Skip to main content
ವಿಡಿಯೋ
science

ಕಡಿಮೆ ಓದಿಗಾಗಿ - ಗಗನಯಾತ್ರಿ ಉದ್ಯೋಗ ಆಯ್ಕೆ ಮಾಡಿದ್ರಂತೆ ಶುಭಾಂಶು ಶುಕ್ಲಾ ..!

By Vinutha U
ಕಡಿಮೆ ಓದಿಗಾಗಿ -  ಗಗನಯಾತ್ರಿ ಉದ್ಯೋಗ ಆಯ್ಕೆ ಮಾಡಿದ್ರಂತೆ ಶುಭಾಂಶು ಶುಕ್ಲಾ ..!

ಜೊತೆಗೆ ಆಕ್ಸಿಯಂ-4 ಮಿಷನ್ ಪ್ಯಾಚ್ ಮತ್ತು ISS ನಿಂದ ಸೆರೆಹಿಡಿದ ಭೂಮಿಯ ಫೋಟೋಗಳನ್ನು ಹಂಚಿಕೊಂಡರು.

ನವದೆಹಲಿ - ತಾವು ತಮ್ಮ ವಿದ್ಯಾಭ್ಯಾಸದ ದಿನಗಳಲ್ಲಿ ಕಡಿಮೆ ಓದಲು ಗಗನಯಾತ್ರಿ ಆಗುವ ಪ್ಲ್ಯಾನ್ ಮಾಡಿದ್ದಾಗಿ ಖುದ್ದು ಶುಭಾಂಶು ಶುಕ್ಲಾ ಹೇಳಿದ್ದಾರೆ. ಆದರೆ , ಈ ಪ್ಲ್ಯಾನ್ ಫೇಲ್ ಆಗಿ ಅತಿ‌ ಹೆಚ್ಚು ಓದುವ ಸಂದರ್ಭ ಎದುರಾಯಿತು ಎಂದು ತಮ್ಮ ವಿದ್ಯಾಭ್ಯಾಸದ ದಿನಗಳ ನೆನಪನ್ನ‌ ಬಿಚ್ಚಿಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗಗನಯಾತ್ರಿ ಶುಭಾಂಶು ಶುಕ್ಲಾ ನಡುವೆ ಸಾಕಷ್ಟು ಮೌಲ್ಯಯುತ್ತ ಚರ್ಚೆ ನಡೆದಿದೆ. ನೆನ್ನೆ ನವದೆಹಲಿಯ 7 ಲೋಕ ಕಲ್ಯಾಣ್ ಮಾರ್ಗದಲ್ಲಿರುವ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಭೇಟಿ ಆಗಿದೆ. ಶುಭಾಂಶು ಶುಕ್ಲಾ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಮತ್ತು ಆಕ್ಸಿಯಂ-4 ಮಿಷನ್‌ನ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಗಗನಯಾತ್ರಿಯಾಗಿದು , ಇವರು ಪ್ರಧಾನಿ ಮೋದಿಯವರನ್ನು ಭೇಟಿಯಾದರು.

ಪ್ರಧಾನಿ ಮೋದಿ ಶುಕ್ಲಾ ಅವರನ್ನು ಆಲಿಂಗಿಸಿ ಸ್ವಾಗತಿಸಿದರು. ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಕೊಂಡೊಯ್ದಿದ್ದ ತ್ರಿವರ್ಣ ಧ್ವಜವನ್ನು ಮೋದಿಗೆ ಉಡುಗೊರೆಯಾಗಿ ನೀಡಿದರು. ಜೊತೆಗೆ ಆಕ್ಸಿಯಂ-4 ಮಿಷನ್ ಪ್ಯಾಚ್ ಮತ್ತು ISS ನಿಂದ ಸೆರೆಹಿಡಿದ ಭೂಮಿಯ ಫೋಟೋಗಳನ್ನು ಹಂಚಿಕೊಂಡರು.

ಸ್ವಾರಸ್ಯಕರ ಚರ್ಚೆಯ ವಿವರ ಹೀಗಿದೆ.

