Skip to main content
ವಿಡಿಯೋ
general

ಹಳದಿ ಮೆಟ್ರೋ ಲೈನ್‌ನಲ್ಲಿ ತಲೆಬಿಸಿ ತಂದ ದಂಡ..20 ನಿಮಿಷ ಕಾದಿದ್ದಕ್ಕೂ ಫೈನ್! ಜೇಬಿಗೆ ಎಷ್ಟು ಬಿತ್ತು ಕತ್ತರಿ?

By Vinutha U
ಹಳದಿ ಮೆಟ್ರೋ ಲೈನ್‌ನಲ್ಲಿ ತಲೆಬಿಸಿ ತಂದ ದಂಡ..20 ನಿಮಿಷ ಕಾದಿದ್ದಕ್ಕೂ ಫೈನ್! ಜೇಬಿಗೆ ಎಷ್ಟು ಬಿತ್ತು ಕತ್ತರಿ?

ಬೆಂಗಳೂರು ಹಳದಿ ಲೈನ್ ಮೆಟ್ರೋನಲ್ಲಿ 20 ನಿಮಿಷಕ್ಕಿಂತ ಹೆಚ್ಚು ನಿಲ್ದಾಣದಲ್ಲಿ ಕಾಯಿದ ಪ್ರಯಾಣಿಕರಿಗೆ 50 ರೂ. ದಂಡ ವಿಧಿಸಲಾಗಿದೆ. ಹೊಸ ನಿಯಮ ಪ್ರಯಾಣಿಕರಿಗೆ ಗೊಂದಲ ಉಂಟುಮಾಡುತ್ತಿದೆ.

ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅದ್ದೂರಿಯಾಗಿ ಹಳದಿ ಲೈನ್ ಮೆಟ್ರೋಗೆ ಚಾಲನೆ ನೀಡಿದರು. ಮೊದಲ ದಿನದಿಂದಲೇ ರೈಲು ಪ್ರಯಾಣಿಕರಿಂದ ತುಂಬಿ ತುಳುಕಿತ್ತು. ಇದೀಗ ಹಳದಿ ಲೈನ್ ಮೆಟ್ರೋ ಪ್ರಯಾಣಿಕರ ಸಂಖ್ಯೆ 10 ಲಕ್ಷವನ್ನು ದಾಟಿದೆ. ಆದರೆ, ಹೊಸ ಲೈನ್‌ಗಾಗಿ ಬರುವುದಕ್ಕೆ ಕೆಲವು ನಿಯಮಗಳು ಪ್ರಯಾಣಿಕರಿಗೆ ಅಸೌಕರ್ಯವನ್ನೂ ಉಂಟುಮಾಡಿವೆ. ಮೆಟ್ರೋಯಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಸಮಯ ಒಂದೇ ನಿಲ್ದಾಣದಲ್ಲಿ ಕಾಯಲು ಅವಕಾಶವಿಲ್ಲ. ಈ ನಿಯಮ ಉಲ್ಲಂಘಿಸಿದರೆ 50 ರೂ. ದಂಡ ವಿಧಿಸಲಾಗುತ್ತದೆ.

ಇತ್ತೀಚೆಗೆ ಒಂದು ಘಟನೆ ಇದಕ್ಕೆ ಉದಾಹರಣೆ. ಸಿಲ್ಕ್ ಬೋರ್ಡ್‍ನಿಂದ ಟು ಆರ್.ವಿ. ರಸ್ತೆಗೆ ಹೋಗಲು ಬಂದ ಪ್ರಯಾಣಿಕ, ಟಿಕೆಟ್ ಪಡೆದು ನಿಲ್ದಾಣದಲ್ಲಿ ಕಾಯುತ್ತಿದ್ದವರು. ಆದರೆ ರೈಲಿನೊಳಗೆ ಜನರು ತುಂಬಿ, ಅವರು ಹತ್ತಲು ಸಾಧ್ಯವಾಗಲಿಲ್ಲ. ಮುಂದಿನ ರೈಲಿಗಾಗಿ 25 ನಿಮಿಷ ಕಾಯಲು ಆಗದೆ ಹೊರಗೆ ಬಂದಾಗ, ಬಿಎಂಆರ್‌ಎಲ್ ಸಿಬ್ಬಂದಿ 50 ರೂ. ದಂಡ ವಿಧಿಸಿದ್ದರು.

YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal

ಹಳದಿ ಲೈನ್ ಮೆಟ್ರೋ ಮೊದಲ ದಿನದಷ್ಟೇ ಹೊಸ ನಿಯಮ ಅನ್ವಯವಾಗಿದೆ. ಇತರ ಲೈನ್ಗಳಲ್ಲಿ ಪೀಕ್ ಅವರ್‌ನಲ್ಲಿ ಮೆಟ್ರೋಗಳು ಮೂರು ನಿಮಿಷಕ್ಕೊಮ್ಮೆ ಅಥವಾ 10 ನಿಮಿಷಕ್ಕೊಮ್ಮೆ ಸಂಚಾರ ಮಾಡುತ್ತವೆ. ಅಂತಹ ನಿಲ್ದಾಣಗಳಲ್ಲಿ ಹೆಚ್ಚು ಸಮಯ ಕಾಯುವ ಪ್ರಯಾಣಿಕರಿಗೆ ದಂಡ ನೀಡಲು ಅರ್ಥವಿರಬಹುದು. ಆದರೆ ಹಳದಿ ಲೈನ್‌ನಲ್ಲಿ ಸದ್ಯ ಕೇವಲ ಮೂರು ರೈಲು ಸಂಚಾರ ಮಾಡುತ್ತಿದೆ. ಒಂದು ರೈಲು ಹೋಗಿ ಮತ್ತೊಂದು ಬರುವವರೆಗೂ 25 ನಿಮಿಷ ತೆಗೆದುಕೊಳ್ಳುತ್ತದೆ. ಇದು ಪ್ರಯಾಣಿಕರಿಗೆ ತೊಂದರೆಯ ಕಾರಣವಾಗಿದೆ. ಹೀಗಾಗಿ ಹೊಸ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗೊಂದಲ ಮತ್ತು ಕಷ್ಟ ಉಂಟಾಗುತ್ತಿದೆ.