ಬೆಂಗಳೂರು: ಬೆಂಗಳೂರಿನಲ್ಲಿ ಟೀ ಅಂಗಡಿಗಳು ಮಹತ್ವದ ಪಾತ್ರವನ್ನು ದಿನನಿತ್ಯದ ಜೀವನದಲ್ಲಿ ವಹಿಸುತ್ತದೆ, ಅದಕ್ಕೆ ಕಾರಣ ಬೆಂಗಳೂರಿನ ಜನತೆ, ಯಾವಗಲು ಜನರು ಅವರದ್ದೆ ಆದ ಕೆಲಸಗಳಲ್ಲಿ ಬ್ಯೂಸಿ ಇರುವುದರಿಂದ ಟೀ-ಕಾಫಿ, ಸಿಗರೇಟ್ ಹೀಗೆ ಇನ್ನಿತರ ಪಾನೀಯ, ವಸ್ತುಗಳಿಗಾಗಿ ಟೀ ಅಂಗಡಿಗೆ ಬರುತ್ತಾರೆ, ಆದರೆ ಕೆಲವರು ಅಲ್ಲಿ ಬಂದು ಟೀ ಕುಡಿದು ಸುಮ್ಮನೆ ಹೋಗುವ ಬದಲು ಗಲಾಟೆ ಮಾಡಿ ಹೋಗುತ್ತಾರೆ, ಇಲ್ಲಿಯು ಇದೆ ರೀತಿಯ ಘಟನೆ ನಡೆದಿದೆ.
ಟೀ ಕುಡಿಯಲು ಬಂದಿದ್ದ ಪುಂಡ ಅಂಗಡಿಯ ಮಾಲೀಕರ ಮೇಲೆ ಮಚ್ಚು ಬಿಸಿ ಆಟೋ ಹತ್ತಿ, ಎಸ್ಕೇಪ್ ಆಗಿದ್ದಾನೆ. ಇಂದು ಮುಂಜಾನೆ 5:00ಗೆ ಟೀ ಕುಡಿಯಲು ಬಂದಿದ್ದ ಕಿಡಿಗೇಡಿ ಗ್ರಾಹಕನೊಬ್ಬನ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ, ಗಲಾಟೆ ಮಾಡಬೇಡ ಎಂದು ಬುದ್ದಿವಾದ ಹೇಳಿದ ಮಾಲೀಕನ ಮೇಲೆ ಜಗಳ ಮಾಡಿ ಮಚ್ಚುಬಿಸಿದ್ದಾನೆ.Handcuffs Backpacks Vegan Leather Casual Backpack Multipurpose Travelling Bags Daypacks For Men And Women
ಆ ಮಚ್ಚು ಮಿಸ್ಸಾಗಿ ಅಲ್ಲೇ ಇದ್ದ ಕ್ಯೂಆರ್ ಕೋಡ್ ಸ್ಕ್ಯಾನರ್ ಬೋರ್ಡ್ ಮೇಲೆ ಬಿದ್ದಿದೆ, ಹೀಗಾಗಿ ಅಂಗಡಿಯ ಮಾಲೀಕ ಪ್ರಕಾಶ್ ಜಸ್ಟ್ ಮಿಸ್ಸಾಗಿದ್ದಾರೆ. ನಂತರ ಅಂಗಡಿ ಮುಂದೆ ಇದ್ದ ಕೂಲ್ ಡ್ರಿಂಕ್ಸ್ ಬಾಟಲಿಗಳು ಮತ್ತು ಇನ್ನಿತರ ತಿನ್ನುವ ಪದಾರ್ಥಗಳಿದ್ದ ಗಾಜಿನ ಟೇಬಲನ್ನು ಸಹ ಒಡೆದು ಹಾಕಿದ್ದಾನೆ.ಪುಟ್‌ಬಾಲ್: ರಿಯಲ್ ಮ್ಯಾಡ್ರಿಡ್ vs ಒಸಾಸ್ಸುನಾ ನಡುವಿನ ಪಂದ್ಯ: ಇಲ್ಲಿದೆ ಮಾಹಿತಿ
ಆರ್ ಟಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದ ಪರಿಣಾಮ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುಡಿ ರೌಡಿಯನ್ನು ಬಂಧಿಸುವ ಭರವಸೆ ನೀಡಿದ್ದಾರೆ ಈ ಘಟನೆಯು ಬೆಂಗಳೂರಿನ ಬಳ್ಳಾರಿ ರಸ್ತೆಯ ಬ್ರಹ್ಮಲಿಂಗೇಶ್ವರ ಕಾಂಡಿಮೆಂಟ್ಸ್ ನಲ್ಲಿ ನಡೆದಿದೆ.