shirt & Pants Co-ords for Men
ಹೀಗಾಗಿ ಬಲವಂತದ ರಾಜೀನಾಮೆ ಪಡೆದ ವಿಷಯಕ್ಕೆ ಸಂಬಂಧಿಸಿದಂತೆ ಅದನ್ನು ವಿರೋಧಿಸಿ ಮಧುಗಿರಿಯಲ್ಲಿ ರಾಜಣ್ಣ ಅವರ ಅಭಿಮಾನಿಗಳು ಇಂದು ಮಧ್ಯಾಹ್ನ ಮಧುಗಿರಿ ಬಂದ್ ಮಾಡುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಮುಂಚಿನ ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ರಾಜಣ್ಣ ಅವರ ಅಭಿಮಾನಿಗಳು ಮಧುಗಿರಿಯಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸುವ ಕ್ರಮಗಳನ್ನು ಅನುಸರಿಸಿ ರಾಜಣ್ಣ ಅವರ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ, ಅದರಲ್ಲಿ ಒಬ್ಬ ಅಭಿಮಾನಿ ಅವನ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಎತ್ನಿಸಿದ್ದಾನೆ, ನಂತರ ಸ್ಥಳದಲ್ಲಿ ಇದ್ದ ಇತರರು ಅವನನ್ನು ತಡೆದಿದ್ದಾರೆ.
ಕಾಂಗ್ರೆಸ್ ಹಿರಿಯ ಶಾಸಕ ರಾಜಣ್ಣ ಅವರ ಬಲವಂತದ ರಾಜೀನಾಮೆಗೆ ಕೆಲವು ಮುಖ್ಯವಾದ ಕಾರಣಗಳು:
- ಪಕ್ಷದ ಹಿತದೃಷ್ಟಿಯನ್ನು ಕಾಯದೆ ತಮಗೆ ಅನಿಸಿದ ಹೇಳಿಕೆಗಳನ್ನು ಆಗಾಗ ಮಾಧ್ಯಮಗಳ ಮುಂದೆ ಇಡುತ್ತಿದ್ದಿದ್ದು..
-ಸಪಕ್ಷಿಯರಿಂದಲೇ ನನಗೆ ಹನಿಟ್ರ್ಯಾಪ್ ನಡೆದಿದೆ ಎಂಬ ಆರೋಪ ಹೀಗಾಗಿ ಪಕ್ಷದ ವರ್ಚಸ್ಸಿಗೆ ದಕ್ಕೆ ಹಿನ್ನೆಲೆ .
- ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹಲವು ಬಾರಿ ಬಹಿರಂಗ ಹೇಳಿಕೆ, ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಬೆಂಬಲಿಗರ ಅಸಮಧಾನ.
- ಮತ್ತು ಇತ್ತೀಚೆಗೆ ರಾಹುಲ್ ಗಾಂಧಿ ಅವರ ಹೇಳಿಕೆಯಾದ ಬಿಜೆಪಿಯಿಂದ ಮತಗಳ್ಳತನವಾಗಿದೆ ಎಂಬುದರ ವಿರುದ್ಧವಾದ ಅತಿ ಬಾಲಿಷ ಹೇಳಿಕೆಯನ್ನು ರಾಜಣ್ಣನವರು ನೀಡಿದ್ದು ಮುಖ್ಯ ಕಾರಣ ಎನ್ನಲಾಗುತ್ತಿದೆ..
