Skip to main content
ವಿಡಿಯೋ
general

ಶ್ರೀ ಕೃಷ್ಣನ ಜನನ: ಸೆರೆಮನೆಯಲ್ಲಿ ಹುಟ್ಟಿದ ಕಾರಣ, ತಂದೆ-ತಾಯಿ, ರೋಮಾಂಚಕ ಘಟನೆಗಳು ಮತ್ತು ವಿಷ್ಣುವಿನ ಅವತಾರದ ಉದ್ದೇಶ..!

By Vinutha U
ಶ್ರೀ ಕೃಷ್ಣನ ಜನನ: ಸೆರೆಮನೆಯಲ್ಲಿ ಹುಟ್ಟಿದ ಕಾರಣ, ತಂದೆ-ತಾಯಿ, ರೋಮಾಂಚಕ ಘಟನೆಗಳು ಮತ್ತು ವಿಷ್ಣುವಿನ ಅವತಾರದ ಉದ್ದೇಶ..!

ಈ ಭವಿಷ್ಯವಾಣಿಯಿಂದ ಭಯಗೊಂಡ ಕಂಸನು, ದೇವಕಿ ಮತ್ತು ವಸುದೇವರನ್ನು ತಕ್ಷಣವೇ ಸೆರೆಮನೆಯಲ್ಲಿ ಬಂಧಿಸುತ್ತಾನೆ. ಅವರಿಗೆ ಮಕ್ಕಳು ಜನಿಸಿದ ತಕ್ಷಣವೇ ಕೊಂದುಬಿಡುತ್ತಿದ್ದನು, ಆದರೆ ದೇವಕಿಯ ಎಂಟನೇ ಮಗ ಶ್ರೀ ಕೃಷ್ಣನಾಗಿದ್ದಾನೆಂದು ಅವನಿಗೆ ತಿಳಿದಿರಲಿಲ್ಲ.

ಶ್ರೀ ಕೃಷ್ಣ ಸೆರೆಮನೆಯಲ್ಲಿ ಹುಟ್ಟಿದ್ದು ಯಾಕೆ ಶ್ರೀ ಕೃಷ್ಣನ ನಿಜವಾದ ತಂದೆ ತಾಯಿ ಯಾರು ಕೃಷ್ಣ ಹುಟ್ಟಿದಾಗ ನಡೆದ ರೋಮಾಂಚನಕಾರಿ ವಿಷಯವಾದರೂ ಏನು, ಅಷ್ಟಕ್ಕೂ ಮಹಾವಿಷ್ಣು ಶ್ರೀ ಕೃಷ್ಣ ಅವತಾರದಲ್ಲಿ ಹುಟ್ಟಿದ್ದಾದರೂ ಯಾಕೆ. ಎಲ್ಲ ವಿಷಯವನ್ನು ಎಳೆ ಎಳೆಯಾಗಿ ತಿಳಿದುಕೊಳ್ಳೋಣ.

 

ಕಂಸನ ದುರಾಡಳಿತ ಮತ್ತು ಆಕಾಶವಾಣಿ: ದ್ವಾಪರ ಯುಗದಲ್ಲಿ ಮಥುರೆಯನ್ನು ಕಂಸ ಎಂಬ ಕ್ರೂರ ರಾಜ ಆಳುತ್ತಿದ್ದನು. ಕಂಸ ತನ್ನ ದುರಾಡಳಿತದಿಂದ ಜನರನ್ನು ಪ್ರತಿದಿನವೂ ಕೂಡ ವಿವಿಧ ರೀತಿಯಲ್ಲಿ ಹಿಂಸೆಗೊಳಗಾಗಿಸುತ್ತಿದ್ದನು. ದೇವಕಿಯ ಮದುವೆ ವಸುದೇವನ ಜೊತೆ ಆಗುವ ಸಂದರ್ಭದಲ್ಲಿ, ಆಕಾಶವಾಣಿಯೊಂದು ಕಂಸನಿಗೆ ಎಚ್ಚರಿಕೆ ನೀಡಿತು: "ದೇವಕಿಯ ಎಂಟನೇ ಮಗ ನಿನ್ನ ಸಾವಿಗೆ ಕಾರಣನಾಗುವನು." ಎಂದು ಎಚ್ಚರಿಕೆಯ ದ್ವನಿಯೊಂದು ಕೇಳಿಸುತ್ತದೆ. ಭವಿಷ್ಯವಾಣಿಯಿಂದ ಭಯಗೊಂಡ ಕಂಸನು, ದೇವಕಿ ಮತ್ತು ವಸುದೇವರನ್ನು ತಕ್ಷಣವೇ ಸೆರೆಮನೆಯಲ್ಲಿ ಬಂಧಿಸುತ್ತಾನೆ. ಅವರಿಗೆ ಮಕ್ಕಳು ಜನಿಸಿದ ತಕ್ಷಣವೇ ಕೊಂದುಬಿಡುತ್ತಿದ್ದನು, ಆದರೆ ದೇವಕಿಯ ಎಂಟನೇ ಮಗ ಶ್ರೀ ಕೃಷ್ಣನಾಗಿದ್ದಾನೆಂದು ಅವನಿಗೆ ತಿಳಿದಿರಲಿಲ್ಲ.

