ಬೆಂಗಳೂರು: ಕಳೆದೆರೆಡು ದಿನಗಳ ಸುಪ್ರೀಂ ಕೋರ್ಟ್ ದರ್ಶನ್ ಅವರ ಜಾಮೀನನ್ನು ರದ್ದುಗೊಳಿಸಿ ಆದೇಶ ನೀಡಿತ್ತು. ಅದರಂತೆ ಜೈಲುವಾಸ ಮೂರನೇ ದಿನಕ್ಕೆ ಮುಂದುವರೆದಿದೆ. ಮೂರನೇ ದಿನವೂ ಸಹ ದರ್ಶನ್ ಮತ್ತು ಅವರ ಗ್ಯಾಂಗ್ ಜೈಲುವಾಸ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಮಾನ್ಯ ವಿಚಾರಣಾ ಖೈದಿಯಂತೆ ಸೆರೆವಾಸ ಅನುಭವಿಸುತ್ತಿರುವ ದರ್ಶನ್. ಜೈಲಿನಲ್ಲಿ ಜೈಲಿನ ಮೆನುವಿನಲ್ಲಿರುವಂತೆ ಸಾಮಾನ್ಯವಾಗಿ ಪಲಾವ್ ಸೇವನೆ ಮಾಡಿದ್ದಾರೆ.
ಪಲಾವ್ ಸೇವಸುವ ಮೊದಲು ಬಿಸಿನೀರನ್ನು ಸೇವಿಸಿ ನಂತರ ಪಲಾವ್ ಅನ್ನು ಸೇವನೆ ಮಾಡಿದ್ದಾರೆ.ಇದನ್ನೂ ಓದಿ: ಮೋದಿಯವರ ಜಿಎಸ್‌ಟಿ ಸುಧಾರಣೆ ಘೋಷಣೆಯನ್ನು ಸ್ವಾಗತಿಸಿದ ಬೊಮ್ಮಾಯಿ: "ಸಾಮಾನ್ಯ ಜನರಿಗೆ ದೊಡ್ಡ ಲಾಭ"
ಎಂದಿನಂತೆ ದರ್ಶನ್ ಅವರು ದಿನಪತ್ರಿಕೆಗಳತ್ತ ಕಣ್ಣಾಡಿಸಿದರು. ಇನ್ನೂ ಪವಿತ್ರ ಗೌಡರನ್ನು ಗಮನಿಸುವುದಾದರೆ ಸಹ ಖೈದಿಗಳ ಜೊತೆ ಬೆರೆಯುತ್ತಿದ್ದಾರೆ. ಜೊತೆಗೆ ಸಹಖೈದಿಗಳಂತೆ ಉಪಹಾರವನ್ನು ಸೇವಿಸಿದರು. ಸಹಜವಾಗಿ ಜೈಲು ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ದರ್ಶನ್ ಮತ್ತು ಗ್ಯಾಂಗ್. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ಕಟ್ಟುನಿಟ್ಟಿನ ಕ್ರಮವನ್ನು ಜೈಲಿನಲ್ಲಿ ಕೈಗೊಳ್ಳಲಾಗುತ್ತಿದೆ. ಹಾಗೇ ದರ್ಶನ್ ಮತ್ತು ಗ್ಯಾಂಗ್ ಮೇಲೆ ಹದ್ದಿನ ಕಣ್ಣನ್ನು ಸಹ ಪೊಲೀಸರು ಇರಿಸಿದ್ದಾರೆ. ಆದರೆ ದರ್ಶನ್ ಅವರು ದಿನದ ಬಹುತೇಕ ಸಮಯ ನಾಲ್ಕು ಗೋಡೆಗಳ ಮಧ್ಯೆಯೆ ಕಾಲ ಕಳೆಯುತ್ತಿದ್ದಾರೆ. ಕಾರಿಡಾರ್‌ನಲ್ಲಿ ವಾಕ್ ಮಾಡಲು ಒಂದು ತಾಸು ಮಾತ್ರ ಅನುಮತಿ ನೀಡಲಾಗಿದೆ.ಇದನ್ನೂ ಓದಿ: ಯುಎಸ್ ಓಪನ್ ಜೂನಿಯರ್ ಟೆನ್ನಿಸ್ ಚಾಂಪಿಯನ್‌ಶಿಪ್‌ನಲ್ಲಿ ಏಕೈಕ ಭಾರತೀಯ ಟೆನ್ನಿಸ್ ಪ್ಲೇಯರ್ ʼಕ್ರಿಶ್ ತ್ಯಾಗಿʼ: ಇವರ ಬಗ್ಗೆ ಮಾಹಿತಿ ಇಲ್ಲಿದೆ
ಇತರೆ ಖೈದಿಗಳಿದಲೂ ಅಂತರ ಕಾಯ್ದುಕೊಂಡಿದ್ದಾರೆ. ಊಟ ತಿಂಡಿ ಕೊಠಡಿಗೆ ಸಿಬ್ಬಂದಿ ಪೂರೈಸುತ್ತಿದ್ದಾರೆ. ದರ್ಶನ್ ಇರುವ ಕೋಣೆಯಲ್ಲಿ ಟಿವಿ ಕೂಡ ಇಲ್ಲ ಎಂಬುದು ತಿಳಿದುಬಂದಿದೆ. ಖಾಲಿ ಕೂರಬೇಕು ಇಲ್ಲವೇ ಪುಸ್ತಕ ಓದಲು ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಸಿಬ್ಬಂದಿಗಳು ಕೂಡ ದರ್ಶನ್ ಬಳಿ ಮಾತಾಡುವ ಹಾಗಿಲ್ಲ ಎಂದು ನಿರ್ಬಂಧ ಹಾಕಿದ್ದಾರೆ. ಜೈಲು ಅಧಿಕಾರಿಗಳೇ ದರ್ಶನ್ ಹಾಗೂ ಗ್ಯಾಂಗ್ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.NOBERO Men's Cotton Solid Regular Fit Polo Shirt