ಶುಕ್ಲಾ ಅವರು ಬಾಹ್ಯಾಕಾಶ ಅನುಭವಗಳು ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿ ಮತ್ತು ಗಗನಯಾನ ಮಿಷನ್‌ನ ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ಮುಕ್ತ ಮಾತುಕತೆ ಮಾಡಿದರು.

ಇದೇ ವೇಳೆ ಶುಕ್ಲಾ ಅವರ ಸಾಧನೆಗಳು ಯುವ ಪೀಳಿಗೆಯನ್ನು ಬಾಹ್ಯಾಕಾಶ ಸಂಶೋಧನೆಯ ಕಡೆಗೆ ಪ್ರೇರೇಪಿಸಿವೆ ಎಂದು ಮೋದಿ ಶ್ಲಾಘಿಸಿದರು.

ಶುಕ್ಲಾ ಅವರು ತಮ್ಮ 18 ದಿನಗಳ ISS ವಾಸ್ತವ್ಯದಲ್ಲಿ 60ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿರುವುದಾಗಿ ಹೇಳಿದರು. ಇದರಲ್ಲಿ ಭಾರತಕ್ಕೆ ಸಂಬಂಧಿಸಿದ ಏಳು ನಿರ್ದಿಷ್ಟ ಪ್ರಯೋಗಗಳು ಸೇರಿವೆ. ಇವುಗಳ ಫಲಿತಾಂಶಗಳನ್ನು ಭಾರತೀಯ ವಿಜ್ಞಾನಿಗಳು ಪರಿಶೀಲಿಸುತ್ತಿದ್ದಾರೆ ಎಂದು ವಿವರಣೆ ನೀಡಿದರು. ಈ ಭೇಟಿಯನ್ನು ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಇದು 2027 ರಲ್ಲಿ ನಿರೀಕ್ಷಿತ ಗಗನಯಾನ ಮಿಷನ್‌ಗೆ ಮಾರ್ಗದರ್ಶನ ನೀಡಲಿದೆ ಎಂದರು.

ಹಿಂದೆ ಜೂನ್ 28, 2025 ರ ವಿಡಿಯೋ ಕಾನ್ಫರೆನ್ಸ್ ಮಾತುಕತೆ ವಿವರ.

ಇದನ್ನೂ ಓದಿ: ನವ ದೆಹಲಿ ಟೈಗರ್ಸ್‌ಗೆ ಭರ್ಜರಿ ಜಯ: DPL 2025 ರ 26ನೇ ಪಂದ್ಯದಲ್ಲಿ ಉತ್ತರ ದೆಹಲಿ ಸ್ಟ್ರೈಕರ್ಸ್‌ನ್ನು 8 ವಿಕೆಟ್‌ಗಳಿಂದ ಮಣಿಸಿದರು..

ಶುಕ್ಲಾ ISS ನಲ್ಲಿದ್ದಾಗ ಪ್ರಧಾನಿ ಮೋದಿ ಅವರೊಂದಿಗೆ 18 ನಿಮಿಷಗಳ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಶುಕ್ಲಾ ಗುರುತ್ವಾಕರ್ಷಣೆ-ಮುಕ್ತ ವಾತಾವರಣದ ಸವಾಲುಗಳ ಬಗ್ಗೆ ವಿವರಿಸಿದರು. ಉದಾಹರಣೆಗೆ, ಮಾತನಾಡುವಾಗ ಕಾಲುಗಳನ್ನು ಕಟ್ಟಿಕೊಳ್ಳುವ ಅಗತ್ಯ ಹೇಳಿದರು. ಶುಕ್ಲಾ ಅವರು ISS ಗೆ ಕೊಂಡೊಯ್ದ ಭಾರತೀಯ ಆಹಾರಗಳಾದ ಕ್ಯಾರಟ್ ಹಲ್ವಾ, ಹೆಸರು ಬೇಳೆ ಹಲ್ವಾ, ಮತ್ತು ಮಾವಿನ ರಸವನ್ನು ಇತರ ಗಗನಯಾತ್ರಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂದು ತಿಳಿಸಿದರು.ಇದನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ ಎಂದಿದ್ದರು. ಮೋದಿ ಅವರು ಶುಕ್ಲಾ ಅವರ ಧ್ಯಾನದ ಅಭ್ಯಾಸದ ಬಗ್ಗೆ ಕೇಳಿದಾಗ ಶುಕ್ಲಾ ಧ್ಯಾನವು ಬಾಹ್ಯಾಕಾಶದ ಸವಾಲುಗಳನ್ನು ಎದುರಿಸಲು ಸಹಾಯಕವಾಗಿದೆ ಎಂದರು.

