ಆರ್ಯನ್ ಖಾನ್ ನಿರ್ದೇಶನದ ಮೊದಲ ಚಿತ್ರ 'ಬಾ***ಡ್ಸ್ ಆಫ್ ಬಾಲಿವುಡ್' ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿದೆ. ಮುಂಬೈನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಬುಧವಾರ ಬಿಡುಗಡೆಯಾದ ಈ ಟ್ರೇಲರ್, ಶಾರುಖ್ ಖಾನ್ ಅವರ ಧ್ವನಿಯಲ್ಲಿ ಲಕ್ಷ್ಯ ಅವರನ್ನು ಆಸ್ಮಾನ್ ಸಿಂಗ್ ಆಗಿ ಕನಸಿನ ನಗರದಲ್ಲಿ ಪರಿಚಯಿಸುತ್ತದೆ.
ಟ್ರೇಲರ್‌ನ ಅಂತ್ಯವು ನೆಟಿಜನ್‌ಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಅಲ್ಲಿ ಲಕ್ಷ್ಯ ಜೈಲಿನಿಂದ ಹೊರಬರುವ ದೃಶ್ಯವಿದ್ದು, "ಜೈಲಿಗೆ ಹೋದ ನಂತರ ಜನರು ಹೆಚ್ಚು ಪ್ರಸಿದ್ಧರಾಗುತ್ತಾರೆ" ಎಂದು ಹೇಳುತ್ತಾನೆ. ಈ ಸಂಭಾಷಣೆ ಆರ್ಯನ್ ಖಾನ್ ತಮ್ಮ ಜೈಲುವಾಸದ ಬಗ್ಗೆ ಹಾಸ್ಯ ಮಾಡಿದ್ದಾರೆ ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
2021ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿತ್ತು. ಮುಂಬೈ ಕರಾವಳಿಯ ಐಷಾರಾಮಿ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದಾಗ ಅವರನ್ನು ಮಾದಕ ದ್ರವ್ಯ ಸೇವನೆ, ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿತ್ತು. ಆರ್ಥರ್ ರಸ್ತೆ ಜೈಲಿನಲ್ಲಿ 28 ದಿನಗಳ ಕಾಲ ಕಳೆದ ನಂತರ, ಅಕ್ಟೋಬರ್ 28, 2021ರಂದು ಬಾಂಬೆ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು.
ಬಾಕ್ಸ್ ಆಫೀಸ್‌ನಲ್ಲಿ ಹೈ ಸ್ಪೀಡ್ ತಲುಪಿದ 'ಸೂಪರ್ ಮ್ಯಾನ್'! ಈ ದಾಖಲೆಗೆ $2 ಮಿಲಿಯನ್ ಬೇಕು!
ಜೈಲಿನಲ್ಲಿದ್ದಾಗ, ಆರ್ಯನ್ ಪರ ವಕೀಲರು ಅವರ ಬಳಿ ಯಾವುದೇ ಮಾದಕ ದ್ರವ್ಯ ಪತ್ತೆಯಾಗಿಲ್ಲ ಮತ್ತು ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ವಾದಿಸಿದ್ದರು. ಆರ್ಯನ್ ಖಾನ್ ಅವರು ನಟನಾ ಕ್ಷೇತ್ರಕ್ಕೆ ಹೊಸಬರೇನಲ್ಲ; 'ಕಭಿ ಖುಷಿ ಕಭಿ ಗಮ್' ಚಿತ್ರದಲ್ಲಿ ಬಾಲ ಕಲಾವಿದರಾಗಿ ಕಾಣಿಸಿಕೊಂಡಿದ್ದರು.
ಇದಲ್ಲದೆ, 2019ರಲ್ಲಿ ಡಿಸ್ನಿಯ 'ದಿ ಲಯನ್ ಕಿಂಗ್' ಚಿತ್ರದ ಹಿಂದಿ ಆವೃತ್ತಿಯಲ್ಲಿ ಸಿಂಬಾಗೆ ಧ್ವನಿ ನೀಡುವ ಮೂಲಕ ಮೆಚ್ಚುಗೆ ಪಡೆದಿದ್ದರು. ಅವರು ಪ್ರತಿಷ್ಠಿತ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು, 'ಝೀರೋ' ನಂತಹ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.