ಹೀಗಾಗಿ ರಾಜಣ್ಣ ಅವರಿಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಹಲವು ಶಾಸಕ ಮತ್ತು ಸಚಿವರುಗಳಿಂದ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದ ಸುರ್ಜೆವಾಲರಿಗೆ ದೂರು ಹೋಗಿದ್ದು, ಈ ಹಿನ್ನೆಲೆ ಹಲವು ಬಾರಿ ರಾಜಣ್ಣ ಅವರಿಗೆ ರಾಷ್ಟ್ರೀಯ ಮುಖಂಡರ ತಂಡ ನೋಟಿಸ್ ಮತ್ತು ತಿಳಿ ಹೇಳಿದ್ದರು ರಾಜಣ್ಣ ಮಾತ್ರ ಅವರ ಮಾತುಗಳ ಮೇಲೆ ಎಚ್ಚರಿಕೆ ವಹಿಸಿರಲಿಲ್ಲ, ಹೀಗಾಗಿ ಅವರನ್ನು ಬಲವಂತದಿಂದ ರಾಜೀನಾಮೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಎನ್ ರಾಜಣ್ಣ ಮುಂದಿನ ದಿನಗಳಲ್ಲಿ ಸತ್ಯ ಏನೆಂದು ಹೊರ ಬರಲಿದೆ ಮಾಜಿ ಸಚಿವ ಎಂದು ಕರೆಸಿಕೊಳ್ಳುವುದಕ್ಕೆ ಹೆಮ್ಮೆ ಇದೆ ಎಂದಿದ್ದಾರೆ. ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರಾಜಣ್ಣ ಅವರನ್ನು ಹೀಗೆ ಏಕಾಏಕಿ ಸಚಿವ ಸುಪುಟದಿಂದ ಕಿತ್ತು ಹಾಕಿರುವುದು ರಾಜ್ಯದ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ನಾಯಕರಿಗೆ ಪಾಠವಾಗುವುದರಲ್ಲಿ ಅನುಮಾನವೇ ಇಲ್ಲ.ಇದನ್ನು ಓದಿ: ಅಲ್ ಜಝೀರಾ ಪತ್ರಕರ್ತರ ಹತ್ಯೆ: "ಕೊ**ಗಡುಕರ ಕೃತ್ಯ" ಎಂದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ! ಇಲ್ಲಿದೆ ಮಾಹಿತಿ
ಇದೇ ವಿಚಾರಕ್ಕೆಸಂಬಂಧಿಸಿದಂತೆ ಈ ಹಿಂದೆ ಕೊಡಗು ಮತ್ತು ಮೈಸೂರಿನ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರನ್ನು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷ ಟಿಕೆಟ್ ನೀಡಿರಲಿಲ್ಲ, ಹೀಗಾಗಿ ಪ್ರತಾಪ್ ಸಿಂಹ ಅವರ ಅಭಿಮಾನಿಗಳು ಎಷ್ಟೇ ಹೋರಾಟ, ಧರಣಿಗಳನ್ನು ಮಾಡಿದ್ದರು ಅವರಿಗೆ ಟಿಕೆಟ್ ಸಿಗಲಿಲ್ಲ, ಪಕ್ಷದ ತೀರ್ಮಾನವೇ ಅಂತಿಮವಾಗಲಿದೆ. ಈ ರೀತಿಯ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ ಕಾಂಗ್ರೆಸ್ ನಲ್ಲೂ ಸಹ ಇದೇ ರೀತಿಯ ರಾಜಕೀಯ ಮುಂದುವರಿದರೆ, ಪಕ್ಷದ ತೀರ್ಮಾನವೇ ಅಂತಿಮವಾದರೆ ಯಾವುದೇ ಆಶ್ಚರ್ಯವೂ ಇಲ್ಲ.
ಹೀಗಾಗಿ ಮಧುಗಿರಿಯ ಜಿಲ್ಲಾ ಕಾಂಗ್ರೆಸ್ ಮುಖಂಡರು ಮಾಧ್ಯಮಗಳೊಂದಿಗೆ ಮಾತನಾಡಿ ಕಾಂಗ್ರೆಸ್ ನ ಹಿರಿಯ ಶಾಸಕ ರಾಜಣ್ಣ ಅವರನ್ನು ಅಮಾನತ್ತು ಮಾಡಿರುವುದು ಸರಿಯಾದ ಹೆಜ್ಜೆಯಲ್ಲ ಹೀಗಾಗಿ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಇದೇ ರೀತಿ ಹೋರಾಟ ಇನ್ನೂ ಮುಂದುವರೆದು ತುಮಕೂರಿನಲ್ಲೂ ಮಾಡುವುದಾಗಿ ಎಚ್ಚರಿಸಿದರು. ಹಾಗೂ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ವಿಚಾರವನ್ನು ತಿಳಿಸಿದರು ಹೀಗಾಗಿ ರಾಜ್ಯ ಕಾಂಗ್ರೆಸ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.