 

ಕೃಷ್ಣನ ಜನನ: ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ರಾತ್ರಿಯಂದು, ಭಯಂಕರ ಮಳೆಗಾಲದ ಮಧ್ಯರಾತ್ರಿಯಲ್ಲಿ, ದೇವಕಿ ಮತ್ತು ವಸುದೇವರಿಗೆ ಶ್ರೀ ಕೃಷ್ಣನು ಜನಿಸುತ್ತಾನೆ. ಆಗ ದೈವಿಕ ಶಕ್ತಿಯಿಂದ ಸೆರೆಮನೆಯ ಕಾವಲುಗಾರರೆಲ್ಲೂ ಕೂಡ ಗಾಢ ನಿದ್ರೆಗೆ ಜಾರುತ್ತಾರೆ, ಮತ್ತು ಸೆರೆಮನೆಯ ಎಲ್ಲಾ ಬೀಗಗಳು ಕೂಡ ತಾವಾಗಿಯೇ ತೆರೆದುಕೊಂಡವು. ವಿಷ್ಣುವಿನ ಅವತಾರವಾದ ಕೃಷ್ಣನ ರಕ್ಷಣೆಗಾಗಿ ದೈವಿಕ ಶಕ್ತಿಗಳು ಕೆಲಸ ಮಾಡಿದವು. ವಸುದೇವನು ಭಯದಿಂದ ಶ್ರೀ ಕೃಷ್ಣನನ್ನು ಒಂದು ಬಟ್ಟೆಯಲ್ಲಿ ಸುತತ್ತಿಕೊಂಡು ಬುಟ್ಟಿಯಲ್ಲಿ ಕೃಷ್ನನನ್ನುಇಟ್ಟುಕೊಂಡು ಗೋಕುಲಕ್ಕೆ ತೆರಳುತ್ತಾನೆ.

ಆದರೆ ಆಗ ಯಮುನಾ ನದಿಯು ತೀವ್ರವಾಗಿ ಉಕ್ಕಿ ಹರಿಯುತಿತ್ತು, ಆದರೆ  ಶೇಷನಾಗ (ವಿಷ್ಣುವಿನ ಸರ್ಪ)ವು ಕೃಷ್ಣನಿಗೆ ರಕ್ಷಣೆಯಾಗಿ ತನ್ನ ಎಡೆಯನ್ನು ಬಿಚ್ಚಿ ಛತ್ರಿಯಂತೆ ಹಿಡಿದು ಯಮುನಾ ನದಿಯಿಂದ ದಾರಿ ಮಾಡಿ ಕೊಟ್ಟಿತು.

ಇದನ್ನು ಓದಿ: ಸ್ಲೀಪರ್ ಬಸ್‌ಗೆ ಬೈಕ್ ಡಿಕ್ಕಿ..ಬಸ್‌ಗೆ ಹೊತ್ತಿಕೊಂಡ ಬೆಂಕಿ, ಮೂವರು ಸ್ಥಳದಲ್ಲೇ ಸಾವು!

 

