ಬೆಂಗಳೂರು – ಧರ್ಮಸ್ಥಳಕ್ಕೆ ಹೋದ ನನ್ನ ಮಗಳು ಅನನ್ಯ ಭಟ್ ಕಾಣೆಯಾದಳು – ಅವಳ ಅಸ್ಥಿ ಕೊಡಿ ಎಂದು ಧರ್ಮಸ್ಥಳ (DHARMASTHALA) ಠಾಣೆ ಮೆಟ್ಟಿಲು ಹತ್ತಿ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಸುಜಾತ್ ಭಟ್ ಯೂಟರ್ನ್ ಹೊಡೆದಿದ್ದಾರೆ.
INSIGHTRUSH MEDIA EXCLUSIVE ಆಗಿ ಮಾತನಾಡಿರುವ ಸುಜಾತ ಭಟ್, ನನಗೆ ಮಗಳೇ ಇಲ್ಲ. ನಾನು ನನ್ನ ತಪ್ಪು ಒಪ್ಪಿಗೆ ಮಾಡಿಕೊಳ್ಳುತ್ತಿದ್ದಿನಿ. ಈ ಕೇಸ್ ನಲ್ಲಿ ನಾನು ಸುಳ್ಳು ಮಾಹಿತಿ ಕೊಟ್ಟಿದಕ್ಕೆ ನನ್ನ ವಯಸ್ಸು ಪರಿಗಣಿಸಿ ಕೂಡಲೇ ಕಾನೂನು ವಿನಾಯಿತಿ ಕೊಡಿ ಎಂದು ಮನವಿ ಮಾಡಿದ್ದಾರೆ ಸುಜಾತ ಭಟ್.
ನನ್ನ ಮಗಳ ಅಸ್ಥಿಪಂಜರ ಕೊಡು ಎಂದು ನಾನು ಎಲ್ಲೂ ಹೇಳಿಕೆ ಕೊಟ್ಟಿಲ್ಲ. ಎಸ್ ಐಟಿ (SIT) ಗೂ ನಾನು ಈವರೆಗೂ ಹೇಳಿಕೆ ಕೊಟ್ಟಿಲ್ಲ. ಗಿರೀಶ್ ಮಟ್ಟನ್ನವರ್ ನನಗೆ ಸುಳ್ಳು ಹೇಳಲು ಹೇಳಿ ಕೊಟ್ಟರು. ಹಿಂದೂ ಸನಾತನ (SANATHANA) ಧರ್ಮದ ಪ್ರಕಾರ ಅಸ್ಥಿ ಕೇಳು ಎಂದು ಹೇಳಿ ಕೊಟ್ಟರು. ಇವರೆಲ್ಲ ನನ್ನ ಮನೆಯನ್ನ ಹುಡುಕಿಕೊಂಡು ಬಂದರು. ಅವರ ಒತ್ತಡಕ್ಕೆ ಮಣಿದು ನಾನು ಸುಳ್ಳು ಹೇಳಿದೆ . ನನ್ನದು ತಪ್ಪಾಗಿದೆ. ಈಗ ಎಲ್ಲ ಕಡೆ ನನ್ನ ತೇಜೋವಧೆ ಆಗಿದೆ. ನನ್ನ ಕ್ಯಾರೆಕ್ಟರ್ ಬಗ್ಗೆಯೇ ತಪ್ಪಾಗಿಯೇ ಹೇಳಲಾಗುತ್ತಿದೆ. ಇದು ಬೇಸರ ತಂದಿದೆ. ನನ್ನ ಬಿಟ್ಟು ಬಿಡಿ ಎಂದು ಈಗ ಗೋಗರೆಯುತ್ತಿರುವ ಸುಜಾತ ಭಟ್.
ನನ್ನ ಪಿತ್ರಾರ್ಜಿತ ಆಸ್ತಿಯನ್ನ ನನ್ನ ಅನುಮತಿ ಇಲ್ಲದೇ ನನ್ನ ಸಹೋದರ ಧರ್ಮಸ್ಥಳಕ್ಕೆ ಕೊಟ್ಟ. ಇದಕ್ಕೆ ಕೋಪ ಬಂತು. ಹೀಗಾಗಿ ನಾನು ಧರ್ಮಸ್ಥಳದ ವಿಚಾರವಾಗಿ ಸುಳ್ಳು ಹೇಳಿಕೆ ಕೊಟ್ಟೆ.
ಕ್ಷಮೆಯಾಚಿಸಿದ ಸುಜಾತ ಭಟ್
ದೇಶದ ಜನರು, ಧರ್ಮಸ್ಥಳ, ಭಕ್ತರ ಕ್ಷಮೆಯಾಚಿಸಿದ ಸುಜಾತ ಭಟ್. ತಾವು ಜನರ ನಂಬಿಕೆಯನ್ನ ದುರುಪಯೋಗಪಡಿಸಿದಕ್ಕೆ ಕ್ಷಮೆ ಕೋರಿದರು.
ಸಂದರ್ಶನದ ಸಾರಾಂಶ
ಅನನ್ಯ ಭಟ್ ನನ್ನ ಮಗಳು ಅನ್ನುವ ಕಥೆಯೇ ಸುಳ್ಳು. ಅನನ್ಯ ಭಟ್ ಎನ್ನುವ ಮಗಳೇ ಇರಲಿಲ್ಲ.
