Skip to main content
ವಿಡಿಯೋ
1/2
politics

ರಜನಿಕಾಂತ್ ಸಿನಿ ಪಯಣಕ್ಕೆ 50 ವರ್ಷ..ಪ್ರಧಾನಿ ಮೋದಿಯಿಂದ ಅಭಿನಂದನೆ!

By Pavitra Ganapathi Baradavalli
ರಜನಿಕಾಂತ್ ಸಿನಿ ಪಯಣಕ್ಕೆ 50 ವರ್ಷ..ಪ್ರಧಾನಿ ಮೋದಿಯಿಂದ ಅಭಿನಂದನೆ!

ರಜನಿಕಾಂತ್ ಸಿನಿಮಾ ಜಗತ್ತಿನಲ್ಲಿ 50 ವರ್ಷಗಳ ಯಶಸ್ವಿ ಯಾತ್ರೆಯನ್ನು ಪೂರೈಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಭಿನಂದನೆಗಳು ಮತ್ತು ಶುಭಾಶಯಗಳು.

ಪ್ರಧಾನಿ ನರೇಂದ್ರ ಮೋದಿ ಅವರು ರಜನಿಕಾಂತ್ ಅವರನ್ನು ಅಭಿನಂದಿಸಿದ್ದಾರೆ. ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರ ಕೂಲಿ ಬಿಡುಗಡೆಯಾದ ಸಂದರ್ಭದಲ್ಲಿ, ಅವರ ಸಿನಿ ಜರ್ನಿ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಂದರೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಿನಿಮಾ ಜಗತ್ತಿನಲ್ಲಿ 50 ವರ್ಷಗಳ ಅದ್ಭುತ ಸಾಧನೆ ಪೂರೈಸಿದ್ದು, ಪ್ರಧಾನಿ ಮೋದಿ ಅವರ ಅಭಿನಂದನೆಗೆ ಪಾತ್ರರಾಗಿದ್ದಾರೆ.ಇದನ್ನೂ ಓದಿ: ಬಿಜೆಪಿಯಿಂದ ಧರ್ಮಸ್ಥಳ ಚಲೋ: 500 ಕಾರುಗಳ ಬೃಹತ್ ಯಾತ್ರೆ, ವಿಜಯೇಂದ್ರ ನೇತೃತ್ವದಲ್ಲಿ ಶಾಸಕರ ಭೇಟಿ


ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ರಜನಿಕಾಂತ್ ಅವರನ್ನು ಭೇಟಿಯಾದಾಗ ತೆಗೆದ ಫೋಟೋವನ್ನು X ಖಾತೆಯಲ್ಲಿ ಪೋಸ್ಟ್ ಮಾಡಿದರು. ಸಿನಿಮಾ ಜಗತ್ತಿನಲ್ಲಿ 50 ಅದ್ಭುತ ವರ್ಷಗಳನ್ನು ಪೂರೈಸಿದ ತಿರು ರಜನಿಕಾಂತ್ ಜಿಗೆ ಅಭಿನಂದನೆಗಳು. ಅವರ ಪ್ರಯಾಣ ಐಕಾನಿಕ್, ವೈವಿಧ್ಯಮಯ ಪಾತ್ರಗಳು ತಲೆಮಾರುಗಳಿಂದ ಜನರ ಮನಸ್ಸಿನಲ್ಲಿ ಶಾಶ್ವತ ಪ್ರಭಾವ ಬೀರಿವೆ. ಮುಂಬರುವ ದಿನಗಳಲ್ಲಿ ಅವರಿಗೆ ಯಶಸ್ಸು ಮತ್ತು ಉತ್ತಮ ಆರೋಗ್ಯ ಮುಂದುವರಿಯಲಿ ಎಂದು ಪೋಸ್ಟ್ ಬರೆದುಕೊಂಡಿದ್ದಾರೆ.ಇದನ್ನೂ ಓದಿ: ವ್ಯರ್ಥವಾಯ್ತಾ ಟ್ರಂಪ್-ಪುಟಿನ್ ಅಲಾಸ್ಕ ಭೇಟಿ? ಉಕ್ರೇನ್ ಯುದ್ಧದ ಬಗ್ಗೆ ಒಪ್ಪಂದವಿಲ್ಲದೇ ಮಾತುಕತೆ ಮುಕ್ತಾಯ!


ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ರಜನಿಕಾಂತ್ರ ಅವರು, ಗೌರವಾನ್ವಿತ ನರೇಂದ್ರ ಮೋದಿಜಿ, ನಿಮ್ಮ ಆತ್ಮೀಯ ಶುಭಾಶಯಗಳಿಗೆ ನಾನು ತುಂಬಾ ಕೃತಜ್ಞ. ನಾನು ಬಹಳ ಹಿಂದಿನಿಂದಲೂ ಅತ್ಯಂತ ಗೌರವದಿಂದ ಕಾಣುತ್ತಿರುವ ನಾಯಕನಿಂದ ಅವುಗಳನ್ನು ಸ್ವೀಕರಿಸಲು ನನಗೆ ನಿಜಕ್ಕೂ ಗೌರವವಾಗಿದೆ. ನಿಮ್ಮ ದಯೆಯ ಮಾತುಗಳಿಗೆ ಧನ್ಯವಾದಗಳು. ಜೈ ಹಿಂದ್ ಎಂದು ಹೇಳಿದ್ದಾರೆ.Calvin Klein Men's Solid Regular Fit Polo T-Shirt