ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಭರ್ಜರಿ ಐತಿಹಾಸಿಕ ಸಿನಿಮಾ ಮೂಡಿ ಬರಲಿದೆ. ‘ಹಲಗಲಿ’ ಎಂಬ ಈ ಮಹಾ ಬಜೆಟ್ ಚಿತ್ರದಲ್ಲಿ ನಟ ಡಾಲಿ ಧನಂಜಯ ಅವರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ಅವರು ನಾಯಕಿಯಾಗಿ ನಟಿಸುತ್ತಿದ್ದು, ಇವರ ಜೋಡಿ ಈಗಲೇ ಸಿನಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಸಿನಿಮಾವನ್ನು ಸುಕೇಶ್ ಡಿ ಕೆ ನಿರ್ದೇಶಿಸುತ್ತಿದ್ದು, ಬಳ್ಳಾರಿಯ ಯುವ ಉದ್ಯಮಿ ಕಲ್ಯಾಣ್ ಚಕ್ರವರ್ತಿ ಧೂಳಿಪಾಳ್ಳ ಅವರು ತಮ್ಮ ದುಹರ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ತೆಲುಗು ಚಿತ್ರ ‘ರಚಯತ’ ಸೇರಿದಂತೆ 20ಕ್ಕೂ ಹೆಚ್ಚು ಕನ್ನಡ ಹಾಗೂ ತೆಲುಗು ಚಿತ್ರಗಳನ್ನು ವಿತರಣೆ ಮಾಡಿದ ಅನುಭವ ಇವರಿಗೆ ಇದೆ.
Peter England Men's Slim Fit Full Sleeve Checkered Casual Shirt | 100% Cotton | Premium Twill Weave
‘ಹಲಗಲಿ’ ಚಿತ್ರವು ಕನ್ನಡ ನಾಡಿನ ಸ್ವಾತಂತ್ರ್ಯ ಪೂರ್ವದ ವೀರರ ಸಾಹಸವನ್ನು ಆಧರಿಸಿದ್ದು, ವಿಶೇಷವಾಗಿ ಹಲಗಲಿ ಗ್ರಾಮದ ಬೇಡರು ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ಗೆರಿಲ್ಲಾ ಯುದ್ಧದ ಕಥೆಯನ್ನು ತೆರೆಗೆ ತರುತ್ತಿದೆ. ಬಿಲ್ಲು, ಬಾಣ, ಮದ್ದು ಮತ್ತು ಗುಂಡಿನ ಯುದ್ಧದ ರೋಚಕ ದೃಶ್ಯಗಳೊಂದಿಗೆ, ಕನ್ನಡ ಇತಿಹಾಸದ ಅಮರ ಪುಟಗಳನ್ನು ಈ ಚಿತ್ರ ಪುನರುತ್ಥಾನ ಮಾಡಲಿದೆ.
'ಕಾಲೇಶ' ಎಂದು ಕೂಗಿದ ರಜನಿಕಾಂತ್ ! ಅಬ್ಬಾ ಕೂಲಿಯಲ್ಲಿ ಹೇಗಿದೆ ಗೊತ್ತಾ ಉಪ್ಪಿ ಎಂಟ್ರಿ?
ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಐದು ಭಾಷೆಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಕನ್ನಡ ಸೇರಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಕೂಡ ಬಿಡುಗಡೆ ಮಾಡಲು ಯೋಜಿಸಲಾಗಿದೆ. ವಿಶೇಷ ಸ್ಥಳಗಳಲ್ಲಿ ನಡೆಯುತ್ತಿರುವ ಶೂಟಿಂಗ್ ಈಗಾಗಲೇ ಸಿನಿ ಪ್ರೇಮಿಗಳಲ್ಲಿ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ.
‘ಹಲಗಲಿ’ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದು, ಡಾಲಿ ಧನಂಜಯ ಅವರ ವೃತ್ತಿ ಜೀವನದಲ್ಲಿ ಮತ್ತೊಂದು ಮೈಲುಗಲ್ಲು ಎನಿಸಲಿದೆ ಎಂಬ ಭರವಸೆ ಅಭಿಮಾನಿಗಳಲ್ಲಿ ಮೂಡಿಸಿದೆ.