ಬೆಂಗಳೂರು ನಗರದಲ್ಲಿ ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಮರಗಳನ್ನು ಕಡಿದು ಹಾಕಲಾಗಿದೆ. ಇದರ ಪರಿಣಾಮವಾಗಿ ನಗರದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಿದ್ದು, ಜನರು ಉಸಿರಾಡಲು ಶುದ್ಧವಾದ ಗಾಳಿ ಕೂಡಾ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಬಿಎಂಆರ್‌ಸಿಎಲ್ (BMRCL) ಮೆಟ್ರೋ ಮೂರನೇ ಹಂತದ ಕಾಮಗಾರಿಗಾಗಿ ಸುಮಾರು 6,500 ಮರಗಳನ್ನು ಕಡಿದು ಹಾಕಲು ಮತ್ತು ಕೆಲವು ಮರಗಳನ್ನು ಸ್ಥಳಾಂತರಿಸಲು ತೀರ್ಮಾನ ಮಾಡಿದೆ.ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಜನ ದಟ್ಟಣೆ: ಸಾರಿಗೆ ನೌಕರರ ಮುಷ್ಕರದ ಪರಿಣಾಮ..!
ಮೆಟ್ರೋ ಮೂರನೇ ಹಂತದಲ್ಲಿ ಒಟ್ಟು 44.65 ಕಿಲೋ ಮೀಟರ್ ಉದ್ದದ ಎರಡು ಮಾರ್ಗಗಳನ್ನು ನಿರ್ಮಿಸಲಾಗುತ್ತಿದೆ. ಮೊದಲ ಕಾರಿಡಾರ್ ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 32.15 ಕಿ.ಮೀ ಉದ್ದವಿದ್ದು, 21 ನಿಲ್ದಾಣಗಳನ್ನು ಹೊಂದಿರಲಿದೆ. ಎರಡನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆಯವರೆಗೆ 12.50 ಕಿ.ಮೀ ಉದ್ದವಿದ್ದು, 9 ನಿಲ್ದಾಣಗಳನ್ನು ಹೊಂದಿರಲಿದೆ. ಒಟ್ಟಾರೆ 15,611 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.ಬೆಂಗಳೂರಿನ ಯೆಲ್ಲೋ ಲೈನ್ ಉದ್ಘಾಟನೆಯಿಂದ ನಮ್ಮ ಮೆಟ್ರೋ ದೈನಂದಿನ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಿದೆ..!
ಈ ಮೊದಲು ಕಿತ್ತಳೆ ಮಾರ್ಗದ ಕಾಮಗಾರಿಗಾಗಿ 11 ಸಾವಿರ ಮರಗಳನ್ನು ಕಡಿಸಲು ಬಿಎಂಆರ್‌ಸಿಎಲ್ ಮುಂದಾಗಿತ್ತು. ಆದರೆ ಆ ಸಮಯದಲ್ಲಿ ಪರಿಸರ ಹೋರಾಟಗಾರರಿಂದ ಬಂದ ತೀವ್ರ ಆಕ್ರೋಶದ ಕಾರಣ ಆ ಸಂಖ್ಯೆ ಕಡಿತಗೊಂಡಿತ್ತು. ಈಗ ಮತ್ತೆ ಸಾವಿರಾರು ಮರಗಳನ್ನು ಕಡಿಸಲು ಮುಂದಾಗಿರುವುದರಿಂದ ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
CLOTHERA Kids Fedora Round Hat and Matched Bow tie
ಅವರು ಈಗಾಗಲೇ ನಗರದಲ್ಲಿ ಶುದ್ಧ ಗಾಳಿಯ ಕೊರತೆ ಮತ್ತು ತಾಪಮಾನ ಏರಿಕೆಯಿಂದ ಜನತೆ ನರಳುತ್ತಿದ್ದಾರೆ, ಮರಗಳನ್ನು ಮತ್ತೆ ಮತ್ತೆ ಕಡಿಯುತ್ತ ಹೋದರೆ ಬೆಂಗಳೂರು ದೆಹಲಿಯಂತೆಯೇ ಮಾಲಿನ್ಯದಿಂದ ತುಂಬಿದ ನಗರವಾಗುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.ಆರ್.ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮೆಟ್ರೋ ಮಾರ್ಗದಲ್ಲಿ ಇಂದಿನಿಂದ ಬಿಎಂಟಿಸಿ ಫೀಡರ್ ಬಸ್‌ಗಳ ಸಂಚಾರ..!
ಬಿಎಂಆರ್‌ಸಿಎಲ್ ಅಧಿಕಾರಿಗಳು ಹೋರಾಟಗಾರರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದರೂ ಹೋರಾಟಗಾರರು ತಮ್ಮ ಅಸಮಾಧಾನವನ್ನು ತೀವ್ರವಾಗಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಒಂದೆಡೆ ಸಾರ್ವಜನಿಕ ಸಾರಿಗೆ ಅಭಿವೃದ್ಧಿ ಅಗತ್ಯವಿದ್ದರೂ ಮತ್ತೊಂದೆಡೆ ಹಸಿರು ಪರಿಸರದ ನಾಶವು ನಗರಕ್ಕೆ ದೊಡ್ಡ ಆತಂಕವನ್ನು ತಂದಿದೆ.