Skip to main content
ವಿಡಿಯೋ
1/2
globalnews

ಭಾರತದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ : ಹೂಡಿಕೆ ಏರು ಮುಖವಾಗುವ  ಸಾಧ್ಯತೆ! ಇಂದು ಎಷ್ಟು ಇಳಿಕೆ ?

By Pavitra Ganapathi Baradavalli
ಭಾರತದಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ : ಹೂಡಿಕೆ ಏರು ಮುಖವಾಗುವ  ಸಾಧ್ಯತೆ! ಇಂದು ಎಷ್ಟು ಇಳಿಕೆ ?

ಭಾರತದಲ್ಲಿ ಚಿನ್ನದ (GOLD RATE) ಬೆಲೆಯಲ್ಲಿ ಅಲ್ಪ ಕುಸಿತ ಕಂಡಿದ್ದು, ಅಂತರಾಷ್ಟ್ರೀಯ (INTERNATIONAL LEVEL) ಮಟ್ಟದಲ್ಲಿ ಉಂಟಾಗುತ್ತಿರುವ ಅಸ್ಥಿರತೆಗಳ (DIFFERENCES) ಕಾರಣದಿಂದಾಗಿ ಈ ಬದಲಾವಣೆ (DEVELOPMENT) ಚಿನ್ನದ ಬೆಲೆಯನ್ನು ಬದಲುಗೊಳಿಸುತ್ತಿರುವುದು ಕಾರಣವಾಗಿದೆ.

ಭಾರತದಲ್ಲಿ ಚಿನ್ನದ (GOLD RATE) ಬೆಲೆಯಲ್ಲಿ ಅಲ್ಪ ಕುಸಿತ ಕಂಡಿದ್ದು, ಅಂತರಾಷ್ಟ್ರೀಯ (INTERNATIONAL LEVEL) ಮಟ್ಟದಲ್ಲಿ ಉಂಟಾಗುತ್ತಿರುವ ಅಸ್ಥಿರತೆಗಳ (DIFFERENCES) ಕಾರಣದಿಂದಾಗಿ ಈ ಬದಲಾವಣೆ (DEVELOPMENT) ಚಿನ್ನದ ಬೆಲೆಯನ್ನು ಬದಲುಗೊಳಿಸುತ್ತಿರುವುದು ಕಾರಣವಾಗಿದೆ. ಈ ಬದಲಾವಣೆ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಮೂಡಿಸಲಿದೆ. ಇದು ಚಿನ್ನವನ್ನು ಕೊಳ್ಳುವವರಿಗೂ ಸ್ವಲ್ಪ ಉತ್ಸಾಹ ತರಲಿದೆ. ಹಾಗಾಗಿ ಗ್ರಾಹಕರ ಸ್ವಲ್ಪ ನಿರಾಳತೆಯಿಂದ ಚಿನ್ನ ಕೊಳ್ಳಬಹುದಾಗಿದೆ.


24 ಕ್ಯಾರಟ್ ಚಿನ್ನದ ದರ:

ಇಂದು 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ₹ 10,139 ಇದೆ. ನಿನ್ನೆ ಇದೇ ದರ ₹10,135 ಇದ್ದದ್ದು, ಇಂದಿಗೆ ₹5ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ ₹1,01,350ಮತ್ತು 100 ಗ್ರಾಂಗೆ ₹10,13500ದರ ನಿಗದಿಯಾಗಿದ್ದು, ಕ್ರಮವಾಗಿ ₹50 ಮತ್ತು ₹500 ರೂಪಾಯಿ   ಇಳಿಕೆ  ಕಂಡುಬಂದಿದೆ. ಇದು ಶುದ್ಧ ಚಿನ್ನದ ಹೂಡಿಕೆ ಮಾಡಲಿಚ್ಚಿಸುವವರಿಗೆ ಸ್ಪಲ್ಪ ಚೇತರಿಕೆ  ತಂದಿದೆ.


22 ಕ್ಯಾರಟ್ ಚಿನ್ನದ ದರ:

22 ಕ್ಯಾರಟ್ ಚಿನ್ನವು ದಿನನಿತ್ಯದ ಬಳಕೆಯ ಚಿನ್ನವಾಗಿ ಪರಿಗಣಿಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹9,290 ರೂಪಾಯಿ ಆಗಿದ್ದು, ನಿನ್ನೆಗಿಂತ ₹5 ರೂಪಾಯಿ ಇಳಿಕೆ ಕಂಡಿದೆ. 10 ಗ್ರಾಂ ದರ ₹92,900 ಮತ್ತು 100 ಗ್ರಾಂ ದರ ₹9,29,000ಆಗಿದ್ದು, ಕ್ರಮವಾಗಿ ₹50 ರೂಪಾಯಿ ಮತ್ತು ₹500ರೂಪಾಯಿ ಇಳಿಕೆ ಕಂಡುಬಂದಿದೆ.

