Skip to main content
ವಿಡಿಯೋ
cinema

ಪವಿತ್ರಾ ಗೌಡ ಮನೆಗೆ ಪೊಲೀಸ್ ಎಂಟ್ರಿ ಕೊಟ್ಟಾಗ ಆಗಿದ್ದೇನು...ವಕೀಲರ ಜೊತೆ ಪವಿತ್ರಾ ಚರ್ಚಿಸಿದ್ದೇನು?

By Ram Chethan
ಪವಿತ್ರಾ ಗೌಡ ಮನೆಗೆ ಪೊಲೀಸ್ ಎಂಟ್ರಿ ಕೊಟ್ಟಾಗ ಆಗಿದ್ದೇನು...ವಕೀಲರ ಜೊತೆ ಪವಿತ್ರಾ ಚರ್ಚಿಸಿದ್ದೇನು?

ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ, ಪೊಲೀಸರು ಪವಿತ್ರಾ ಗೌಡ ಅವರನ್ನು ಬೆಂಗಳೂರಿನ ಮನೆಯಿಂದ ಬಂಧಿಸಿದ್ದಾರೆ. ತೀರ್ಪು ಹೊರಬರುವ ಮುನ್ನ ದೇವರ ಮೊರೆ ಹೋದ ಅವರ ದೃಶ್ಯಗಳು ಮತ್ತು ಬಂಧನ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಮತ್ತೆ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದು, ಅದರ ಪರಿಣಾಮವಾಗಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಆರ್‌ಆರ್ ನಗರ ನಿವಾಸಕ್ಕೆ ತೆರಳಿದ ಪೊಲೀಸರು, ಮನೆಯಲ್ಲಿ ತಂಗಿದ್ದ ಪವಿತ್ರಾ ಗೌಡ ಅವರನ್ನು ಅರೆಸ್ಟ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಹೊರಬರುವ ಮುನ್ನ ಅವರು ದೇವರ ಮೊರೆ ಹೋಗಿ, ಮನೆಯಲ್ಲಿ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿದ್ದರು. ಈ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಸಹ ಪವಿತ್ರಾ ಗೌಡ ಪೋಸ್ಟ್ ಹಂಚಿಕೊಂಡಿದ್ದರು.

ತೀರ್ಪು ಹೊರಬರುವಂತೆ ಪವಿತ್ರಾ ಗೌಡ ತಾಯಿ ಎದುರು ಬಿಕ್ಕಳಿಸಿ ಮನೆಯಲ್ಲಿ ಕುಳಿತಿದ್ದರು. ಮನೆಯ ಬಾಗಿಲು ತೆರೆದ ಕೂಡಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣವು ಸಾರ್ವಜನಿಕರ ಗಮನ ಸೆಳೆಯುತ್ತಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

Sonata Bandhan Quartz Analog with Date Blue Dial Silver Metal Strap Couple Watch - NT71338164SM01

ಚರ್ಚೆ ನಂತರ ಪವಿತ್ರಾ ಗೌಡ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಈ ವೇಳೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ, ಪವಿತ್ರಾ ಗೌಡ ಮತ್ತು ಅವರ ವಕೀಲರು ಮನೆಯಲ್ಲಿ ಅರ್ಧ ಗಂಟೆ ಕಾಲ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಗೋವಿಂದರಾಜನಗರ ಠಾಣೆಯ ಇನ್ಸ್‌ಪೆಕ್ಟರ್ ಸುಬ್ರಮಣಿ ಮತ್ತು ವಕೀಲ ಬಾಲನ್ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

'ಕೂಲಿ'ಯಲ್ಲಿ ಎಲ್ಲಾ ಖಾಲಿ ಅಂದ್ರಾ ಸಿನಿ ಪ್ರೇಕ್ಷಕರು? ರಜನಿಕಾಂತ್ ಫೇಲ್ or ಪಾಸ್?


ವಕೀಲರು, ಪವಿತ್ರಾ ಗೌಡ ಅವರನ್ನು ಬಂಧಿಸಲು ಆಗದಂತೆ ಗಮನವಿಟ್ಟು, ಸೂಪ್ರೀಂಕೋರ್ಟ್ ಆದೇಶದ ಪ್ರತಿ ನೀಡುವಂತೆ ಕೇಳಿಕೊಂಡರು. ಇದರಿಂದ ಅವರು ತಕ್ಷಣ ಕರೆದುಕೊಂಡು ಹೋಗಲಾಗಲಿಲ್ಲ.

ಈ ಘಟನೆ ಪವಿತ್ರಾ ಗೌಡ ಸಂಬಂಧಿತ ಪ್ರಕರಣದ ಮುಂದಿನ ನಡೆಯುಗಳ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿ ಹೆಚ್ಚಿಸಿದೆ. ಪ್ರಸ್ತುತ, ಪೊಲೀಸರು ಮತ್ತು ವಕೀಲರು ವಾದ-ವಿವಾದ ನಡೆಸುತ್ತಿರುವ ಸ್ಥಿತಿ ಎದುರಾಗಿದೆ.