Skip to main content
ವಿಡಿಯೋ
1/2
crime

ಯಲಹಂಕದಲ್ಲಿ ಟ್ರಾಫಿಕ್ ಪೊಲೀಸರ ಮೇಲೆ ಮಹಿಳೆಯ ದರ್ಪ: ಇಬ್ಬರು ಆರೋಪಿಗಳ ಬಂಧನ

By Pavitra Ganapathi Baradavalli
ಯಲಹಂಕದಲ್ಲಿ ಟ್ರಾಫಿಕ್ ಪೊಲೀಸರ ಮೇಲೆ ಮಹಿಳೆಯ ದರ್ಪ: ಇಬ್ಬರು ಆರೋಪಿಗಳ ಬಂಧನ

ಯಲಹಂಕ ನ್ಯೂ ಟೌನ್‌ನಲ್ಲಿ ಟ್ರಾಫಿಕ್ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಇರಾಲ್ ವ್ಯಾಸ್ ಎಂಬ ಮಹಿಳೆ ಮತ್ತು ಮಹಮ್ಮದ್ ಸರ್ಬಜ್ ಎಂಬ ವ್ಯಕ್ತಿಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಯಲಹಂಕ ನ್ಯೂ ಟೌನ್ನಲ್ಲಿ ಟ್ರಾಫಿಕ್ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣದಲ್ಲಿ ಇರಾಲ್ ವ್ಯಾಸ್ ಎಂಬ ಮಹಿಳೆ ಮತ್ತು ಮಹಮ್ಮದ್ ಸರ್ಬಜ್ ಎಂಬ ವ್ಯಕ್ತಿಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಹಿತಿಯ ಪ್ರಕಾರ, ರಾಜಸ್ಥಾನ ಮೂಲದ ಇರಾಲ್ ವ್ಯಾಸ್ ಮತ್ತು ಕೇರಳ ಮೂಲದ ಮಹಮ್ಮದ್ ಸರ್ಬಜ್ ಇಬ್ಬರೂ ಯಲಹಂಕ ನಿವಾಸಿಗಳು.ಇದನ್ನೂ ಓದಿ: ಫಾಸ್ಟ್ಯಾಗ್ ವಾರ್ಷಿಕ ಪಾಸ್ 2025: ರೂ. 3,000 ರ ಟೋಲ್-ಮುಕ್ತ ಪ್ರಯಾಣದ ಸುಲಭ ಮಾರ್ಗದರ್ಶಿ..!


ಟ್ರಾಫಿಕ್ ಪೊಲೀಸರು ಅಕ್ರಮವಾಗಿ ಪಾರ್ಕ್ ಮಾಡಿದ್ದ ವಾಹನಕ್ಕೆ ಕ್ಲ್ಯಾಂಪ್ ಹಾಕಿದ್ದಾಗ, ಆರೋಪಿಗಳು ಕೋಪಗೊಂಡು ಪೊಲೀಸರೊಂದಿಗೆ ಗಲಾಟೆ ಆರಂಭಿಸಿದ್ದಾರೆ. ವೇಳೆ ಇರಾಲ್ ವ್ಯಾಸ್ ಸಾರ್ವಜನಿಕವಾಗಿ ಅಸಭ್ಯ ಪದಗಳನ್ನು ಬಳಸಿ, ಪೊಲೀಸ್ ಸಿಬ್ಬಂದಿಯನ್ನು ಅವಮಾನಿಸಿದ್ದಾರೆ. ಅರೆಸ್ಟ್ ಮಾಡಿ ನೋಡೋಣ ಎಂದು ಸವಾಲು ಹಾಕಿದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಿಳಾ ಪೊಲೀಸ್ ಅಧಿಕಾರಿಗಳ ಮೇಲೂ ಇರಾಲ್ ವ್ಯಾಸ್ ಅವಾಚ್ಯ ಶಬ್ದಗಳನ್ನು ಬಳಸಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ.ಇದನ್ನೂ ಓದಿ: ಸಿಲಿಂಡರ್ ಲೀಕ್ ಘಟನೆ: ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಇರಾಲ್ ವ್ಯಾಸ್ಗೆ ಹಿಂದೆಯೂ ಇದೇ ರೀತಿಯ ವರ್ತನೆ ಮತ್ತು ಕಾನೂನು ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಆರೋಪಿಗಳ ವಿರುದ್ಧ ಬಿಎನ್ಎಸ್ ಕಾಯ್ದೆಯ ಸೆಕ್ಷನ್ 132, 352, 79, 75 ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಯುಎಸ್ ಸುಂಕಗಳಿಂದ ಭಾರತದ ಆರ್ಥಿಕತೆಗೆ ಕಡಿಮೆ ಬೆದರಿಕೆ: S&P ವರದಿ..!


ಯಲಹಂಕ ನ್ಯೂ ಟೌನ್ ಪೊಲೀಸರು ಇಬ್ಬರನ್ನೂ ಬಂಧಿಸಿ, ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ. ಪ್ರಕರಣ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸರಿಗೆ ಗೌರವ ಕೊಡದಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.Calvin Klein Men's Solid Regular Fit Polo T-Shirt