ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಮುರಳಿ ಮೋಹನ್ ಇನ್ನಿಲ್ಲ. ಹಲವಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಆಗಸ್ಟ್ 13, 2025 ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಕೊನೆಯುಸಿರು ತಗೊಂಡರು.
ಮುರಳಿ ಮೋಹನ್ ತಮ್ಮ ನಿರ್ದೇಶನ ಶೈಲಿಗೆ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಗುರುತು ಬಿಟ್ಟಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ‘ಸಂತ’, ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆ ‘ಮಲ್ಲಿಕಾರ್ಜುನ’, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ನಾಗರಹಾವು’ ಸೇರಿದಂತೆ ಹಲವಾರು ಯಶಸ್ವಿ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು.
ನಾಳೆ 'ಕೂಲಿ'ಗಾಗಿ ಅಭಿಮಾನಿಗಳ ಕಾತುರ..ಅಬ್ಬಾ ಈ ಫಿಲಂಗಾಗಿ ರಜನಿಕಾಂತ್ ತಗೊಂಡ ಸಂಭಾವನೆ ಎಷ್ಟು ಗೊತ್ತಾ?
ಅವರು ಬೆಂಗಳೂರು ಜೆಸಿ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಿದ್ದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮುರಳಿ ಮೋಹನ್, ಈ ಹಿಂದೆ ಶಸ್ತ್ರಚಿಕಿತ್ಸೆಗೆ 30–35 ಲಕ್ಷ ರೂ. ಅನುದಾನ ಬೇಕು ಎಂದು ತಿಳಿಸಿದ್ದಾರೆ. ಐದು ವರ್ಷಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರೂ, ಚಿಕಿತ್ಸೆ ಫಲಕಾರಿ ಆಗಲಿಲ್ಲ.
ಅವರ ನಿಧನದಿಂದ ಕನ್ನಡ ಚಿತ್ರರಂಗದಲ್ಲಿ ಶೋಕಾವಸ್ಥೆ ಮೂಡಿದೆ. ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಸಿನಿಮಾ ಕ್ಷೇತ್ರದ ಹಿರಿಯರು ಅವರ ಅಗಲವನ್ನು ಕಂಬನಿ ಮಿಡಿಯುತ್ತಿದ್ದಾರೆ. ನಿರ್ದೇಶಕ ಮುರಳಿ ಮೋಹನ್ ಅವರಿಗೆ 57 ವರ್ಷ ವಯಸ್ಸಾಗಿತ್ತು.