ಗೋಕುಲದಲ್ಲಿ ಕೃಷ್ಣನ ಬಾಲ್ಯ: ಗೋಕುಲದಲ್ಲಿ, ನಂದಗೋಪಲ  ಮತ್ತು ಯಶೋದೆಯವರು ಕೃಷ್ಣನನ್ನು ತಮ್ಮ ಮಗನಂತೆ ಸಲಹಿದರು. ಅದೇ ರಾತ್ರಿ, ಯಶೋದೆಗೆ ಜನಿಸಿದ ಹೆಣ್ಣುಮಗುವನ್ನು ವಸುದೇವ ತೆಗೆದುಕೊಂಡು ಮಥುರೆಗೆ ಮರಳಿದರು. ಕಂಸನಿಗೆ ಮಗು ದೇವಕಿಯ ಎಂಟನೇ ಮಗುವೆಂದು ತಿಳಿದು, ಅದನ್ನು ಕೊಲ್ಲಲು ಯತ್ನಿಸಿದಾಗ, ಮಗು ದೇವಿ ದುರ್ಗೆಯ ರೂಪವಾಗಿ ಮಾರ್ಪಟ್ಟು, ಕಂಸನಿಗೆ ಎಚ್ಚರಿಕೆ ನೀಡಿತು: "ನಿನ್ನ ಸಾವಿಗೆ ಕಾರಣನಾದವನು ಈಗ ಗೋಕುಲದಲ್ಲಿದ್ದಾನೆ."ಕೃಷ್ಣ ಗೋಕುಲದಲ್ಲಿ ಬೆಳೆದು, ತನ್ನ ಲೀಲೆಗಳಿಂದ ಎಲ್ಲರ ಹೃದಯವನ್ನು ಗೆದ್ದ. ಅವನ ತುಂಟಾಟ, ಬೆಣ್ಣೆ ಕದಿಯುವುದು, ಗೋಪಿಕೆಯರ ಜೊತೆಯಾಟ, ಮತ್ತು ರಾಕ್ಷಸರಾದ ಪೂತನಿ, ತೃಣಾವರ್ತ, ಬಕಾಸುರ ಮುಂತಾದವರನ್ನು ಸಂಹರಿಸಿದ ಕಥೆಗಳು ಪ್ರಸಿದ್ಧವಾದವು. ಕೃಷ್ಣನ ಬಾಲಲೀಲೆಗಳು ಗೋಕುಲದ ಜನರಿಗೆ ಆನಂದ ಮತ್ತು ಅಲ್ಲಿನ ಜನರ ರಕ್ಷಣೆಯನ್ನು ಕಾಪಾಡುತ್ತಿದ್ದನು.

 

ಕಂಸನ ಸಂಹಾರ: ಕೃಷ್ಣ ಬೆಳೆದಂತೆ, ಕಂಸ ತನ್ನ ಸಾವಿಗೆ ಕಾರಣನಾದವನು ಕೃಷ್ಣನೆಂದು ತಿಳಿದ. ಅವನು ಕೃಷ್ಣನನ್ನು ಕೊಲ್ಲಲು ಹಲವು ಯತ್ನಗಳನ್ನು ಮಾಡಿದ. ಆದರೆ, ಕೃಷ್ಣ ತನ್ನ ದೈವಿಕ ಶಕ್ತಿಯಿಂದ ಎಲ್ಲಾ ರಾಕ್ಷಸರನ್ನು ಸಂಹರಿಸಿದ. ಕೊನೆಗೆ, ಕಂಸ ಕೃಷ್ಣನನ್ನು ಮಥುರೆಗೆ ಕರೆಸಿ ಕುಸ್ತಿಪಂದ್ಯದಲ್ಲಿ ಕೊಲ್ಲಬೇಕೆಂದು ಸಿದ್ದ ಮಾಡಿಕೊಳ್ಳುತ್ತಾನೆ. ಆದರೆ ಕೃಷ್ಣ, ತನ್ನ ಸಹೋದರ ಬಲರಾಮನ ಜೊತೆಗೆ ಕಂಸನನ್ನು ಮತ್ತು ಅವನ ಸೈನ್ಯವನ್ನು ಸಂಹರಿಸಿ, ಮಥುರೆಯನ್ನು ಕಂಸನ ಕ್ರೂರ ಆಡಳಿತದಿಂದ ಮುಕ್ತಗೊಳಿಸಿದ.

YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal

 

ಕೃಷ್ಣ ಜನ್ಮಾಷ್ಟಮಿಯ ಆಚರಣೆ: ದಿನವನ್ನು ಶ್ರೀ ಕೃಷ್ಣ ಜನ್ಮಾಷ್ಟಮಿಯಾಗಿ ಆಚರಿಸಲಾಗುತ್ತದೆ. ಭಕ್ತರು ಉಪವಾಸವಿರುತ್ತಾರೆ, ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸುತ್ತಾರೆ, ಮತ್ತು ಕೃಷ್ಣನ ಲೀಲೆಗಳನ್ನು ಸ್ಮರಿಸುತ್ತಾರೆ. "ದಹಿ ಹಂಡ" (ಕುಂಬಳಕಾಯಿಯನ್ನು ಒಡೆಯುವ ಆಚರಣೆ) ಮತ್ತು ಭಕ್ತಿಗೀತೆಗಳ ಗಾಯನವು ಉತ್ಸವದ ವಿಶೇಷತೆಯಾಗಿದೆ. ಕೃಷ್ಣನ ಜನ್ಮದಿನವು ಧರ್ಮ, ಭಕ್ತಿ, ಮತ್ತು ಸತ್ಯದ ಗೆಲುವನ್ನು ಸಂಕೇತಿಸುತ್ತದೆ.