Skip to main content
ವಿಡಿಯೋ
politics

ಧರ್ಮಸ್ಥಳ ಬಗ್ಗೆ ಅವಹೇಳನಕಾರಿ ವೀಡಿಯೋ ಮಾಡಿ ಹರಿಬಿಟ್ಟವರಿಗೆ SIT ನೋಟಿಸ್

By Gireesh Vasishta
ಧರ್ಮಸ್ಥಳ ಬಗ್ಗೆ ಅವಹೇಳನಕಾರಿ ವೀಡಿಯೋ ಮಾಡಿ ಹರಿಬಿಟ್ಟವರಿಗೆ SIT ನೋಟಿಸ್

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮತ್ತು ಹೇಳಿಕೆಗಳನ್ನು ಹರಿಬಿಟ್ಟ ಕೆಲವು ವ್ಯಕ್ತಿಗಳನ್ನು ಈಗಾಗಲೇ ಪಟ್ಟಿ ಮಾಡಿದ್ದು ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ ಹೀಗಾಗಿ ಯಾವುದೇ ಪೋಸ್ಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡುವುದಕ್ಕೂ ಮುನ್ನ ಎಚ್ಚರವಿರಲಿ.

ಧರ್ಮಸ್ಥಳ- ಅನಾಮಿಕ ವ್ಯಕ್ತಿಯ ದೂರಿನ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಅಸ್ಥಿ ಪಂಜರಗಳ ಉತ್ಖನನ ಕಾರ್ಯಕ್ಕೆ ಬ್ರೇಕ್ ಬಿದ್ದಿದ್ದು, ಇನ್ನೂ ಅದಕ್ಕೆ ಸಂಬಂಧಿಸಿದ ಅಧಿಕೃತ ಮಾಹಿತಿಯನ್ನು ಗೃಹ ಸಚಿವರು ನೀಡಿಲ್ಲ.TIMEX Classics Analog Watch for Men with Round Dial & Water Resistant Man's Wrist Watches

ಹೀಗಾಗಿ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಧರ್ಮಸ್ಥಳಕ್ಕೆ ಅಪಕೀರ್ತಿ ಉಂಟುಮಾಡುವ ವಿಡಿಯೋಗಳನ್ನು ಅಥವಾ ಅವಹೇಳನಕಾರಿಯಾಗಿ ಪೋಸ್ಟ್ಗಳನ್ನು ಮಾಡುವವರ ವಿರುದ್ಧ ಎಸ್ಐಟಿ ಪರಿಶೀಲನೆ ಮಾಡಿದ್ದು ಈಗಾಗಲೆ ನೋಟಿಸ್‌ ನೀಡಿದೆ, ಅವರ ವಿರುದ್ಧ ಶೀಘ್ರವೇ ಕ್ರಮ ತೆಗೆದುಕೊಳ್ಳುವ ಲಕ್ಷಣಗಳು ಕಾಣುತ್ತಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಅಸ್ಥಿ ಪಂಜರದ ಉತ್ಖನನ ಕಾರ್ಯಗಳ ನಂತರವು ಅಲ್ಲಿ ಒಂದು ಅಸ್ತಿಪಂಜರ ಬಿಟ್ಟರೆ ಇನ್ನು ಯಾವುದೇ ಗಣನೀಯ ಅಸ್ಥಿಪಂಜರಗಳು ಸಿಕ್ಕಿಲ್ಲ, ಹೀಗಾಗಿ ಕರ್ನಾಟಕ ರಾಜ್ಯ ಬಿಜೆಪಿ ಧರ್ಮಸ್ಥಳದ ಪರ ಹೇಳಿಕೆಗಳನ್ನು ನೀಡುತ್ತಿದೆ, ಕಾರಣದಿಂದ ಗೃಹ ಸಚಿವ ಪರಮೇಶ್ವರ್ ಅವರು ಆದಷ್ಟು ಬೇಗ ಎಸ್ಐಟಿ ತನಿಖೆ ಬಗ್ಗೆ ಮಾಹಿತಿ ನೀಡುತ್ತಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.ALSO READ:ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ಐಇಡಿ ಸ್ಫೋಟ: ತುಳಿದ ತಕ್ಷಣವೇ DRGಯ ಒಬ್ಬ ಸೈನಿಕ ಸಾವು