ಇದನ್ನೂ ಓದಿ: ಇಬ್ಬರು ವಿದ್ಯಾರ್ಥಿನಿಯರಿಗೆ ಕಚ್ಚಿದ ಬೀದಿ ನಾಯಿ: ವಿದ್ಯಾರ್ಥಿನಿಯರ ಸ್ಥಿತಿ ಗಂಭೀರ

18 ಕ್ಯಾರಟ್ ಚಿನ್ನದ ದರ:

18 ಕ್ಯಾರಟ್ ಚಿನ್ನವನ್ನು ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇಂದು ಇದರ 1 ಗ್ರಾಂ ದರ ₹7,601 ಆಗಿದ್ದು ₹4  ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ ₹76,010ರೂಪಾಯಿ ಆಗಿದೆ  ಹಾಗೂ 100 ಗ್ರಾಂಗೆ ₹7,60,100 ದರ ಏರಿಕೆಯು ಕ್ರಮವಾಗಿ ₹40 ಮತ್ತು ₹400 ರೂಪಾಯಿ ಇಳಿಕೆ ಆಗಿದೆ.

NOBERO Men's Cotton Solid Regular Fit Polo Shirt

ಬೆಳ್ಳಿ ದರ: ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ದರ ಸ್ಥಿರತೆ   ಕಂಡಿದೆ

ಇಂದಿನ ಬೆಳ್ಳಿ ಮೌಲ್ಯವು ನಿನ್ನೆಗೂ ಹೋಲಿಸಿದರೆ ಬೆಳ್ಳಿ ಬೆಲೆಯಲ್ಲಿ ಕುಸಿತ ಕಂಡಿದೆ. ನಿನ್ನೆಗೆ ಇಂದಿಗೆ ನಿನ್ನೆಗೆ ಹೋಲಿಸಿದರೆ  1 ಗ್ರಾಂ ಬೆಳ್ಳಿಯಲ್ಲಿ ₹115 ರೂಪಾಯಿ ಇದ್ದದ್ದು ಇಂದಿಗೆ   ಸ್ಥಿರತೆ ಕಂಡಿದೆ. ಇಂದಿಗೆ 10 ಗ್ರಾಂ ಬೆಳ್ಳಿಯ ಬೆಲೆ ₹1,150 ರೂಪಾಯಿ ಆಗಿದೆ. ಇಂದು ಬೆಳ್ಳಿಯ ಬೆಲೆ1 ಗ್ರಾಂ ಬೆಳ್ಳಿ ₹115 , 10 ಗ್ರಾಂ ₹1,150, 100 ಗ್ರಾಂ ₹11,500 ಹಾಗೂ 1 ಕೆ.ಜಿ ಬೆಳ್ಳಿ ₹1,15,000 ಆಗಿದೆ.

ಆರ್ಥಿಕ ಹಿನ್ನಲೆ ಮತ್ತು ಮಾರುಕಟ್ಟೆಯ ಸ್ಥಿತಿ:

ಅಂತರರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಬಲದಿಂದ ಚಿನ್ನದ ಬೆಲೆಗೆ ಒತ್ತಡ ಉಂಟಾಗಿದ್ದು, ಜಾಗತಿಕ ರಾಜಕೀಯ ಅಸ್ಥಿರತೆಗಳು ಹೂಡಿಕೆದಾರರನ್ನು ಚಿನ್ನದಿಂದ ದೂರ ಇರಿಸುತ್ತಿವೆ. ಇತ್ತೀಚೆಗೆ ಅಮೆರಿಕ ಮತ್ತು ಇರಾನ್ ನಡುವೆ ಉದ್ಭವಿಸಿರುವ ಉದ್ವಿಗ್ನತೆ ಕೂಡ ಇಳಿಕೆಗೆ  ಕಾರಣವಾಗಿರುವ ಸಾಧ್ಯತೆ ಇದೆ.

ಹೂಡಿಕೆ ಸಮಯವೇಕೆ?

ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿರುವುದರಿಂದ ಖರೀದಿಗೆ ಒಳ್ಳೆಯ ಅವಕಾಶ. ಆದರೆ, ಜಾಗತಿಕ ಮಾರುಕಟ್ಟೆ ಬೆಳವಣಿಗೆಗಳನ್ನು ಗಮನಿಸಿ ಸಮಚಿತ್ತವಾಗಿ ಹೂಡಿಕೆ ಮಾಡಿ.