ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ರದ್ದಾದ ಬೆನ್ನಲ್ಲೇ ಅವರ್‍ನು, ಆಗಸ್ಟ್ 14ರಂದು ಅರೆಸ್ಟ್ ಮಾಡಲಾಗಿದೆ. ಇದೀಗ ಅರೆಸ್ಟ್ ಮಾಡುವ ವೇಲೆ ತೆಗೆದ ದರ್ಶನ್ ಹಾಗೂ ಪವಿತ್ರಾ ಗೌಡ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಹೊಸಕೆರೆಹಳ್ಳಿ ಫ್ಲಾಟ್‌ನಲ್ಲಿ ಆರೋಪಿಗಳ ಅರೆಸ್ಟ್ ಮಾಡಿದ್ದ ಪೊಲೀಸರು, ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆದೊಯ್ದು ಬಂಧನ ಪ್ರಕ್ರಿಯೆ ನಡೆಸಿದರು. ಈ ವೇಳೆ ದರ್ಶನ್ ಸೇರಿ ಎಲ್ಲಾ ಆರೋಪಿಗಳ ಫೋಟೋ ತೆಗೆದಿದ್ದರು. ಇದೀಗ ಈ ಫೋಟೋಗಳು ವೈರಲ್ ಆಗಿವೆ.
ಈ ಫೋಟೋಗಳಲ್ಲಿ ಗಮನಿಸಬೇಕಾದ ಅಂಶಗಳೇನೆಂದರೆ, ನಟ ದರ್ಶನ್ ಬೇಸರದ ಭಾವನೆಯಲ್ಲಿ ಭಾವಚಿತ್ರಕ್ಕೆ ಪೋಸ್ ನೀಡಿದ್ದಾರೆ. ಆದರೆ ದರ್ಶನ್ ಗೆಳತಿ ಪವಿತ್ರಾ ಗೌಡ ಈ ಫೋಟೋದಲ್ಲಿ ನಗು ನಗುತ್ತಾ ಕಾಣಿಸಿಕೊಂಡಿದ್ದಾರೆ.
ಅಜಯ್ ರಾವ್ ವಿಚ್ಚೇದನ ಅರ್ಜಿ ವಿಚಾರ...ಪತ್ನಿ ಸ್ವಪ್ನಾ ಮಾಡುತ್ತಿರೋ ಆರೋಪವೇ ನಿಜಕ್ಕೂ ಶಾಕಿಂಗ್!
ಇನ್ನು ನಟ ದರ್ಶನ್ ಬೆನ್ನು ನೋವಿನ ನೆಪ ಹೇಳಿ ಜಾಮೀನು ಪಡೆದು ಹೊರಗೆ ಬಂದಿದ್ರು. ಹೊರಗಡೆ ಇದ್ದಾಗ ಸಾಕಷ್ಟು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ತಿರುಪತಿಗೂ ಭೇಟಿ ನೀಡಿದ್ದ ನಟ ದರ್ಶನ್, ಹರಕೆ ಮುಡಿ ಕೊಟ್ಟಿದ್ದರು. ಹೀಗಾಗಿ ವಿಗ್ ಧರಿಸಿರಲಿಲ್ಲ. ಇದೀಗ ಪೊಲೀಸರು ನಟ ದರ್ಶನ್‌ನ ಹಾಗೆಯೇ ಅರೆಸ್ಟ್ ಮಾಡಿದ್ದು, ವೈರಲ್ ವಿಚಾರವಾಗಿದೆ. ಇದೀಗ ಫೋಟೋ ಕೂಡ ವೈರಲ್ ಆಗಿದೆ.