ಕೆಲವು ವ್ಯಕ್ತಿಗಳು ಹೇಳು ಅಂತಾ ಹೇಳಿದಕ್ಕೆ ಈ ಪರಿಸ್ಥಿತಿ ನನಗೆ ಬಂತು. ಈ ರೀತಿ ಸುಳ್ಳು ಹೇಳಲು
ಗಿರೀಶ್ ಮಟ್ಟಣ್ಣನವರ್, ಜಯಂತ್. ಟಿ, ಹೇಳಿದಕ್ಕೆ ನಾನು ರೀತಿ ಸುಳ್ಳು ಹೇಳಿದೆ ಎಂದು ಸುಜಾತ್ ಭಟ್ ಆರೋಪಿಸಿದರು.
ಆಸ್ತಿ ತಂದ ದುರ್ಬುದ್ಧಿ
ನನಗೆ ಆಸ್ತಿ ಸಮಸ್ಯೆ ಇತ್ತು, ನಾನು ಸುಳ್ಳು ಹೇಳಿದೆ. ನಾನು ದುಡ್ಡಿಗಾಗಿ ಈ ಕೆಲಸ ಮಾಡಿಲ್ಲ. ನನ್ನ ಆಸ್ತಿ ಸಹಿ ಇಲ್ಲದೇ ಧರ್ಮಸ್ಥಳಕ್ಕೆ ಕೊಟ್ಟಿದಕ್ಕೆ ನನಗೆ ಕೋಪ ಬಂತು. ನನ್ನ ತಾತಾನ ಆಸ್ತಿ ಮೊಮ್ಮಗಳಾದ ನನ್ನಕೇಳದೇ ದಾನ ಮಾಡಿದಕ್ಕೆ ಕೋಪ ಬಂತು. ನನ್ನ ಹಕ್ಕು ಕಿತ್ತುಕೊಂಡಿದಕ್ಕೆ ಹೀಗೆ ಮಾಡಿದೆ.
ಫೇಕ್ ಫೇಕ್ ಫೇಕ್
ಫೊಟೋ ರಿಲೀಸ್ ಮಾಡಿದ್ದು ಫೇಕ್. ನಾನು ಹೇಳಿದ ಎಲ್ಲ ಕಥೆಗಳು ಫೇಕ್. ನನ್ನ ಪ್ರವೋಕ್ ಮಾಡಿಸಿ ಹೀಗೆಲ್ಲ ಮಾಡಿಸಿದರು. ನನ್ನ ಆಸ್ತಿಗೆ ಸಹಿ ಕೇಳಲಿಲ್ಲ ಇದಕ್ಕಾಗಿಯೇ ಷಡ್ಯಂತ್ರ ಮಾಡಿದೆ.
ಧರ್ಮಸ್ಥಳದ ಮೇಲೆ ಕೋಪವ್ಯಾಕೆ
ಧರ್ಮಸ್ಥಳ ಹಿಂದೂಗಳದು, ಅದು ಜೈನ ಸಂಪ್ರದಾಯದಲ್ಲಿ ನಡೆಯುತ್ತಿರುವದು ಯಾಕೆ? ಇದು ನನಗೆ ಇಷ್ಟ ಆಗಲಿಲ್ಲ. ಈ ದೇವಸ್ಥಾನ ಟ್ರಸ್ಟ್‌ಗೆ ಕೊಡಿ?!
ಧರ್ಮಸ್ಥಳ ಜನರ ಭಾವನೆಗೆ ಧಕ್ಕೆ ತರುವಂತೆ ನನ್ನ ಪ್ರವೋಕ್ ಮಾಡಿದರು. ಧರ್ಮಸ್ಥಳದ ಡ್ರಾಮದಲ್ಲಿ ಇನ್ನು ನಾನಿಲ್ಲ. ಧರ್ಮಸ್ಥಳ ದೇವರು, ವಿರೇಂದ್ರ ಹೆಗ್ಡೆ ಅವರನ್ನ ನಾನು ಎಲ್ಲೂ ಬೆಟ್ಟು ಮಾಡಿ ತೋರಿಸಿಲ್ಲ. ಆಸ್ತಿಗೋಸ್ಕರ ಅನನ್ಯ ಭಟ್ ಕಥೆ ಕಟ್ಟಿದ್ದಿನಿ.
ದುಡ್ಡಿನ ಆಸೆ ನನಗಿಲ್ಲ
ನನಗೆ ದುಡ್ಡಿನ ಅವಶ್ಯತೆ ಇಲ್ಲ. ನಾನು ದುಡಿದು ಬದುಕುತ್ತಿನಿ. ಭಿಕ್ಷೆ ಎತ್ತಿಲ್ಲ. ಸ್ವತಃ ನಾನು ಸ್ವಾಭಿಮಾನಿ. ಲೀವಿಂಗ್ ಟು ಗೆದರ್ ನಲ್ಲಿ ಇದ್ದಾಗ ನಾನು ಅವರನ್ನ ದುಡಿದು ಸಾಕಿದ್ದಿನಿ.