ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 7 ಜನ ಆರೋಪಿಗಳ ಜಾಮೀನು ಸುಪ್ರೀಂಕೋರ್ಟ್ ರದ್ದಾಗಿಸಿದೆ. ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನನ್ನು ಖಾಕಿ ಪಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಾದ-ವಿವಾದದ ಬಳಿಕ, ಸುಪ್ರೀಂಕೋರ್ಟ್ 7 ಜನರ ಜಾಮೀನು ರದ್ದು ಮಾಡುವಂತೆ ಆದೇಶ ಹೊರಡಿಸಿದೆ.
ದರ್ಶನ್ ಪರ ವಕೀಲರ ತಂಡ ಹಲವು ಬಾರಿ ವಾದ ಮಾಡಿದರೂ, ಸುಪ್ರೀಂ ಕೋರ್ಟ್ ಆರಂಭದಿಂದಲೇ ದರ್ಶನ್ ವಿರುದ್ಧ ತೀರ್ಪು ನೀಡಲು ತಯಾರಾಗಿತ್ತು. ಇದರಿಂದಾಗಿ ದರ್ಶನ್ ಮತ್ತು ಅವರ ಸಂಗಡಿಯರಿಗೆ ಕಠಿಣ ಪರಿಸ್ಥಿತಿ ಎದುರಾಗಿದೆ. ಅಷ್ಟೇ ಅಲ್ಲ ಇದೀಗ ದರ್ಶನ್ ಜಾಮೀನು ರದ್ದಾಗುವಂತೆ ಹೋರಾಡಿದ ಲಾಯರ್ಸ್ ಫೋಟೋ ಕೂಡ ಸಖತ್ ವೈರಲ್ ಆಗಿದೆ.
ಜಾಮೀನು ರದ್ದಾದ ಹಿನ್ನೆಲೆಯಲ್ಲಿ, ದರ್ಶನ್ ಮತ್ತು ಪವಿತ್ರಾ ಗೌಡ ಅವರು ನ್ಯಾಯಾಲಯಕ್ಕೆ ಸರೆಂಡರ್ ಆಗಬೇಕಾಗಿದೆ. ಕನಿಷ್ಠ 6 ತಿಂಗಳ ಜೈಲು ಶಿಕ್ಷೆ ನಿರೀಕ್ಷಿಸಲಾಗಿದೆ. ಈ ಸಮಯದಲ್ಲಿ ಅವರು ಬಂಧನಗೊಂಡು ಜೈಲಿನಲ್ಲಿ ಕಾಲ ಕಳೆಯಬೇಕಾಗುತ್ತದೆ.
Sonata Bandhan Quartz Analog with Date Blue Dial Silver Metal Strap Couple Watch - NT71338164SM01
ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸಿ ತ್ರಿಸದಸ್ಯ ಪೀಠಕ್ಕೆ ಅರ್ಜಿ ಹಾಕುವ ಅವಕಾಶ ಇದ್ದರೂ, ಅದನ್ನು ಅಂಗೀಕರಿಸುವ ಸಾಧ್ಯತೆ ಕಡಿಮೆ ಎಂದು ವರದಿ ಬಂದಿದೆ. ಆದ್ದರಿಂದ, ದರ್ಶನ್ ಮತ್ತು ಅವರ ಬಂಧುಗಳಿಗೆ ಈಗ ಅಂದಾಜು ಆರು ತಿಂಗಳ ಜೈಲು ಶಿಕ್ಷೆ ನಿರೀಕ್ಷಿಸಲಾಗಿದೆ. ಆರು ತಿಂಗಳ ನಂತರ ಸನ್ನಿವೇಶ ಬದಲಾದಲ್ಲಿ ಜಾಮೀನುಗಾಗಿ ಹೊಸ ಅರ್ಜಿ ಸಲ್ಲಿಸಬಹುದು.
'ಕೂಲಿ'ಯಲ್ಲಿ ಎಲ್ಲಾ ಖಾಲಿ ಅಂದ್ರಾ ಸಿನಿ ಪ್ರೇಕ್ಷಕರು? ರಜನಿಕಾಂತ್ ಫೇಲ್ or ಪಾಸ್?
ಈ ಪ್ರಕರಣ ಸುಮಾರು 14 ತಿಂಗಳ ಹಿಂದೆ ನಡೆದಿದ್ದರಿಂದ, ಸುಪ್ರೀಂಕೋರ್ಟ್ ಟ್ರಯಲ್ ಕೋರ್ಟ್‌ನಲ್ಲಿ ಸಾಕ್ಷ್ಯ ಪರಿಶೀಲನೆ ಶೀಘ್ರವಾಗಿ ನಡೆಯಬೇಕು ಎಂದು ಸೂಚಿಸಿದೆ. ಕೊಲೆ ಪ್ರಕರಣದ ಗಂಭೀರತೆಯನ್ನು ಗಮನಿಸಿ, ನ್ಯಾಯಾಲಯ ತ್ವರಿತ ಕಾರ್ಯಾಚರಣೆಯನ್ನು ಸೂಚಿಸಿದ್ದು, ದರ್ಶನ್ ಮತ್ತು ಅವರ ಸಂಗಡಿಯರಿಗೆ ಕಠಿಣ ಸಮಯ ಎದುರಾಗಲಿದೆ.
ಈ ಪ್ರಕರಣದಲ್ಲಿ ದರ್ಶನ್ ಜೊತೆಗೆ ಪವಿತ್ರಾ ಗೌಡ, ಜಗ್ಗ, ಅನು, ಪ್ರದೂಶ್, ನಾಗರಾಜು ಮತ್ತು ಲಕ್ಷ್ಮಣ್ ಸೇರಿದಂತೆ 7 ಜನರ ಜಾಮೀನು ರದ್ದಾಗಿದೆ. ನಟ ದರ್ಶನ್ ಈಗ ‘ಡೆವಿಲ್’ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದರೂ, ಈ ತೀರ್ಪು ಅವರ ಜೀವನದಲ್ಲಿ ದೊಡ್ಡ ಬಿಗ್ ಶಾಕ್ ಆಗಿದೆ.