ಅಮೆರಿಕಾದ ರೊಡ್ ಐಲೆಂಡ್ನ ಪ್ರಾವಿಡೆನ್ಸ್ ಮುನ್ಸಿಪಲ್ ಕೋರ್ಟ್ನ ಮಾಜಿ ಮುಖ್ಯ ನ್ಯಾಯಾಧೀಶರಾಗಿದ್ದ ಫ್ರಾಂಕ್ ಕ್ಯಾಪ್ರಿಯೋ, ತಮ್ಮ ಕರುಣಾಮಯಿ ಮತ್ತು ಮಾನವೀಯ ವಿಧಾನದಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ "ಪ್ರೀತಿಯ ಜಡ್ಜ್" ಎಂದೇ ಖ್ಯಾತರಾಗಿದ್ದರು. 2023ರಲ್ಲಿ ಅವರಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು, ಮತ್ತು ಈ ಕಾಯಿಲೆಯ ವಿರುದ್ಧ ಸುದೀರ್ಘ ಹೋರಾಟದ ನಂತರ, 2025ರ ಆಗಸ್ಟ್ 19 ರಂದು ಮರಣಹೊಂದಿದ್ದಾರೆ. ಫ್ರಾಂಕ್ ಕ್ಯಾಪ್ರಿಯೋ ಅವರು ತಮ್ಮ ದಯಾಳುತನ ಮತ್ತು ನ್ಯಾಯಾಲಯದಲ್ಲಿ ತೋರಿದ ಮಾನವೀಯತೆಯಿಂದಾಗಿ ವಿಶ್ವಾದ್ಯಂತ ಲಕ್ಷಾಂತರ ಜನರ ಹೃದಯ ಗೆದ್ದಿದ್ದರು.
ಅವರ ಕೋರ್ಟ್ರೂಮ್ ಕಾರ್ಯಕ್ರಮ "ಕ್ಯಾಟ್ ಇನ್ ದಿ ಆಕ್ಟ್" ಯೂಟ್ಯೂಬ್ನಲ್ಲಿ ಜನಪ್ರಿಯವಾಗಿತ್ತು, ಅಲ್ಲಿ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ, ಮಕ್ಕಳಿಗೆ ಮತ್ತು ತಪ್ಪಿತಸ್ಥರಿಗೆ ಕರುಣೆ ತೋರಿ, ಅವರ ಕಥೆಗಳನ್ನು ಆಲಿಸಿ, ಸೂಕ್ತ ತೀರ್ಪುಗಳನ್ನು ನೀಡುತ್ತಿದ್ದರು. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಅವರನ್ನು ಜಾಗತಿಕವಾಗಿ ಗುರುತಿಸುವಂತೆ ಮಾಡಿದವು. 2022ರ ಕೊನೆಯಲ್ಲಿ ಕ್ಯಾಪ್ರಿಯೋ ಅವರಿಗೆ ಕ್ಯಾನ್ಸರ್ ಇರುವುದು ಕಂಡುಬಂದಿತು, ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ತಾವೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಅವರು, "ನಾನು ಈ ಕಾಯಿಲೆಯನ್ನು ಎದುರಿಸಲು ಸಿದ್ಧನಿದ್ದೇನೆ, ಮತ್ತು ನಿಮ್ಮ ಪ್ರಾರ್ಥನೆಗಳು ನನಗೆ ಶಕ್ತಿ ನೀಡುತ್ತವೆ" ಎಂದು ಭಾವುಕ ಸಂದೇಶವನ್ನು ನೀಡಿದ್ದರು.
ಇದನ್ನೂ ಓದಿ: ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ:ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿ ಬಂಧನ..!
ಆದರೆ, ಚಿಕಿತ್ಸೆಯ ಹೊರೆತಾಗಿಯೂ, ಕ್ಯಾನ್ಸರ್ನಿಂದ ಉಂಟಾದ ಸಂಕೀರ್ಣತೆಗಳಿಂದಾಗಿ ಅವರು 88 ವರ್ಷ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಕ್ಯಾಪ್ರಿಯೋ ಅವರ ನಿಧನದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆಗೆ ಕಾರಣವಾಯಿತು. ಅವರ ಅಭಿಮಾನಿಗಳು, "ನಾವು ಒಬ್ಬ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ," "ಅವರ ಕರುಣಾಮಯಿ ತೀರ್ಪುಗಳು ಎಂದಿಗೂ ಮರೆಯಲಾಗದು" ಎಂದು ಭಾವುಕವಾಗಿ ಬರೆದಿದ್ದಾರೆ. ಅನೇಕರು ಅವರ ಕೋರ್ಟ್ರೂಮ್ ವಿಡಿಯೋಗಳನ್ನು ಮತ್ತೆ ಹಂಚಿಕೊಂಡು, ಅವರ ಒಳ್ಳೆಯ ಕಾರ್ಯಗಳನ್ನು ಸ್ಮರಿಸಿದ್ದಾರೆ.
Bata Women's Block Heel Sandal
ಫ್ರಾಂಕ್ ಕ್ಯಾಪ್ರಿಯೋ ಅವರು 30 ವರ್ಷಗಳಿಗೂ ಹೆಚ್ಚು ಕಾಲ ಪ್ರಾವಿಡೆನ್ಸ್ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ಅವರ ವಿಶಿಷ್ಟ ಶೈಲಿಯ ತೀರ್ಪುಗಳು, ಕಾನೂನಿನ ಚೌಕಟ್ಟಿನೊಳಗೆ ಮಾನವೀಯ ಮೌಲ್ಯಗಳನ್ನು ಒತ್ತಿನೀಡುವುದರಿಂದ, ಅವರನ್ನು ಜನಸಾಮಾನ್ಯರಿಗೆ ಹತ್ತಿರವಾಗಿಸಿತು. ಅವರು ಸ್ಥಾಪಿಸಿದ್ದ "ಫಿಲಿಯಾನಾ’ಸ್ ಫಂಡ್" ಚಾರಿಟಿಯ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಿದ್ದರು.