Skip to main content
ವಿಡಿಯೋ
politics

ಕರ್ನಾಟಕ ಸರ್ಕಾರದಿಂದ ಈ ನೌಕರರಿಗೆ 5 ಲಕ್ಷದ ವರೆಗೆ ನಗದು ರಹಿತ ಚಿಕಿತ್ಸಾ ಭಾಗ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ: ಇಲ್ಲಿದೆ ಮಾಹಿತಿ

By Gireesh Vasishta
ಕರ್ನಾಟಕ ಸರ್ಕಾರದಿಂದ ಈ ನೌಕರರಿಗೆ 5 ಲಕ್ಷದ ವರೆಗೆ ನಗದು ರಹಿತ ಚಿಕಿತ್ಸಾ ಭಾಗ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ: ಇಲ್ಲಿದೆ ಮಾಹಿತಿ

ಸ್ವಾಭಿಮಾನ, ಸ್ವಾವಲಂಬನೆ, ಮತ್ತು ಘನತೆಯ ಬದುಕು ಸ್ವಾತಂತ್ರ್ಯದ ನೈಜ ಆಶಯವಾಗಿದೆ. ಈ ಆಶಯವನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರವು ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ, ಮತ್ತು ಈ ಯೋಜನೆಯು ಆ ದಿಶೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಕ್ರಮವು ನೌಕರರ ಜೀವನದ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ, ಸರ್ಕಾರದ ಸೇವೆಗಳನ್ನು ಜನರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಸಹಾಯ ಮಾಡಲಿದೆ.

ದೇಶದಲ್ಲೇ ಮೊದಲ ಬಾರಿಗೆ, ಕರ್ನಾಟಕ ರಾಜ್ಯ ಸರ್ಕಾರವು ಎಲ್ಲಾ ಸರ್ಕಾರಿ ಇಲಾಖೆಗಳ ನೌಕರರು, ಗುತ್ತಿಗೆ, ಮತ್ತು ಹೊರಗುತ್ತಿಗೆ ನೌಕರರನ್ನು ಒಳಗೊಂಡಂತೆ ಆರೋಗ್ಯ ಭದ್ರತೆಯನ್ನು ಒದಗಿಸುವ ನವೀನ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯಡಿ, ರೂ.5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ.Fflirtygo Men Graphic Print Cotton T-Shirt & Short Set for Men/Boys


 ಇದರಿಂದ ಸರ್ಕಾರಿ ಸಿಬ್ಬಂದಿಗೆ ಸಮಗ್ರ ಆರೋಗ್ಯ ರಕ್ಷಣೆ ಒದಗಲಿದೆ. ಕ್ರಮವು ಸರ್ಕಾರಿ ನೌಕರರ ಯೋಗಕ್ಷೇಮಕ್ಕೆ ರಾಜ್ಯ ಸರ್ಕಾರದ ಕಾಳಜಿಯನ್ನು ತೋರಿಸುತ್ತದೆ, ಜೊತೆಗೆ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ.

ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರು ಇನ್ನಷ್ಟು ಜನಪರ, ದಕ್ಷತೆಯಿಂದ ಮತ್ತು ಸಮರ್ಪಣೆಯಿಂದ ಕೆಲಸ ಮಾಡುವಂತೆ ಪ್ರೇರೇಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆರೋಗ್ಯ ಭದ್ರತಾ ಯೋಜನೆಯು ನೌಕರರಿಗೆ ಆರ್ಥಿಕ ಒತ್ತಡವಿಲ್ಲದೆ ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ, ಇದರಿಂದ ಅವರ ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಲು ಸಹಾಯವಾಗಲಿದೆ.ಇದನ್ನು ಓದಿ-ರಿಷಭ್ ಶೆಟ್ಟಿ ಅವರಿಂದ ಕೆರಾಡಿಯ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನದ ಆಚರಣೆ: ಅಲ್ಲೆ ಯಾಕೆ.? ಇಲ್ಲಿದೆ ಮಾಹಿತಿ

ಸ್ವಾಭಿಮಾನ, ಸ್ವಾವಲಂಬನೆ, ಮತ್ತು ಘನತೆಯ ಬದುಕು ಸ್ವಾತಂತ್ರ್ಯದ ನೈಜ ಆಶಯವಾಗಿದೆ. ಆಶಯವನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರವು ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ, ಮತ್ತು ಯೋಜನೆಯು ದಿಶೆಯಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಕ್ರಮವು ನೌಕರರ ಜೀವನದ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ, ಸರ್ಕಾರದ ಸೇವೆಗಳನ್ನು ಜನರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಸಹಾಯ ಮಾಡಲಿದೆ.