Skip to main content
ವಿಡಿಯೋ
crime

ದಾಸ ದರ್ಶನ್ ಜಾಮೀನು ರದ್ದು - ಮುಂದೇನು ?

By Gireesh Vasishta
ದಾಸ ದರ್ಶನ್ ಜಾಮೀನು ರದ್ದು - ಮುಂದೇನು ?

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ದರ್ಶನ್ , ಗೆಳತಿ ಪವಿತ್ರ ಗೌಡ ಸೇರಿ 7 ಜನರು ಈಗ ಜೈಲಿನ‌ ಅತಿಥಿಗಳಾಗಬೇಕಾಗಿದೆ.

ನವದೆಹಲಿ - ಚಾಲೆಂಜಿಂಗ್ ಸ್ಟಾರ್ ದರ್ಶನ್ ,ಗೆಳತಿ ಪವಿತ್ರಾ ಗೌಡ ಸೇರಿದಂತೆ 7 ಮಂದಿ ಆರೋಪಿಗಳ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಬೆಳವಣಿಗೆ ಸಾಕಷ್ಟು ಕಾನೂನು ಕ್ರಮಗಳಿಗೆ ಸದ್ಯ ನಾಂದಿ ಹಾಡಿದ್ದು, ತೀರ್ಪು ಲ್ಯಾಂಡ್ ಮಾರ್ಕ್ ತೀರ್ಪು ಎಂದು ಉಲ್ಲೇಖ ಆಗಿದೆ.YOHO Bubbles Men Ortho slippers | Soft comfortable and stylish flip flop slippers for Men in exciting colors |Lightweight | Anti Skid | Daily Use Chappal

 

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ದರ್ಶನ್ , ಗೆಳತಿ ಪವಿತ್ರ ಗೌಡ ಸೇರಿ 7 ಜನರು ಈಗ ಜೈಲಿನಅತಿಥಿಗಳಾಗಬೇಕಾಗಿದೆ.

 

ಸುಪ್ರೀಂ ಕೋರ್ಟ್ ತೀರ್ಮಾನದ ಬಳಿಕ ಆಗುವ ಬೆಳವಣಿಗಳಿದು ?!

 

* ಸುಪ್ರೀಂ ಕೋರ್ಟ್ ಆದೇಶದ ಪ್ರತಿಯನ್ನ ಪಬ್ಲಿಕ್ ಪ್ರಾಸಿಕ್ಯೂಟರ್ ನೇರವಾಗಿ ಹೈಕೋರ್ಟ್ ಗೆ ರವಾನಿಸುತ್ತಾರೆ.

* ನಿಯಮ ಪ್ರಕಾರ ಮೇಲ್ದರ್ಜೆ ಕೋರ್ಟ್ ಜಾಮೀನು ರದ್ದು ಆದೇಶ ಕೊಟ್ಟರೆ , ಅದರ ಪ್ರತಿಯನ್ನ ಜಾಮೀನು ನೀಡಿದ್ದ ಕೋರ್ಟ್ ಗೆ ರವಾನಿಸಬೇಕಾಗುತ್ತದೆ.

* ತೀರ್ಪು ಪ್ರಕಟವಾದ ಬೆನ್ನಲ್ಲೇ ಆರೋಪಿಗಳ ನಿವಾಸದ ವ್ಯಾಪ್ತಿಗೆ ಬರುವ ಪೊಲೀಸ್ ಇಲಾಖೆಗೆ ಆದೇಶ ಪಾಲನೆಗೆ ಸೂಚಿಸಬೇಕು.

* ಸ್ಥಳೀಯ ಪೊಲೀಸ್ ಠಾಣೆಗೆ ಸಹಾಯಕ ಪೊಲೀಸ್ ಆಯುಕ್ತರಿಂದ ವಶಕ್ಕೆ ಪಡೆಯಲು ಸೂಚಿಸುತ್ತಾರೆ.

* 7 ಜನ ಆರೋಪಿಗಳ ಬಂಧನಕ್ಕೆ 7 ತಂಡ ರಚನೆ ಆಗುತ್ತದೆ.

* ಸದ್ಯ ಗೆಳತಿ ಪವಿತ್ರಾ ಗೌಡ ರಾಜರಾಜೇಶ್ವರಿ ನಗರದಲ್ಲಿದು ,ಕೂಡಲೇ ವಶಕ್ಕೆ ಪಡೆಯಲು ಅವಕಾಶ ಇದೆ.

