ಅನಾಮಿಕ ದೂರುದಾರ ವ್ಯಕ್ತಿಯ ವಿರುದ್ಧ ಬಿಜೆಪಿಯ ವಿಧಾನಸಭೆಯ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದು ಅವನು ಧರ್ಮಸ್ಥಳದ ಹೆಸರನ್ನು ಹಾಳು ಮಾಡಲು ನಿಂತಿದ್ದಾನೆ, ಅವನ ಹಿಂದೆ ದೊಡ್ಡ ತಂಡವೇ ಇದೆ ಅವನನ್ನು ಹಣ ಕೊಟ್ಟು ಕರೆದುಕೊಂಡು ಬಂದಿದ್ದಾರೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.TRASE Block Heels Sandals For Women, Dusky Stylish & Comfortable Footwear
ಈ ಹಿಂದೆ ಸದನದಲ್ಲಿ ನಾವು ಗಲಾಟೆ ಮಾಡಿದ್ದರು ನೀವುಗಳು ಎಸ್ಐಟಿ ರಚನೆ ಮಾಡಿರಲಿಲ್ಲ ಸಿದ್ದರಾಮಯ್ಯ ಸುತ್ತ ಒಂದು ರೀತಿಯ ಟಿಪ್ಪು ಗ್ಯಾಂಗ್ ಸುತ್ತುವರೆದಿದೆ, ಅದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಈ ಹಿಂದೆ ಎಸ್ಐಟಿ ರಚನೆ ಮಾಡುವುದಕ್ಕೆ ಮನಸ್ಸು ಸಹ ಮಾಡಿರಲಿಲ್ಲ ಆದರೆ ಅನಾಮಿಕನ ದೂರಿನ ನಂತರ ಸಡನ್ನಾಗಿ ಮಾಡಿದ್ದಾರೆ. ಹೀಗಾಗಿ ಧರ್ಮಸ್ಥಳವನ್ನು ಹಾಗೂ ಅಲ್ಲಿನ ಹೆಸರನ್ನು ಕೆಡಿಸುವುದಕ್ಕೆ ಇವರೇ ಷಡ್ಯಂತ್ರವನ್ನು ರೂಪಿಸಿದಂತಿದೆ ಎಂದು ಹೇಳಿದ್ದಾರೆ.
ತಿರುಪತಿ ತಿಮ್ಮಪ್ಪನ ದೇವಸ್ಥಾನ ಆಯ್ತು ಶನಿದೇವರನ್ನು ಕೂಡ ಮುಗಿಸಲು ಹೊರಟಿದ್ದರು. ಹೀಗೆ ಬರೀ ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಈ ಪಾಪಿಗಳು. ದೇವರ ಬಗ್ಗೆ ಕೂಡ ಅಪಪ್ರಚಾರ ಮಾಡುವುದಕ್ಕೆ ಶುರು ಮಾಡಿದ್ದಾರೆ. ಹೀಗಾಗಿ ಇವರಿಗೆ ಸರಿಯಾದ ಶಿಕ್ಷೆ ಆಗಲೇಬೇಕು ಎಂದು ಆಗ್ರಹ ಮಾಡಿದ್ದಾರೆ.ALSO READ: ಮೂವರು ಪಿತೂರಿ ಮಾಡಿ ಸಚಿವ ಸ್ಥಾನ ತೆಗೆಸಿದ್ದಾರೆ: ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದ ಆರ್ ಅಶೋಕ್ ಅವರು ಶಿವಕುಮಾರ್ ಧರ್ಮಸ್ಥಳದ ವಿರುದ್ಧ ಇದು ಒಂದು ಷಡ್ಯಂತ್ರ ಎಂದು ಹೇಳಿದ್ದಾರೆ. ಡಿಕೆ ಶಿವಕುಮಾರ್ ಹೇಳಿದ್ದಾರೆ ಅಂದ್ರೆ ಸರ್ಕಾರ ಒಪ್ಪಿಕೊಂಡಿದೆ ಅಂತ ಅರ್ಥ. ಸತ್ಯಾಸತ್ಯತೆಯನ್ನ ತಿಳಿಸೋ ಕೆಲಸವನ್ನು ಮಾಡಬೇಕು. ಯಾವುದೇ ಕಾರಣಕ್ಕೂ ಎಸ್ ಐ ಟಿ ತನಿಕೆಯನ್ನು ಕ್ಲೋಸ್ ಮಾಡಬಾರದು ಸತ್ಯಾಸತ್ಯತೆ ಹೊರಗಡೆ ಬರಲೇಬೇಕು ಎಂದು ಆಗ್ರಹವನ್ನು ವ್ಯಕ್ತಪಡಿಸಿದರು.