ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಅವರು ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಪಿತೂರಿಯ ಹಿಂದೆ ವಿದೇಶಿ ಹಣದ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಧಾನಸೌಧ ಆವರಣದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಕುರಿತು ಇ.ಡಿ. ಅಥವಾ ಎನ್ಐಎ (ರಾಷ್ಟ್ರೀಯ ತನಿಖಾ ದಳ) ತನಿಖೆಗೆ ವ್ಯಾಪಕ ಒತ್ತಾಯ ಕೇಳಿಬಂದಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ನಾಯಿ ಬೊಗಳಿದ್ದಕ್ಕೆ ಕಾರನ್ನೇ ಎತ್ತಿ ಎಸೆದ ಒಂಟಿ ಸಲಗ!
ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಈಗಾಗಲೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಕೆಲವು ನಂಬಲರ್ಹ ಮೂಲಗಳಿಂದ ವಿದೇಶಿ ಹಣ ಬಂದಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಎನ್ಐಎ ಅಥವಾ ಇ.ಡಿ. ತನಿಖೆ ನಡೆಸಿದರೆ ಯಾರ್ಯಾರ ಬ್ಯಾಂಕ್ ಖಾತೆಗಳಿಗೆ ಎಷ್ಟೆಲ್ಲ ಹಣ ಎಲ್ಲೆಲ್ಲಿಂದ ಬಂದಿದೆ ಎಂಬುದು ಬಯಲಾಗುತ್ತದೆ ಎಂದು ಡಾ. ಭರತ್ ಶೆಟ್ಟಿ ಹೇಳಿದ್ದಾರೆ.ಇದನ್ನೂ ಓದಿ: ಮೋದಿ ಸರ್ಕಾರದ ಸಂವಿಧಾನ ತಿದ್ದುಪಡಿ: ಕಾನೂನಿನ ಮುಂದೆ ಸಮಾನತೆಗೆ ಒತ್ತು, ಕಾಂಗ್ರೆಸ್‌ನಿಂದಳೂರು ರಸ್ತೆ ಗುಂ ತೀವ್ರ ವಿರೋಧ
ಪಿತೂರಿ ನಡೆಯುತ್ತಿದೆ ಎಂದು ನಾವೂ ಹೇಳುತ್ತಿದ್ದೇವೆ, ಕಾಂಗ್ರೆಸ್ನವರೂ ಹೇಳುತ್ತಿದ್ದಾರೆ. ಹೀಗಾಗಿ, ಈ ಪ್ರಕರಣವನ್ನು ತಕ್ಷಣವೇ ಇ.ಡಿ. ಅಥವಾ ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸೌಜನ್ಯ ಪ್ರಕರಣದಲ್ಲೂ ನ್ಯಾಯ ಸಿಗಬೇಕು ಎಂದು ಅವರು ತಿಳಿಸಿದ್ದಾರೆ. ಸೌಜನ್ಯ ಹತ್ಯೆ ಬಗ್ಗೆ ದಾಖಲೆಗಳಿವೆ ಎಂದು ಹೇಳುವವರು ಆ ಮಾಹಿತಿಯನ್ನು ಎಸ್ಐಟಿಗೆ ನೀಡಬೇಕು. ಎಸ್ಐಟಿಗೆ ಸೌಜನ್ಯ ಕೇಸ್ ತನಿಖೆ ಮಾಡಲು ಅವಕಾಶವಿದ್ದರೆ ಅವರು ತನಿಖೆ ನಡೆಸಲಿ ಎಂದಿದ್ದಾರೆ.ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿಗಳಿಗೆ ಇಕೋಫಿಕ್ಸ್: BBMPಯಿಂದ ಹೊಸ ಪ್ರಯೋಗ..!
ಧರ್ಮಸ್ಥಳ ಪ್ರಕರಣದಲ್ಲಿ ಸಂಸದ ಸಸಿಕಾಂತ್ ಸೆಂಥಿಲ್ ಹೆಸರೂ ಕೇಳಿಬಂದಿದೆ ಎಂದು ಶಾಸಕ ಭರತ್ ಶೆಟ್ಟಿ ಪ್ರಸ್ತಾಪಿಸಿದ್ದಾರೆ. ಸೆಂಥಿಲ್ ಅವರು ಸ್ಟಾಲಿನ್ ಅವರ ಮೆಸೆಂಜರ್ ಆಗಿದ್ದಾರೆ. ಅವರು ಹಿಂದೂ ಧರ್ಮದ ವಿರುದ್ಧ ಹಲವು ಕಡೆ ಭಾಷಣ ಮಾಡಿದ್ದಾರೆ. ಧರ್ಮಸ್ಥಳ ವಿಚಾರದಲ್ಲೂ ಅವರ ಪಾತ್ರ ಇರಬಹುದು ಎಂಬ ಅನುಮಾನವಿದೆ. ಎನ್ಐಎ ತನಿಖೆ ನಡೆದರೆ ಈ ವಿಚಾರವನ್ನೂ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.JUNEBERRY® 100% Pure Cotton Oversized Loose Baggy Fit Drop Shoulder Half Sleeve Round Neck Cool Front Teddy Printed Cork & White T-Shirt for Women/Girls (Available in from S to 2XL)