* ನಟ ದರ್ಶನ್ ಚಾಮರಾಜನಗರದಲ್ಲಿದು , ಅವರು ಸಹ ಜಾಮೀನು ನೀಡಿರುವ ಕೋರ್ಟ್ ಗೆ ಶರಣಾಗಬೇಕು.

* ಜಾಮೀನು ರದ್ದಾದರೆ ಕೂಡಲೇ ಕೋರ್ಟ್ ಗೆ ಶರಣಾಗಬೇಕು.

* ಕ್ರಿಮಿನಲ್ ಪ್ರಕರಣ ಎದುರಿಸಲು ಸಾಮಾನ್ಯವಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಆರೋಪಿಗಳು ಹೋಗಬೇಕು.

* ಹಂತದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಲ್ಲ ಆರೋಪಿಗಳನ್ನಒಂದೇ ಜೈಲಿನಲ್ಲಿ ಇಡಲು ಮನವಿ ಮಾಡಬಹುದು.

* ಬೆಂಗಳೂರು ಜೈಲಿನಲ್ಲಿ ರಾಜಾತಿಥ್ಯ ದೊರಕಿದಕ್ಕೆ ಎಲ್ಲರನ್ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿತು.

* ಸದ್ಯ ಜಾಮೀನು ರದ್ದಾಗಿರುವ ಹಿನ್ನೆಲೆಯಲ್ಲಿ ಶೀಘ್ರವೇ ವಿಚಾರಣೆ ಆರಂಭವಾಗುತ್ತದೆ.

* ವಿಚಾರಣೆ ವೇಳೆ ಖುದ್ದು ಆರೋಪಿ ಹಾಜರಿರಬೇಕು. ಜಾಮೀನು ವೇಳೆ ವಿಡಿಯೋ ಕಾನ್ಪೆರೆನ್ಸ್ ಆಗಿದ್ದರೆ ಪರವಾಗಿಲ್ಲ.

* ಈಗ ಕನಿಷ್ಠ ಮುಂದಿನ 2 ವರ್ಷವಾದರೂ ವಿಚಾರಣೆ ಸಮಯ ಇರುತ್ತದೆ.

* ಹಂತದಲ್ಲಿ ಆರೋಪಿಗಳನ್ನ ಬೇರೆ ಬೇರೆ ಜೈಲಿನಿಂದ ಕರೆತರಲು ಹಣ - ಸಮಯ ಹೆಚ್ಚಾಗುತ್ತದೆ.

* ಎಲ್ಲ ಕಾರಣ ನೀಡಿ ಒಂದೇ ಜೈಲಿಗೆ ಕೇಳಬಹುದು.

* ಆದರೆ ಸದ್ಯ ಸುಪ್ರೀ ಕೋರ್ಟ್ ರಾಜಾತಿಥ್ಯ ರದ್ದು ಹಾಗೂ ನೀಡಿದ ಜೈಲಾಧಿಕಾರಿಗಳ ವಿರುದ್ಧವೂ ಆದೇಶ ಹೊರಡಿಸಿದೆ. ಹೀಗಾಗಿ ಕೊಂಚ ಚಿತ್ರಣ ಬದಲಾಗಬಹುದು.also read: ಈ ದಿನ ಸಚಿನ್‌ ತೆಂಡೂಲ್ಕರ್‌ನ ಮೊದಲ ಶತಕ: ಓಲ್ಡ್ ಟ್ರಾಫರ್ಡ್‌ನಲ್ಲಿ ದಂತಕಥೆಯಾರಂಭ https://kannada.insightrush.news/article/689d96b796b405963baf26f3

 

ಇದೇ ರೀತಿ ಕೊಲೆ ಆರೋಪದಲ್ಲಿ ವಿನಯ್ ಕುಲಕರ್ಣಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನಸುಪ್ರೀಂ ಕೋರ್ಟ್ ರದ್ದು ಮಾಡಿ ಆದೇಶಿಸಿತು. ಈವರೆಗೂ ಆರೋಪಿ ಜೈಲಿನಲ್ಲೇ ವಿಚಾರಣೆ ಎದುರಿಸುವಂತೆ ಆಗಿದೆ. ದರ್ಶನ್ ಅಂಡ್ ಗ್ಯಾಂಗ್ ಕೇಸ್‌ಗೂ ಇದಕ್ಕೂ ಆದೇಶ ನೀಡುವಾಗಲೂ ಸಮ್ಯತೆ ಇರಬಹುದಾಗಿದೆ.