Skip to main content
ವಿಡಿಯೋ
crime

ದರ್ಶನ್ ಹಾಗೂ ಸಹ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ; ವಿಚಾರಣಾಧೀನ ಕೈದಿ ಸಂಖ್ಯೆ ಯಾವುದು?

By Gireesh Vasishta
ದರ್ಶನ್ ಹಾಗೂ ಸಹ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ; ವಿಚಾರಣಾಧೀನ ಕೈದಿ ಸಂಖ್ಯೆ ಯಾವುದು?

ದರ್ಶನ್ ಮತ್ತು ಪವಿತ್ರಾ ಜೈಲಿನಲ್ಲಿ; ಐವರು ಆರೋಪಿಗಳಿಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ. ಶನಿವಾರ ಕುಟುಂಬ ಭೇಟಿ ಸಾಧ್ಯತೆ ಇದೆ.

ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಸೇರಿ ಐವರು ಆರೋಪಿಗಳಿಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ. ಪವಿತ್ರ ಗೌಡಕ್ಕೆ 7313, ದರ್ಶನ್‌ಗೆ 7314, ನಾಗರಾಜ್ 7315, ಲಕ್ಷ್ಮಣ 7316 ಮತ್ತು ಪ್ರದೋಷ್ 7317 ಸಂಖ್ಯೆ ನೀಡಲಾಗಿದೆ. ಪವಿತ್ರಾ ಗೌಡ ಪ್ರಕರಣದ ಪ್ರಥಮ ಆರೋಪಿ ಆಗಿರುವುದರಿಂದ ಅವರಿಗೆ ಮೊದಲ ಸಂಖ್ಯೆ ನೀಡಲಾಯಿತು. ದರ್ಶನ್ ಈಗ ಹೊಸ ಸಂಖ್ಯೆ ಹೊಂದಿದ್ದಾರೆ. ಅಭಿಮಾನಿಗಳು ಈ ಬಾರಿ ದರ್ಶನ್‌ ಕೈದಿ ಸಂಖ್ಯೆಯನ್ನು ಹಚ್ಚೆ ಹಾಕಿಕೊಳ್ಳುತ್ತಾರಾ ಎಂಬ ಕುತೂಹಲ ಉಂಟಾಗಿದೆ.

 

ಸುಪ್ರೀಂಕೋರ್ಟ್ ಆಗಸ್ಟ್ 14 ರಂದು ದರ್ಶನ್ ಸೇರಿದಂತೆ ಏಳು ಆರೋಪಿಗಳ ಜಾಮೀನು ರದ್ದುಮಾಡಿತ್ತು. ಜಾಮೀನು ರದ್ದಾದ ನಂತರ, ದರ್ಶನ್ ಅವರನ್ನು ಬೆಂಗಳೂರು ಹೊಸಕೆರೆಹಳ್ಳಿಯಿಂದ ಬಂಧಿಸಿ ಕೋರ್ಟ್ಗೆ ಹಾಜರು ಮಾಡಲಾಯಿತು. ನಂತರ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳುಹಿಸಲಾಗಿದ್ದು, ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.Monte Carlo Mens Solid Lace Up Genuine Leather Casual Shoes (201803FW)

 

ಪ್ರಸ್ತುತ ದರ್ಶನ್ ಮತ್ತು ಪವಿತ್ರ ಅವರು ಶನಿವಾರ ತಮ್ಮ ಕುಟುಂಬದವರ ಭೇಟಿ ಪಡೆಯುವ ಸಾಧ್ಯತೆ ಇದೆ. ದರ್ಶನ್ ಹಾಗೂ ಇನ್ನೂ ಮೂವರು ಆರೋಪಿಗಳನ್ನು ಒಂದೇ ಬ್ಯಾರಕ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ನಂತರ ಅವರಿಗೆ ಮುಖ್ಯ ಬ್ಯಾರಕ್‌ಗೆ ವರ್ಗಾವಣೆ ಆಗಬಹುದು.also read; ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಮೇಘಸ್ಫೋಟ: 60 ಜನರ ಬಲಿ: ಪ್ರಧಾನಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ.

 

ಜೈಲಿನಲ್ಲಿರುವ ಪ್ರದೋಷ್ ತಮ್ಮ ತಪ್ಪಿನ ಅರಿವಿನಿಂದ ಕಣ್ಣೀರು ಹಾಕುತ್ತಿರುವ ಪರಿಸ್ಥಿತಿ ಇದೆ. ದರ್ಶನ್ ಕಳೆದ ರಾತ್ರಿ ನಿದ್ರೆ ಮಾಡದೆ ಸಹ ಆರೋಪಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.