ಶುಕ್ಲಾ ಅವರು ಮೂಳೆ ಸವೆತದ ಬಗ್ಗೆ ಪ್ರಯೋಗಗಳನ್ನು ನಡೆಸುತ್ತಿರುವುದಾಗಿ ತಿಳಿಸಿದರು.

ಭೂಮಿಯನ್ನು ಬಾಹ್ಯಾಕಾಶದಿಂದ ನೋಡಿದಾಗ ಗಡಿಗಳಿಲ್ಲದೆ ಒಂದೇ ಜಗತ್ತಾಗಿ ಕಾಣುತ್ತದೆ ಎಂದು ಶುಕ್ಲಾ ತಮ್ಮ ಅನುಭವವನ್ನು ವಿವರಿಸಿದರು. ಇದು ಮಾನವತೆಯ ಏಕತೆಯನ್ನು ಒತ್ತಿಹೇಳಿತು. ಮೋದಿ ಅವರು ಶುಕ್ಲಾ ಅವರ ಸಾಧನೆಯನ್ನು 140 ಕೋಟಿ ಭಾರತೀಯರ ಪರವಾಗಿ ಶ್ಲಾಘಿಸಿದರು ಮತ್ತು ಈ ಪ್ರಯಾಣವು ಇಡೀ ದೇಶದ ಹೆಮ್ಮೆ ಎಂದು ಹೇಳಿದರು.

DRUNKEN Slippers For Women Men Winter Sandals Casual Flats Home Footwear Man Girls Sliders Flip Flops Chappals Ladies Clogs Sleeper Slides Stylish Ortho Soft (Color : Rose Pink, Size : 5-6 UK)

ಶುಕ್ಲಾ ಅವರು ತಮ್ಮ ಪ್ರಯಾಣವು ಕೇವಲ ವೈಯಕ್ತಿಕವಲ್ಲ, ಇಡೀ ಭಾರತದ ಪ್ರತಿನಿಧಿತ್ವ ಎಂದು ಕೃತಜ್ಞತೆಯೊಂದಿಗೆ ಹೇಳಿದರು.

ಶುಕ್ಲಾ ಅವರು ಆಗಸ್ಟ್ 17, 2025 ರಂದು ದೆಹಲಿಗೆ ಮರಳಿದಾಗ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮತ್ತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಂದ ಅದ್ದೂರಿ ಸ್ವಾಗತ ಪಡೆದಿದ್ದರು.

ಶುಕ್ಲಾ ಅವರ ಆಕ್ಸಿಯಂ-4 ಮಿಷನ್ ಜೂನ್ 25, 2025 ರಂದು ಫ್ಲೋರಿಡಾದಿಂದ ಆರಂಭವಾಗಿ, ಜೂನ್ 26 ರಂದು ISS ತಲುಪಿತು, ಮತ್ತು ಜುಲೈ 15, 2025 ರಂದು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಸ್ಪ್ಲಾಶ್‌ಡೌನ್ ಆಗಿತ್ತು. ಈ ಭೇಟಿಯ ನಂತರ, ಶುಕ್ಲಾ ಅವರು ತಮ್ಮ ತವರೂರಾದ ಲಕ್ನೋಗೆ ತೆರಳಿದ್ದಾರೆ ಮತ್ತು ಆಗಸ್ಟ್ 22-23, 2025 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸಲು ದೆಹಲಿಗೆ ಹಿಂತಿರುಗಲಿದ್ದಾರೆ. ಸಂಸತ್ತಿನಲ್ಲಿ ಶುಕ್ಲಾ ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು . ಈ ಸಾಧನೆಯನ್ನು ಗಗನಯಾನ ಮಿಷನ್‌ಗೆ ಮಹತ್ವದ ಕೊಡುಗೆ ಎಂದು ಪರಿಗಣಿಸಲಾಗಿದೆ.